ರಾಜ್ಯ

ಹೈಕೋರ್ಟ್ ಅನುಮತಿ ಇಲ್ಲದೇ ಬಿಎಂಟಿಸಿ ಹೊಸ ಬಸ್ ಗಳನ್ನು ಖರೀದಿಸುವಂತಿಲ್ಲ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೊಸ ಡಿಸೇಲ್ ಬಸ್ ಗಳನ್ನು ಖರೀದಿಸುವುದಕ್ಕೂ ಮುನ್ನ ಹೈಕೋರ್ಟ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ.

ಹೈಕೋರ್ಟ್ ಅನುಮತಿ ಇಲ್ಲದೇ ಬಿಎಂಟಿಸಿ ಹೊಸ ಬಸ್ ಗಳನ್ನು ಖರೀದಿಸುವಂತಿಲ್ಲ!
ಬಿಎಂಟಿಸಿ
Published On :

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೊಸ ಡಿಸೇಲ್ ಬಸ್ ಗಳನ್ನು ಖರೀದಿಸುವುದಕ್ಕೂ ಮುನ್ನ ಹೈಕೋರ್ಟ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾ.ಆನಂದ್ ಭೈರಾರೆಡ್ಡಿ ಹಾಗೂ ನ್ಯಾ. ರವಿ ಮಾಲಿಮಠ್ ಅವರಿದ್ದ ರಜೆ ಕಾಲದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಹೊರಡಿಸಿದ್ದು, ಹೊಸ ಡಿಸೇಲ್ ಬಸ್ ಖರೀದಿಗೂ ಮುನ್ನ ಕೋರ್ಟ್ ನಿಂದ ಅನುಮತಿ ಪಡೆಯಬೇಕು ಎಂದು ಹೇಳಿದೆ. ಬೆಂಗಳೂರು ನಗರದಲ್ಲಿ ಅಥವಾ ನಗರದ ಮೂಲಕ ಸಂಚರಿಸುವ ಖಾಸಗಿ, ಬಿಎಂಟಿಸಿ ಬಸ್ ಗಳ ಇಂಧನವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಿಎನ್ ಜಿ ಅಥವಾ ಎಲ್ ಪಿಜಿ ಗೆ ಬದಲಾವಣೆಗೊಳಿಸಲು ಆದೇಶ ನೀಡಬೇಕೆಂದು ಕೋರಿ ವಕೀಲ ವಿನಯ್ ಶಿವಾನಂದ್ ನಾಯಕ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.  
ಅರ್ಜಿಯ ವಿಚಾರಣೆ ವೇಳೆ ಮಧ್ಯಂತರ ಆದೇಶ ನೀಡಿರುವ ವಿಭಾಗೀಯ ಪೀಠ, ಹೈಕೋರ್ಟ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬಿಎಂಟಿಸಿ ಹೊಸ ಡಿಸೇಲ್ ಬಸ್ ಗಳನ್ನು ಖರೀದಿಸುವಂತಿಲ್ಲ ಎಂದು ಹೇಳಿದೆ. ಅಲ್ಲದೇ ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆಯೂ ತಿಳಿಸಿದೆ. ಬಿಎಂಟಿಸಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದು ಹಲವು ಬಿಎಂಟಿಸಿ ಬಸ್ ಗಳು ಹಳೆಯದಾಗಿದ್ದು ಅವುಗಳನ್ನು ಬದಲಾವಣೆ ಮಾಡಲೇ ಬೇಕಾಗಿದೆ. ಆದರೆ ಬಸ್ ಗಳ ಇಂಧನವನ್ನು ಸಿಎನ್ ಜಿ ಗೆ ಬದಲಾವಣೆ ಮಾಡಲು ಔಟ್ ಲೆಟ್ ಗಳು ಕಡಿಮೆ ಇದೆ ಎಂದು ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜೂ ಗೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.