ಪಶುಸಂಗೋಪನಾ ಇಲಾಖೆ

ಬೆಂಗಳೂರಿನ ಹೆಸರಘಟ್ಟದಲ್ಲಿ ಕೊಳವೆ ಬಾವಿ ಕಾರ್ಯ:, ವಾಣಿಜ್ಯ ಚಟುವಟಿಕೆಗೆ ದಾರಿ ಮಾಡಿಕೊಡುವ ಪ್ರಯತ್ನ ಎಂದು ಹೋರಾಟಗಾರರ ಕಳವಳ
ಜೀವ ವೈವಿಧ್ಯದಿಂದ ಕೂಡಿರುವ ಹೆಸರಘಟ್ಟದಲ್ಲಿ ಬೋರ್‌ವೆಲ್ ಕೊರೆಸುವ ಕೆಲಸವನ್ನು ಪಶುಸಂಗೋಪನಾ ಇಲಾಖೆ ಕೈಗೆತ್ತಿಕೊಂಡಿರುವುದಕ್ಕೆ ಪರಿಸರ ಸಂರಕ್ಷಣಾ ವಾದಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಹುಲ್ಲುಗಾವಲನ್ನು ವಾಣಿಜ್ಯೀಕರಣಗೊಳಿಸುವುದಕ್ಕೆ ನಾಂದಿಯಾಗಿದೆ ಎಂದು ಹೇಳಿದ್ದಾರೆ.

ಜೆಸಿಬಿ ಕೊರತೆ: ಸೋಂಕು ಪೀಡಿತ ಕೋಳಿ ನಾಶ ಮುಂದೂಡಿಕೆ
ಬೀದರ್ ಜಿಲ್ಲೆಯ ಹುಮ್ನಾಬಾದ್ ನ ಕೋಳಿ ಫಾರಂ ನ ಹಕ್ಕಿ ಜ್ವರ ಪೀಡಿತ ಸುಮಾರು 1.5 ಲಕ್ಷ ಕೋಳಿಗಳನ್ನು ನಾಶಪಡಿಸುವ ಕಾರ್ಯ ಮುಂದೂಡಲಾಗಿದ್ದು, ಜೆಸಿಬಿಗಳ ಕೊರತೆ ಮತ್ತು ಮಳೆಯಿಂದಾಗಿ ಕೋಳಿಗಳ ನಾಶ ಪ್ರಕ್ರಿಯೆನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಹಕ್ಕಿ ಜ್ವರ: 1.5 ಲಕ್ಷ ಕೋಳಿಗಳ ನಾಶಕ್ಕೆ ಕ್ರಮ
ಅಪಾಯಕಾರಿ ಹಕ್ಕಿ ಜ್ವರ ರಾಜ್ಯದ ಮೇಲೆ ಮತ್ತೆ ತನ್ನ ಕೆಂಗಣ್ಣು ಬೀರಿದ್ದು, ನಿನ್ನೆಯಷ್ಟೇ ಬೀದರ್ ನ ಕೋಳಿ ಫಾರಂ ಒಂದರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಸೋಂಕು ಪೀಡಿತ ಸುಮಾರು 1.5 ಲಕ್ಷ ಹಕ್ಕಿಗಳನ್ನು ವೈಜ್ಞಾನಿಕ ಪ್ರಕ್ರಿಯೆ ಮೂಲಕ ಕೊಲ್ಲಲು ನಿರ್ಧರಿಸಲಾಗಿದೆ..

ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಹಕ್ಕಿ ಜ್ವರ; ಬೀದರ್ ನಲ್ಲಿ ರೋಗಪತ್ತೆ
ಅಪಾಯಕಾರಿ ಹಕ್ಕಿ ಜ್ವರ ಮತ್ತೆ ರಾಜ್ಯಕ್ಕೆ ವಕ್ಕರಿಸಿದ್ದು, ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಅಧಿಕೃತವಾಗಿ ದೃಢಪಟ್ಟಿದೆ...

ಅಕ್ರಮ ಪತ್ತೆ ಹಚ್ಚಿದ ಅಧಿಕಾರಿಗೆ ಎತ್ತಂಗಡಿಯ ಉಡುಗೊರೆ
ಪಶುಸಂಗೋಪನಾ ಇಲಾಖೆಯಲ್ಲಿ ನೈಟ್ರೋಜನ್ ಗ್ಯಾಸ್ ಕಂಟೇನರ್ ಖರೀದಿಯಲ್ಲಿ ರು. 10 ಕೋಟಿಗೂ ಹೆಚ್ಚಿನ ಅಕ್ರಮ ನಡೆದಿದೆ....

