ಬಿಎಂಟಿಸಿ ಬಸ್ ಅಪಘಾತಗಳಿಗೆ ಯುವ ಚಾಲಕರೇ ಕಾರಣ!
ಅಪಘಾತಗಳಿಂದಾಗಿ ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿ ಗಳಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)...

Published On :
ಬೆಂಗಳೂರು: ಅಪಘಾತಗಳಿಂದಾಗಿ ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿ ಗಳಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್‌ಗಳ ಅಪಘಾತಗಳಿಗೆ ಹೆಚ್ಚು ಯುವ ಚಾಲಕರೇ ಕಾರಣ ಎಂಬ ಮಾಹಿತಿಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರ ವಿಧಾನ ಪರಿಷತ್‌ಗೆ ತಿಳಿಸಿದ್ದಾರೆ.
ಚಾಲಕರ ಅತಿ ವೇಗ ಹಾಗೂ ಅಜಾಗರೂಕತೆಯೇ ಅಪಘಾತಗಳಿಗೆ ಕಾರಣ ಎಂದಿರುವ ಸಚಿವರು, ಕಳೆದೊಂದು ವರ್ಷದಿಂದೀಚೆಗೆ ಬಿಎಂಟಿಸಿ ಅಪಘಾತದಿಂದ ೬೦ ಮಂದಿ ಮೃತಪಟ್ಟು, ೨೮೦ ಮಂದಿ ಗಾಯಗೊಂಡಿದ್ದಾರೆ ಎಂದು ವಿವರ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ವಿಮಲಾಗೌಡ ಅವರ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಬಿಎಂಟಿಸಿಯಲ್ಲಿ ಪರಿಣಿತ ಚಾಲಕರ ಕೊರತೆಯಿಲ್ಲ. ಆದರೆ ೨೫ರಿಂದ ೩೦ ವರ್ಷದ ಚಾಲಕರು ಅತಿ ವೇಗದಿಂದ ಬಸ್‌ಗಳನ್ನು ಓಡಿಸುವುದೇ ಅಪಘಾತಕ್ಕೆ ಕಾರಣ ಎಂದರು.
೨೦೧೪-೧೫ನೇ ಸಾಲಿನಲ್ಲಿ ಅಪಘಾತದಿಂದ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಸಂಸ್ಥೆ ಒಟ್ಟು ೧೩ ಲಕ್ಷ ರಪಾಯಿ ಪರಿಹಾರ ನೀಡಿದೆ. ಅಲ್ಲದೆ, ನ್ಯಾಯಾಲಯದಲ್ಲಿ ತೀರ್ಮಾನವಾಗಿರುವ ಮೃತಪಟ್ಟ ಹಾಗೂ ಗಾಯಗೊಂಡ ಪ್ರಕರಣಗಳಿಗೆ ೧೧.೫೦ ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಪರಿಹಾರವಾಗಿ ನೀಡಲಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಅಪಘಾತ ಕಡಿಮೆಯಾಗುತ್ತಿದ್ದು, ಚಾಲಕರುಗಳಿಗೆ ಸುರಕ್ಷತಾ ಚಾಲನೆ ಬಗ್ಗೆ ಅರಿವು ಹಾಗೂ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


