ರಾಜ್ಯ

ಚೆನ್ನೈ ಮಾದರಿಯ ಪ್ರವಾಹ ಭೀತಿಯಲ್ಲಿ ಬೆಂಗಳೂರು

ನಿನ್ನೆ ಶುಕ್ರವಾರ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ, ನಂತರ ಉಂಟಾದ ಪ್ರವಾಹ ಕಳೆದ ವರ್ಷದ ಚೆನ್ನೈ ಪ್ರವಾಹವನ್ನು...

ಚೆನ್ನೈ ಮಾದರಿಯ ಪ್ರವಾಹ ಭೀತಿಯಲ್ಲಿ ಬೆಂಗಳೂರು
ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಪ್ರವಾಹ ಉಂಟಾಗಿ ಜನರ ಸಹಾಯಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ
Published On :
ಬೆಂಗಳೂರು: ನಿನ್ನೆ ಶುಕ್ರವಾರ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ, ನಂತರ ಉಂಟಾದ ಪ್ರವಾಹ ಕಳೆದ ವರ್ಷದ ಚೆನ್ನೈ ಪ್ರವಾಹವನ್ನು ನೆನಪಿಸುತ್ತಿತ್ತು. ಈಗ ನಗರ ನಿವಾಸಿಗಳೆಲ್ಲರಲ್ಲಿ ಒಂದೇ ಪ್ರಶ್ನೆ, '' ಕಳೆದ ವರ್ಷ ಚೆನ್ನೈಯಲ್ಲಿ ಆದಂತೆ ನಮ್ಮ ನಗರ ಕೂಡ ಪ್ರವಾಹಕ್ಕೆ ಮುಳುಗಡೆಯಾಗುವುದೇ? ಎಂದು ಬೆಂಗಳೂರಿನಲ್ಲಿ 5ರಿಂದ 8 ದಿನಗಳವರೆಗೆ ಅವ್ಯಾಹತವಾಗಿ ಮಳೆ ಬಿದ್ದರೆ ಚೆನ್ನೈಯ ಪರಿಸ್ಥಿತಿಯೇ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಕೆರೆ, ಸರೋವರಗಳ ಒತ್ತುವರಿ, ಮಳೆ ನೀರು ಚರಂಡಿಗಳ ಒತ್ತುವರಿ, ಮರಗಳನ್ನು ಅವ್ಯಾಹತವಾಗಿ ಕಡಿಯುವುದು, ಸರಿಯಾದ ನಗರ ಯೋಜನೆಯಿಲ್ಲದಿರುವುದೇ ಪ್ರವಾಹಕ್ಕೆ ಕಾರಣ ಎನ್ನುತ್ತಾರೆ ತಜ್ಞರು.
ಖ್ಯಾತ ಪರಿಸರವಾದಿ ಎ.ಎನ್.ಯಲ್ಲಪ್ಪ ರೆಡ್ಡಿ ಹೇಳುವ ಪ್ರಕಾರ, ರಾಜ್ಯ ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ಮತ್ತು ಇತರರು ತುಂಬಾ ತಪ್ಪು ಮಾಡುತ್ತಾರೆ. 30 ವರ್ಷಗಳ ಹಿಂದೆ ಮಳೆ ನೀರು ಮೋರಿಗಳ ಅಗಲವನ್ನು 70 ಅಡಿಯಿಂದ 5 ಅಡಿಯವರೆಗೆ ತಗ್ಗಿಸಲಾಗಿತ್ತು. ಹಾಗಾದಾಗ ನೀರು ಹರಿದು ಹೋಗುವುದು ಹೇಗೆ ಎಂದು ಕೇಳುತ್ತಾರೆ. 
ಹಿಂದೆ ಬೆಂಗಳೂರು ಒಣಭೂಮಿಯಾಗಿತ್ತು ಮತ್ತು ಅನೇಕ ಪ್ರದೇಶಗಳನ್ನು ಕೃಷಿಗಾಗಿ ಬಳಸಲಾಗುತ್ತಿತ್ತು. ಇಂದು ಶೇಕಡಾ 90ರಷ್ಟು ಜಮೀನನ್ನು ರಸ್ತೆ, ಕಟ್ಟಡಗಳು ಮತ್ತು ಕಾಲುದಾರಿಗಳಿಗಾಗಿ ಬಳಸಲಾಗುತ್ತಿದೆ.ನೀರು ಸರಿಯಾಗಿ ಹರಿದು ಹೋಗಲು ಸ್ಥಳವೇ ಇಲ್ಲ, ಕೆರೆಗಳ ಸಂಖ್ಯೆ ಕಡಿಮೆಯಾಗಿದೆ. ಸಹಜವಾಗಿ ಪ್ರವಾಹ ತಲೆದೋರುತ್ತದೆ ಎನ್ನುತ್ತಾರೆ ಅವರು.
ಇನ್ನೊಂದು ವಾರ ಬೆಂಗಳೂರಿನಲ್ಲಿ ಸತತ ಮಳೆ ಸುರಿದರೆ ಚೆನ್ನೈ ಪರಿಸ್ಥಿತಿ ಉಂಟಾಗಬಹುದು. ಪರಿಸ್ಥಿತಿ ಇನ್ನಷ್ಟು ಹದಗೆಡಲು ರಾಜ್ಯ ಸರ್ಕಾರ ಇತ್ತೀಚಿನ ಸಂಪುಟ ಸಭೆಯಲ್ಲಿ ನಗರದ ಪ್ರತಿ ಲೇ ಔಟ್ ಗಳಲ್ಲಿ ಪಾರ್ಕುಗಳ ಸಂಖ್ಯೆಯನ್ನು ಶೇಕಡಾ 15ಕ್ಕೆ ಕಡಿಮೆ ಮಾಡಲಾಗಿದೆ. ಇದು ನಿಜಕ್ಕೂ ತಪ್ಪು ನಿರ್ಧಾರ ಎಂದು ಅವರು ಹೇಳಿದರು.
ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ ಪರಿಸರ ವಿಜ್ಞಾನ ಕೇಂದ್ರದ ಪ್ರೊ ಟಿ.ವಿ. ರಾಮಚಂದ್ರ, ಇದು ಪಾಲಿಕೆ ಅಧಿಕಾರಿಗಳ ಅಸಮರ್ಪಕ ನಿರ್ವಹಣೆಯಿಂದ ಆಗುವ ಅನಾಹುತ. ಮೋರಿ ನೀರು, ಕೊಳ ಎಲ್ಲವನ್ನೂ ಅತಿಕ್ರಮಿಸುತ್ತಾರೆ. ಕೆರೆಗಳನ್ನು ಸರಿಯಾಗಿ ಅಂತರ ಜೋಡಿಸಿದರೆ, ಪ್ರವಾಹ ಉಂಟಾಗುವುದಿಲ್ಲ. ಚರಂಡಿ ನೀರು ಕೂಡ ಸಮರ್ಪಕವಾಗಿ ಹರಿದು ಹೋಗುವುದಿಲ್ಲ. ಕಳೆದ ವರ್ಷ ಚೆನ್ನೈ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿತ್ತು. ಕೆರೆಗಳು ಒಂದಕ್ಕೊಂದು ಜೋಡಿಕೆಯಾಗಿಲ್ಲ. ನೀರು ಪ್ರದೇಶದ ಸುತ್ತಮುತ್ತಲ ಪ್ರದೇಶಗಳನ್ನು ಅತಿಕ್ರಮಿಸಲಾಗುತ್ತದೆ ಎನ್ನುತ್ತಾರೆ.
ಬೆಂಗಳೂರು ವರ್ಷಕ್ಕೆ ಸುಮಾರು 15 ಟಿಎಂಸಿ ಮಳೆ ನೀರನ್ನು ಪಡೆಯುತ್ತದೆ. ನಗರದಲ್ಲಿನ ಕೊಳಗಳು 35 ಟಿಎಂಸಿ ನೀರನ್ನು ಪಡೆಯುತ್ತವೆ. ಅಸಮರ್ಪಕ ನಿರ್ವಹಣೆಯಿಂದ ಕೆರೆಗಳಲ್ಲಿ ನೀರು ನಿಲ್ಲುವುದಿಲ್ಲ, ನೀರು ಸುಮ್ಮನೆ ಪೋಲಾಗಿ ಹೋಗುತ್ತದೆ. ಬೆಂಗಳೂರು ನಗರಕ್ಕೆ ಸರಾಸರಿ 18 ಟಿಎಂಸಿ ನೀರು ಬೇಕು. ಮಳೆನೀರು ಕೊಯ್ಲು ವಿಧಾನ ಅಳವಡಿಸಿಕೊಂಡರೆ ನಗರಕ್ಕೆ ನೀರಿನ ಸಮಸ್ಯೆ ಬರುವುದಿಲ್ಲ. ಎನ್ನುತ್ತಾರೆ ಪ್ರೊ.ಟಿ.ವಿ,ರಾಮಚಂದ್ರ.
ಪ್ರಸ್ತುತ ಬೆಂಗಳೂರಿನಲ್ಲಿ 193 ಕೆರೆಗಳಿವೆ. ಅದರಲ್ಲಿ 31 ಪ್ರಮುಖವಾದವು. ಹಿಂದೆ ಈ ಸಂಖ್ಯೆ 265 ಆಗಿತ್ತು. ಬೆಂಗಳೂರಿನಲ್ಲಿ 100ಮಿಲಿ ಮೀಟರ್ ನಿಂದ 120 ಮಿಲಿ ಮೀಟರ್ ಗೆ ಮಿತಿಯಾಗಿ ಮಳೆ ನೀರು ಬಿದ್ದರೆ ನೆರೆ ಪ್ರವಾಹ ಉಂಟಾಗಬಹುದು ಎನ್ನುತ್ತಾರೆ ರಾಮಚಂದ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.