"ನೀರ್ ದೋಸೆ"ಗಿಲ್ಲ ಭಾರತ್ ಬಂದ್ ಬಿಸಿ; ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದ ಹರಿಪ್ರಿಯ
ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್, ಶುಕ್ರವಾರ ಬಿಡುಗಡೆಯಾದ ಬಹು ನಿರೀಕ್ಷಿತ ಚಿತ್ರ "ನೀರ್ ದೋಸೆ" ಮೇಲೆ ಯಾವುದೇ ರೀತಿಯ ಪರಿಣಾಮ ಉಂಟುಮಾಡಿಲ್ಲ.

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್, ಶುಕ್ರವಾರ ಬಿಡುಗಡೆಯಾದ ಬಹು ನಿರೀಕ್ಷಿತ ಚಿತ್ರ "ನೀರ್ ದೋಸೆ" ಮೇಲೆ ಯಾವುದೇ ರೀತಿಯ ಪರಿಣಾಮ ಉಂಟುಮಾಡಿಲ್ಲ.
ಭಾರತ್ ಬಂದ್ ಬಿಸಿ ನಡುವೆಯೇ ಜಗ್ಗೇಶ್, ಹರಿಪ್ರಿಯ ಹಾಗೂ ಸುಮನ್ ರಂಗನಾಥ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನೀರ್ ದೋಸೆ ಇಂದು ಬಿಡುಗಡೆಯಾಗಿದ್ದು, ಮೇನಕಾ ಚಿತ್ರ ಮಂದಿರ ಸೇರಿದಂತೆ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಿದೆ. ಬಂದ್ ನಿಂದಾಗಿ ಸರ್ಕಾರಿ ಸಾರಿಗೆ ಬಸ್ ಸೇವೆ ಸ್ಥಗಿತಗೊಂಡಿದ್ದರೂ ಚಿತ್ರಕ್ಕೆ ಪ್ರೇಕ್ಷಕರ ಅಭಾವ ಎದುರಾಗಿಲ್ಲ. ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ ಪ್ರೇಕ್ಷಕರು ಅಪಾರ ಪ್ರಮಾಣದಲ್ಲಿ ಚಿತ್ರ ವೀಕ್ಷಣೆಗೆ ಆಗಮಿಸಿದ್ದು, ಬೆಳಗ್ಗೆ 10.30ಕ್ಕೆ ಚಿತ್ರ ಪ್ರದರ್ಶನ ಆರಂಭವಾಗಿದೆ.
ಭಾರತ್ ಬಂದ್ ಇರುವ ಹಿನ್ನಲೆಯಲ್ಲಿ ಇಂದು ಬೆಳಗಿನ ಹಾಗೂ ಮಧ್ಯಾಹ್ನದ ಪ್ರದರ್ಶನ ರದ್ದುಗೊಂಡಿದೆ ಎಂಬ ಊಹಾಪೋಹಗಳು ಸುಳಿದಾಡಿತ್ತಾದರೂ, ನಿಗದಿಯಂತೆಯೇ ಚಿತ್ರ ಇಂದು ಬಿಡುಗಡೆಯಾಗಿ 10.30ಕ್ಕೆ ಮೊದಲ ಪ್ರದರ್ಶನ ಆರಂಭವಾಗಿದೆ. ಇನ್ನು ಮೊದಲ ಪ್ರದರ್ಶನಕ್ಕೆ ಚಿತ್ರ ನಟಿ ಹರಿಪ್ರಿಯ ಅವರು ಪಾಲ್ಗೊಂಡಿದ್ದು, ತಮ್ಮ ಸ್ನೇಹಿತರೊಂದಿಗೆ ಮೇನಕಾ ಚಿತ್ರ ಮಂದಿರಕ್ಕೆ ಆಗಮಿಸಿ ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಅಂತೆಯೇ ಬಂದ್ ನಡುವೆಯೂ ತಮ್ಮ ಚಿತ್ರಕ್ಕೆ ಅಪಾರ ಪ್ರಮಾಣದಲ್ಲಿ ಪ್ರೇಕ್ಷಕರು ಆಗಮಿಸಿರುವುದರಿಂದ ಹರಿಪ್ರಿಯಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ನೀರ್ ದೊಸೆಯೊಂದಿಗೆ ಇಂದು ಒಟ್ಟು 8 ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದು, ವಿವಿಧ ಚಿತ್ರ ಮಂದಿರಗಳಲ್ಲಿ "ಜಿಲ್ ಜಿಲ್", "ಅವಧಿ", "ಕೆಂಪಮ್ಮನ ಕೋರ್ಟ್ ಕೇಸ್", "ಬಬ್ಲುಷ", "ಸೆಲ್ಫಿ", "ಪ್ರೇಮಗೀಮ ಜಾನೇದೋ" ಹಾಗೂ "ಸಿಕ್ಕಾಪಟ್ಟೆ ಇಷ್ಟಾಪಟ್ಟೆ" ಚಿತ್ರಗಳು ತೆರೆಕಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


