ಹಕ್ಕಿ ಜ್ವರ: 1.5 ಲಕ್ಷ ಕೋಳಿಗಳ ನಾಶಕ್ಕೆ ಕ್ರಮ
ಅಪಾಯಕಾರಿ ಹಕ್ಕಿ ಜ್ವರ ರಾಜ್ಯದ ಮೇಲೆ ಮತ್ತೆ ತನ್ನ ಕೆಂಗಣ್ಣು ಬೀರಿದ್ದು, ನಿನ್ನೆಯಷ್ಟೇ ಬೀದರ್ ನ ಕೋಳಿ ಫಾರಂ ಒಂದರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಸೋಂಕು ಪೀಡಿತ ಸುಮಾರು 1.5 ಲಕ್ಷ ಹಕ್ಕಿಗಳನ್ನು ವೈಜ್ಞಾನಿಕ ಪ್ರಕ್ರಿಯೆ ಮೂಲಕ ಕೊಲ್ಲಲು ನಿರ್ಧರಿಸಲಾಗಿದೆ..

ಬೀದರ್: ಅಪಾಯಕಾರಿ ಹಕ್ಕಿ ಜ್ವರ ರಾಜ್ಯದ ಮೇಲೆ ಮತ್ತೆ ತನ್ನ ಕೆಂಗಣ್ಣು ಬೀರಿದ್ದು, ನಿನ್ನೆಯಷ್ಟೇ ಬೀದರ್ ನ ಕೋಳಿ ಫಾರಂ ಒಂದರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಸೋಂಕು ಪೀಡಿತ ಸುಮಾರು 1.5 ಲಕ್ಷ ಹಕ್ಕಿಗಳನ್ನು ವೈಜ್ಞಾನಿಕ ಪ್ರಕ್ರಿಯೆ ಮೂಲಕ ಕೊಲ್ಲಲು ನಿರ್ಧರಿಸಲಾಗಿದೆ.
ಇನ್ನು ಬೀದರ್ ನಲ್ಲಿ ಹಕ್ಕಿ ಜ್ವರ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ನಿನ್ನೆ ಸಂಜೆಯಷ್ಟೇ ರಾಜ್ಯ ಪಶುಸಂಗೋಪನಾ ಸಚಿವ ಎ.ಮಂಜು ಅವರು, ತುರ್ತು ಉನ್ನತ ಮಟ್ಟದ ಸಭೆ ನಡೆಸಿ, ರಾಜ್ಯದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಸೋಂಕು ಇತರೆಡೆಗೆ ಹರಡದಂತೆ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು. ಅದರಂತೆ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಕೋಳಿಗಳು ಸೇರಿದಂತೆ ಸುಮಾರು 1.5 ಲಕ್ಷ ರೋಗ ಪೀಡಿತ ಹಕ್ಕಿಗಳನ್ನು ನಾಶಪಡಿಸಲು ಸೂಚನೆ ನೀಡಿದ್ದಾರೆ.
ರೋಗ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮತ್ತು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು. ಇದೀಗ ಸೋಂಕು ಕಾಣಿಸಿಕೊಂಡಿರುವ ಸುತ್ತಮುತ್ತಲಿನ ಪ್ರದೇಶದ ಕೋಳಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ನಾಶ ಪಡಿಸಲು ವೈದ್ಯಾಧಿಕಾರಿಗಳು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ ಬೀದರ್ ನ ಹುಮ್ನಾಬಾದ್ ನಲ್ಲಿರುವ ಮೆಳಕೇರಾ ಗ್ರಾಮದಲ್ಲಿನ ರಮೇಶ್ ಗುಪ್ತಾ ಅವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರದಿಂದಾಗಿ 20 ದಿನಗಳಲ್ಲಿ 35 ಸಾವಿರ ಕೋಳಿಗಳು ಸಾವಿಗೀಡಾಗಿವೆ. ಹೀಗಾಗಿ ಈ ಫಾರಂನಲ್ಲಿರುವ 1.5 ಲಕ್ಷ ಕೋಳಿಗಳನ್ನು ಹಾಗೂ ಆಸುಪಾಸಿನ 1 ಕಿ. ಮೀ ವ್ಯಾಪ್ತಿಯ ಫಾರಂಗಳಲ್ಲಿರುವ ಕೋಳಿಗಳನ್ನು ನಾಶಪಡಿಸುವಂತೆ ಪಶುಸಂಗೋಪನಾ ಇಲಾಖೆ ಸೂಚಿಸಿದೆ. ರಮೇಶ್ ಗುಪ್ತಾ ಅವರ ಕೋಳಿ ಫಾರಂನಲ್ಲಿನ ಸುಮಾರು 23 ಸಾವಿರ ಕೋಳಿಗಳು ಸೋಂಕಿನಿಂದ ನರಳುತ್ತಿವೆ. ಹೀಗಾಗಿ ಸೋಂಕು ಇತರೆ ಕೋಳಿಗಳಿಗೂ ಹರಡಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಕೋಳಿ ಫಾರಂ ಸುತ್ತಮುತ್ತಲಿನ ಸುಮಾರು 1.ಕಿ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ನಾಶಪಡಿಸುವಂತೆ ಸೂಚನೆ ನೀಡಲಾಗಿದೆ.
ಮಾಲೀಕರಿಗೆ ಪರಿಹಾರ
ಇದೇ ವೇಳೆ ಮೆಳಕೇರಾ ಫಾರಂ ಸುತ್ತಲಿನ 1.ಕಿ.ಮೀ ವ್ಯಾಪ್ತಿಯಲ್ಲಿ ಕೋಳಿಗಳನ್ನು ನಾಶಪಡಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಕೋಳಿಗಳ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ ಎಂದು ಪಶಸಂಗೋಪನಾ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


