ಅಂತು ಇಂತೂ ಸಿಲಿಕಾನ್ ಸಿಟಿಗೆ ಕೊನೆಗೂ ಬಂತು 500 ರು ಹೊಸ ನೋಟು
ಹಲವು ದಿನಗಳಿಂದ 500 ರು ಹೊಸ ನೋಟಿಗೆ ಕಾಯುತ್ತಿದ್ದ ರಾಜಧಾನಿ ಮಂದಿಗೆ ಸೋಮವಾರ 500 ರ ಹೊಸ ನೋಟಿನ ದರ್ಶನವಾಗಿದೆ.

ಬೆಂಗಳೂರು: ಹಲವು ದಿನಗಳಿಂದ 500 ರು ಹೊಸ ನೋಟಿಗೆ ಕಾಯುತ್ತಿದ್ದ ರಾಜಧಾನಿ ಮಂದಿಗೆ ಸೋಮವಾರ 500 ರ ಹೊಸ ನೋಟಿನ ದರ್ಶನವಾಗಿದೆ.
ಹೊಸ ನೋಟುಗಳನ್ನು ಮೊದಲಿಗೆ ನಗರ ಪ್ರದೇಶಗಳಿಗೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿಗರಿಗೆ 500 ರು ಮುಖಬೆಲೆಯ ನೋಟುಗಳು ಸಿಕ್ಕಿವೆ. ಹೀಗಾಗಿ ಜನ ಖುಷಿಯಾಗಿದ್ದಾರೆ, ಆದರೆ ಗ್ರಾಮೀಣ ಭಾಗದ ಜನರು ಹೊಸ ನೋಟುಗಳನ್ನು ನೋಡಲು ಮತ್ತಷ್ಟು ದಿವಸ ಕಾಯಬೇಕಾಗಿದೆ.
ಸೋಮವಾರ ಬೆಳಗ್ಗೆಯಿಂದಲೇ ನಗರದ ಎಲ್ಲಾ ಎಟಿಎಂಗಳಲ್ಲೂ 500 ರು ಮುಖಬೆಲೆಯ ಹೊಸ ನೋಟುಗಳು ಸಿಗುತ್ತಿವೆ. ಹೊಸ ನೋಟುಗಳನ್ನು ವಿಮಾನದ ಮೂಲಕ ನಗರಗಳಿಗೆ ತಲುಪಿಸಲಾಗಿದೆ ಎಂಬ ಮಾಹಿತಿ ಬಂದಿದೆ ಎಂದು ರಾಜ್ಯ ಮಟ್ಟದ ಬ್ಯಾಂಕರ್ಸ್ ಕಮಿಟಿಯ ಸಂಚಾಲಕ ಮೋಹನ್ ರೆಡ್ಡಿ ಹೇಳಿದ್ದಾರೆ. ಬುಧವಾರ ಇಲ್ಲವೇ ಗುರುವಾರದೊಳಗೆ ದೇಶಾದ್ಯಂತ ಎಲ್ಲೆಡೆ ಹೊಸ 500 ರು ನೋಟುಗಳ ವಿನಿಮಯ ವಾಗಲಿದೆ ಎಂದು ಅವರು ಭರವಸೆ ವ್ಯಕ್ತ ಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಗಳ ಸರಿಯಾದ ಸೌಲಭ್ಯ ಇಲ್ಲದ ಕಾರಣ ನಿರ್ಧಿಷ್ಟ ಸಮಯದಲ್ಲಿ ಹಣ ಸಿಗುತ್ತಿಲ್ಲ, ಬ್ಯಾಂಕಿನ ಕೆಲವು ಪ್ರತಿನಿಧಿಗಳು ಹಣ ಡ್ರಾ ಮಾಡಿಕೊಂಡು ರೈತರ ಬಳಿ ಇರುವ ಹಳೆಯ ನೋಟು ಪಡೆದು ಹೊಸ ನೋಟುಗಳನ್ನು ವಿನಿಮಯ ಮಾಡುವ ಬ್ಯಾಂಕ್ ಮಿತ್ರ ಎಂಬ ಕಾರ್ಯಕ್ರಮದಡಿ ಕೆಲಸ ಮಾಡಬೇಕು. ಬ್ಯಾಂಕ್ ಪ್ರತಿನಿಧಿಗಳಿಗೆ ಪ್ರತಿದಿನ 50 ಸಾವಿರ ಹಣ ಡ್ರಾ ಮಾಡಿ ರೈತರಿಗೆ ನೀಡುವಂತ ಕೆಲಸ ಆಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಶೀಘ್ರವೇ ಎಲ್ಲಾ ಬ್ಯಾಂಕ್ ಗಳಲ್ಲಿ ಹಾಗೂ ಎಟಿಎಂ ಗಳಲ್ಲಿ ಹೊಸ ನೋಟು ಸಿಗುವಂತೆ ಮಾಡಲಾಗುತ್ತದೆ, ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಲಾಗಿದೆ. ಜೊತೆಗೆ ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದೆ ಇದ್ದ ಕ್ಯೂ ಕಡಿಮೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


