accidents

2024: ಮಾರಣಾಂತಿಕ ಅಪಘಾತಗಳ ಪ್ರಮಾಣ ಶೇ.1.26 ರಷ್ಟು ಕಡಿಮೆ- ಬೆಂಗಳೂರು ಟ್ರಾಫಿಕ್ ಪೊಲೀಸ್
2023ನೇ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಉಂಟಾದ ಮಾರಣಾಂತಿಕ ಅಪಘಾತಗಳು ಮತ್ತು ಸಾವುನೋವುಗಳ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಶೇ.70ರಷ್ಟು ರಸ್ತೆ ಅಪಘಾತಗಳು ರಾತ್ರಿ ವೇಳೆ ಸಂಭವಿಸುತ್ತವೆ: ಬೆಂಗಳೂರು ಡಿಸಿಪಿ ಶಿವಪ್ರಕಾಶ್ ದೇವರಾಜು
ಈ ವರ್ಷ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆದಿವೆ, ಇಲ್ಲಿ 224 ಅಪಘಾತಗಳು ದಾಖಲಾಗಿವೆ.

ಬೆಂಗಳೂರು ಗ್ರಾಮಾಂತರದಲ್ಲಿ ಈ ವರ್ಷ ಸಂಭವಿಸಿದ 441 ಅಪಘಾತ ಪ್ರಕರಣದಲ್ಲಿ 523 ಮಂದಿ ಸಾವು
ತಡರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನ ಅಪಘಾತ ಸಂಭವಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು, ಮೂವರಿಗೆ ಗಾಯ
ಬನ್ನೇರುಘಟ್ಟ ರಸ್ತೆಯ ಕರಿಯಪ್ಪಹಳ್ಳಿ ಜಂಕ್ಷನ್ ಬಳಿ ವೇಗವಾಗಿ ಬಂದ ಕಾರು ಕರಿಯಪ್ಪಹಳ್ಳಿ ನಿವಾಸಿ ಹಾಗೂ ಟ್ರ್ಯಾಕ್ಟರ್ ಚಾಲಕ ನಲವತ್ತು ವರ್ಷದ ಕುಮಾರ್ ಎಂಬುವವರಿಗೆ ಡಿಕ್ಕಿ ಹೊಡೆದಿದೆ.

ತಾಯಿ-ಮಗು ಸಾವು ಬಳಿಕವೂ ಎಚ್ಚೆತ್ತುಕೊಳ್ಳದ ಸರ್ಕಾರ: ನಗರದ ಹಲವೆಡೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ ವಿದ್ಯುತ್ ತಂತಿಗಳು!
ಇಂಟರ್ನೆಟ್ ಪೂರೈಕೆದಾರರು ಹಾಕಿರುವ ಆಪ್ಟಿಕಲ್ ಫೈಬರ್ ಕೇಬಲ್ಗಳು ಆಗಾಗ್ಗೆ ರಸ್ತೆ ಮತ್ತು ಫುಟ್ಪಾತ್'ಗಳ ಮೇಲೆ ಜೋತು ಬೀಳುತ್ತಿದ್ದು, ಇದರಿಂದ ಹಲವು ಪಾದಚಾರಿಗಳು ಗಾಯಗೊಳ್ಳುತ್ತಿದ್ದಾರೆ.

ಶೇ 60ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತಿವೆ: ನಿಮ್ಹಾನ್ಸ್ ಅಧ್ಯಯನ
ರಸ್ತೆ ಅಪಘಾತಗಳು ಮತ್ತು ನೀರಿನಲ್ಲಿ ಮುಳುಗಿ ಉಂಟಾಗುತ್ತಿರುವ ಸಾವುಗಳು ಮತ್ತು ಗಾಯಗಳು ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಡೆಸಿದ ಇತ್ತೀಚಿನ ಅಧ್ಯಯನವು ಶೇ 60 ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತಿವೆ ಎಂದು ತೋರಿಸಿದೆ.

ಅಪ್ರಾಪ್ತರಿಂದ ಆಗುವ ಅಪಘಾತಗಳಿಗೆ ವಾಹನ ಮಾಲೀಕರೆ ಪರಿಹಾರ ನೀಡಬೇಕು, ವಿಮಾ ಕಂಪನಿಯಲ್ಲ: High court
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಅಪಘಾತ ಉಂಟು ಮಾಡಿದರೆ ವಾಹನ ಮಾಲೀಕರು ಪರಿಹಾರ ನೀಡಬೇಕು ಹೊರತು ವಿಮಾ ಕಂಪನಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕೇವಲ ದಂಡ ವಿಧಿಸಿದರೆ ಅದು ರ್ಯಾಶ್ ಡ್ರೈವಿಂಗ್ ಉತ್ತೇಜಿಸಿದಂತಾಗುತ್ತದೆ: ಕರ್ನಾಟಕ ಹೈಕೋರ್ಟ್
ಅತೀ ವೇಗದ ಚಾಲನೆಯಿಂದಾಗಿ ಚಿಕ್ಕಮಗಳೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಕಾರು ಚಾಲಕ ಸಾವು ಮತ್ತು ಮೂವರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬ್ಯುಲೆನ್ಸ್ ಚಾಲಕನ ಆರು ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಅಪಘಾತ ಕಡಿಮೆ ಮಾಡಲು KSRTC ಕ್ರಮ: ಬಸ್ ಚಾಲನೆಗೂ ಮುನ್ನ ಚಾಲಕರಿಗೆ ಬ್ರೆತ್ಅಲೈಸರ್ ಪರೀಕ್ಷೆ ಕಡ್ಡಾಯ
ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಕಡ್ಡಾಯವಾಗಿ ಡಿಪೋಗಳಲ್ಲಿ ಬ್ರೆತ್ಅಲೈಸರ್ ಪರೀಕ್ಷೆಗೆ (ಉಸಿರು-ವಿಶ್ಲೇಷಕ ಪರೀಕ್ಷೆ) ಒಳಗಾಗಬೇಕಾಗುತ್ತದೆ ಮತ್ತು ಅದರಲ್ಲಿ ಯಶಸ್ವಿಯಾದ ನಂತರವೇ ಚಾಲನೆ ಮಾಡಲು ಅವಕಾಶ ನೀಡಲಾಗುತ್ತದೆ.

