ರಾಜ್ಯ

ಮಾಸ್ತಿಗುಡಿ ದುರಂತ: ಮತ್ತೋರ್ವ ನಟ ಅನಿಲ್ ಮೃತ ದೇಹವೂ ಪತ್ತೆ!

ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಡ್ಯಾಂನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ನಟ ಅನಿಲ್ ಮೃತದೇಹ ಪತ್ತೆಯಾಗಿದ್ದು, ಡ್ಯಾಂ ಅವರಣದಲ್ಲಿಯೇ ಅನಿಲ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಮಾಸ್ತಿಗುಡಿ ದುರಂತ: ಮತ್ತೋರ್ವ ನಟ ಅನಿಲ್ ಮೃತ ದೇಹವೂ ಪತ್ತೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಡ್ಯಾಂನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ನಟ ಅನಿಲ್ ಮೃತದೇಹ ಪತ್ತೆಯಾಗಿದ್ದು, ಡ್ಯಾಂ ಅವರಣದಲ್ಲಿಯೇ ಅನಿಲ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ತಿಪ್ಪಂಗೊಂಡನಹಳ್ಳಿ ಡ್ಯಾಂ ಬಳಿಯಲ್ಲೇ ಅನಿಲ್ ಅವರ ಮೃತದೇಹ ಕೂಡ ಇಂದು ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ಅನಿಲ್ ಮೃತದೇಹವನ್ನು ಗುರುತಿಸಿ ಶವವನ್ನು  ದಡಕ್ಕೆ ಸೇರಿಸಿದ್ದಾರೆ. ಕೂಡಲೇ ಶವವನ್ನು ಇಳಿಸಿಕೊಂಡ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸುವ ಕುರಿತು ಚಿಂತನೆ ನಡೆಸುತ್ತಿದ್ದರಾದರೂ, ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ನಟ  ದುನಿಯಾ ವಿಜಯ್ ಅವರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಮನವಿ ಮಾಡಿದರು. ಈಗಾಗಲೇ ದೇಹ ಊದಿಕೊಂಡಿದ್ದು, ದೇಹದಿಂದ ದುರ್ವಾಸನೆ ಬರುತ್ತಿದೆ. ಹೀಗಾಗಿ ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಿ  ಅವರ ಕುಟುಂಬಸ್ಥರಿಗೆ ದೇಹ ರವಾನಿಸುವಂತೆ ಸಲಹೆ ನೀಡಿದರು.

ವಿಜಯ್ ಅವರ ಸಲಹೆ ಮೇರೆಗೆ ಸ್ಥಳದಲ್ಲಿ ಹಾಕಲಾಗಿರುವ ಪೆಂಡಾಲ್ ನಲ್ಲೇ ಅನಿಲ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಬಳಿಕ ಅನಿಲ್ ಮೃತ ದೇಹವನ್ನು ಬನಶಂಕರಿ 2ನೇ ಹಂತದಲ್ಲಿರುವ ಅವರ ನಿವಾಸಕ್ಕೆ ರವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.