ರಾಜ್ಯ

ಸ್ನೇಹಿತರಿಗೆ ಜಾಮೀನು ಕೊಡಿಸಲು ಕಳ್ಳತನ ಹಾದಿ ಹಿಡಿದ 6 ಯುವಕರ ಬಂಧನ

ಕೊಲೆ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ನೇಹಿತರಿಗೆ ಜಾಮೀನು ಕೊಡಿಸಲು ಹೋಗಿ ಆರು ಯುವಕರು ಈಗ ಪೊಲೀಸರ ಅತಿಥಿ...

ಸ್ನೇಹಿತರಿಗೆ ಜಾಮೀನು ಕೊಡಿಸಲು ಕಳ್ಳತನ ಹಾದಿ ಹಿಡಿದ 6 ಯುವಕರ ಬಂಧನ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕೊಲೆ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ನೇಹಿತರಿಗೆ ಜಾಮೀನು ಕೊಡಿಸಲು ಹೋಗಿ ಆರು ಯುವಕರು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. 
ಸ್ನೇಹಿತರನ್ನು ಜಾಮೀನಿನ ಮೇಲೆ ಬಿಡಿಸಲು ಕಳ್ಳತನ ಮಾಡಲು ಹೋಗಿ ಪೊಲೀಸರ ಕೈಗೆ ಆರು ಯುವಕರು ಸಿಕ್ಕಿ ಬಿದಿದ್ದಾರೆ. ಲಾಲ್ ಬಾಗ್ ವೆಸ್ಟ್ ಗೇಟ್ ನಲ್ಲಿ ಬಸವನಗುಡಿ ಪೊಲೀಸರು ಆರು ಯುವಕರನ್ನು ಬಂಧಿಸಿದ್ದಾರೆ. 
ಆರ್ ವಿ ರಸ್ತೆಯಲ್ಲಿ ಮೆಟ್ರೋ ಕಾಮಾಗಾರಿ ನಡೆಯುತ್ತಿರುವ ಸ್ಥಳದಲ್ಲಿ ದರೋಡೆ ಮಾಡುತ್ತಿದ್ದ ವೇಳೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಕನಕಪುರ ನಿವಾಸಿಗಳಾದ ಬೈರಾಜು(27), ಕೆಂಪೇಗೌಡ(23), ಜೆಪಿನಗರದ ನಿವಾಸಿ ಮಹದೇವಸ್ವಾಮಿ(26), ಯಲಚೇನಹಳ್ಳಿ ನಿವಾಸಿಗಳಾದ ಗಂಗಾಧರ(24), ರಿಚರ್ಡ್(27) ಮತ್ತು ಗಣಪತಿಪುರದ ನಿವಾಸಿ(26) ಬಂಧಿತ ಆರೋಪಿಗಳು. 
ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೀರೇಶ್ವನಗರದಲ್ಲಿ ಮಾದೇಶ ಎಂಬುವವನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಕೆಲವು ಆರೋಪಿಗಳನ್ನು ಮಾತ್ರ ಬಂಧಿಸಲಾಗಿತ್ತು. ಇನ್ನು ಕೆಲವರು ತಲೆಮರೆಸಿಕೊಂಡಿದ್ದರು. ಅವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು. ಇನ್ನು ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸ್ನೇಹಿತರನ್ನು ಜಾಮೀನಿನ ಮೇಲೆ ಹೊರ ತರಲು ಹಣ ಬೇಕಾಗಿತ್ತು. ಇದಕ್ಕಾಗಿ ಈ ಆರು ಯುವಕರು ದರೋಡೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗುತ್ತಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಬಸವನಗುಡಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.