ಸೀರೆ ಮಾರಿ ಮೋಸ ಮಾಡಿದ ಶೋರೂಮ್: ಕೊನೆಗೂ ಹೋರಾಟದಲ್ಲಿ ಗೆದ್ದ ಮಹಿಳೆ
ನಗರದ ಮಹಿಳೆಯೊಬ್ಬರಿಗೆ ಸಿಲ್ಕ್ ಸೀರೆ ಎಂದು ಸೀರೆಯನ್ನು ಮಾರಿ ಮೋಸ ಮಾಡಿದ ಶೋರೂಮ್ ಗೆ ಕೊನೆಗೂ ಮಹಿಳೆ ತಕ್ಕ ಪಾಠವನ್ನು ಕಲಿಸಿರುವ ಘಟನೆ ನಡೆದಿದೆ...

ಬೆಂಗಳೂರು: ನಗರದ ಮಹಿಳೆಯೊಬ್ಬರಿಗೆ ಸಿಲ್ಕ್ ಸೀರೆ ಎಂದು ಸೀರೆಯನ್ನು ಮಾರಿ ಮೋಸ ಮಾಡಿದ ಶೋರೂಮ್ ಗೆ ಕೊನೆಗೂ ಮಹಿಳೆ ತಕ್ಕ ಪಾಠವನ್ನು ಕಲಿಸಿರುವ ಘಟನೆ ನಡೆದಿದೆ.
ಸುಮನಾ ಕೊಟ್ನಾಳಾ ಅವರು ಕೆಲವು ದಿನಗಳ ಹಿಂದೆ ಎಸ್ಎಂ ಸಿಲ್ಕ್ಸ್ ನಲ್ಲಿ ರು. 3.350ಕ್ಕೆ ಸಿಲ್ಕ್ ಸೀರೆಯೊಂದು ಕೊಂಡುಕೊಂಡಿದ್ದಾರೆ. ಇದರಂತೆ ಮಳೆಯಲ್ಲಿ ಸೀರೆ ನೆನೆಯುತ್ತಿದ್ದಂತೆ ಸೀರೆಯಲ್ಲಿ ಬಿಳಿ ಬಣ್ಣ ತೇಪೆಗಳಾಗಿರುವುದು ಕಂಡು ಬಂದಿದೆ. ಕೂಡಲೇ ಶೋರೂಮ್ ಹೋಗಿರುವ ಕೊಟ್ನಾಳಾ ಅವರು ಬೇರೆ ಸೀರೆ ಕೊಡಿ ಅಥವಾ ಹಣವನ್ನು ಹಿಂತಿರುಗಿಸುವಂತೆ ಹೇಳಿದ್ದಾರೆ.
ಆದರೆ, ಇದಕ್ಕೆ ಗರಂ ಆಗಿರುವ ಶೋರೂಮ್ ನವರು ಇದು ನಮ್ಮ ತಪ್ಪಲ್ಲ. ಉತ್ಪಾದನೆ ಮಾಡಿದ ಕಂಪನಿಯ ದೋಷ. ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಅಲ್ಲದೆ, ಒರಟಾಗಿ ಮಾತನಾಡಿದ್ದಾರೆ.
ಶೋರೂಮ್ ನ ಈ ಪ್ರತಿಕ್ರಿಯೆಗೆ ಕೋಪಗೊಂಡ ಸುಮನಾ ಕೊಟ್ನಾಳಾ ಅವರು ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಸೀರೆ ಮೇಲೆ ಕಲೆಗಳು ಕಾಣಿಸಿಕೊಂಡ ಕಾರಣ ಸೀರೆಯನ್ನು ಬದಲಿಸುವಂತೆ ಹೇಳಲಾಗಿತ್ತು. ಈ ವೇಳೆ ಶೋರೂಮ್ ನವರು ಒರಟಾಗಿ ಪ್ರತಿಕ್ರಿಯಿಸಿದ್ದರು. ಹೀಗಾಗಿ ಕಾನೂನೂ ಸಮರಕ್ಕೆ ಇಳಿದಿದ್ದೆವು ಎಂದು ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಸುಮನಾ ಅವರ ಪತಿ ಕೊಟ್ನಾಳ ಅವರು ಹೇಳಿದ್ದಾರೆ.
ಇದೊಂದು ಏಕಮುಖ ಹೋರಾಟವಾಗಿತ್ತು. ನೋಟಿಸ್ ಜಾರಿ ಮಾಡಿದ್ದರೂ ಸಹ ಶೋರೂಮ್ ವತಿಯಿಂದಾಗಲಿ ಅಥವಾ ಕಂಪನಿ ವತಿಯಿಂದಾಗಲಿ ಯಾರೊಬ್ಬರು ವಿಚಾರಣೆಗೆ ಹಾಜರಾಗಿರಲಿಲ್ಲ. ಪರಿಹಾರ ಪಡೆಯಲು 6 ತಿಂಗಳಿಂದಲೂ ಹೋರಾಟ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.
ಇದೀಗ ಕೊನೆಗೂ ದಂಪತಿಗಳ ಸಮಸ್ಯೆಯನ್ನು ಆಲಿಸಿರುವ ನ್ಯಾಯಾಲಯವು ಶೋರೂಮ್ ಗೆ ದಂಡವನ್ನು ವಿಧಿಸಿದ್ದು, ರು.3,350 ಸೀರೆಗೆ ಪರಿಹಾರ, ರು. 3000 ಮಾನಸಿಕ ತೊಂದರೆ, ಅವಮಾನ ಹಾಗೂ ರು. 2,500 ಮೊಕದ್ದಮೆಗೆ ಒಟ್ಟಾರೆಯಾಗಿ ರು.8,850 ದಂಡ ವಿಧಿಸಿದೆ.
ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನಮ್ಮ ಹೋರಾಟ ಕೇವಲ ಸೀರೆ ಪರಿಹಾರಕ್ಕಾಗಿ ಆಗಿರಲಿಲ್ಲ. ನಮಗೆ ಆದ ಅವಮಾನಕ್ಕೆ. ಗ್ರಾಹಕರಿಗೆ ಮೋಸ ಮಾಡುತ್ತಿರುವ ಕಂಪನಿಗೂ ದಂಡ ಹಾಕಬೇಕು ಎಂದು ಸುಮನಾ ಅವರ ಪತಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


