ರಾಜ್ಯ

ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ: ಚಿಕ್ಕಮಗಳೂರು ಎಸ್ ಪಿಯಿಂದ ಮಹತ್ವದ ಮಾಹಿತಿ ಸಂಗ್ರಹ

ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಸಂತೋಷ್ ಬಾಬು ..

ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ: ಚಿಕ್ಕಮಗಳೂರು ಎಸ್ ಪಿಯಿಂದ ಮಹತ್ವದ ಮಾಹಿತಿ ಸಂಗ್ರಹ
ಕಲ್ಲಪ್ಪ ಹಂಡಿಭಾಗ್
Published On :

ಚಿಕ್ಕಮಗಳೂರು: ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಸಂಬಂಧ  ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಸಂತೋಷ್ ಬಾಬು ಅವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸಿಐಡಿ ಎಸ್ಪಿ ಡಿ.ರಾಜಪ್ಪ ಮತ್ತು ಯೆಡಾ ಮಾರ್ಟಿನ್ ಅವರನ್ನೊಳಗೊಂಡ ತಂಡ ಚಿಕ್ಕಮಗಳೂರಿನಲ್ಲಿದ್ದು, ಎಸ್ ಪಿ ಸಂತೋಷ್ ಬಾಬು ಅವರಿಂದ ಹೇಳಿಕೆ ಪಡೆದು ಕೊಂಡಿದೆ. ಆದರೆ ಎಸ್ ಪಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ, ತನಿಖೆಗೆ ಸಹಕಾರ ನೀಡುವಂತೆ ಸಿಐಡಿ ತಂಡ ಸಂತೋಷ್ ಬಾಬು ಅವರನ್ನು ಕೋರಿದೆ.

ಕಲ್ಲಪ್ಪ ಹಂಡಿಬಾಗ್ ಅವರ ವಿರುದ್ಧ ಮೊದಲು ಎಫ್ ಐ ಆರ್ ದಾಖಲಿಸಲಾಯಿತು , ನಂತರ ಡಿಜಿ,ಐಜಿಪಿ ಓಂ ಪ್ರಕಾಶ್ ಮತ್ತು ಐಜಪಿ ಅರುಣ್ ಚಕ್ರವರ್ತಿ ಅವರಿಗೆ ಮಾಹಿತಿ ನೀಡಲಾಯಿತು ಎಂದು ಸಂತೋಷ್ ಬಾಬು ಸಿಐಡಿ ಡಿಜಿಪಿಗೆ ತಿಳಿಸಿದ್ದಾರೆ.

ಪ್ರವೀಣ್ ಖಾಂಡ್ಯ ಮತ್ತು ಆತನ ಸಹಚರರು ತನ್ನನ್ನು ಕಿಡ್ನಾಪ್ ಮಾಡಿ 10 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತೇಜಸ್ ಗೌಡ ದೂರು ನೀಡಿದ್ದರು.

ಡಿವೈಎಸ್ ಪಿ ಕಲ್ಲಪ್ಪ ತನ್ನ ಸ್ನೇಹಿತ ಪವನ್ ರಿಂದ 10 ಲಕ್ಷ ಹಣ ಪಡೆದುಕೊಂಡಿದ್ದಾರೆ. ಜೊತೆಗೆ ಅವರ ಮೊಬೈಲ್ ನಿಂದ ಕರೆ ಮಾಡಿದ್ದು, ಕಾಲ್ ರೆಕಾರ್ಡ್ ಮಾಹಿತಿಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ತನಿಖೆ ನಡೆಸುವಂತೆ ಚಿಕ್ಕಮಗಳೂರು ಹೆಚ್ಚುವರಿ ಪೊಲೀಸ್ ಎಸ್ ಪಿ ಅವರಿಗೆ ಎಸ್ಪಿ ಸಂತೋಷ್ ಬಾಬು ಆದೇಶಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕಲ್ಲಪ್ಪ ಹಂಡಿಭಾಗ್ ಅವರು ಇಲಾಖೆಯ ಫೋನ್ ಬಳಸಿದ್ದು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿದೆ. ಪ್ರವೀಣ್ ಖಾಂಡ್ಯ ಜೊತೆಗೆ ಕಲ್ಲಪ್ಪ ಮಾತನಾಡಿದ್ದ ದೂರವಾಣಿ ಕರೆಗಳನ್ನು ಪರಿಶೀಲಿಸಲಾಯಿತು. ಜುಲೈ 4 ರಂದು ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಅವರನ್ನು ಅಮಾನತು ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಇನ್ನು ಇದೇ ವೇಳೆ, ಕಲ್ಲಪ್ಪ ಹಂಡಿಭಾಗ್ ಅವರ ಧ್ವನಿ ಹಾಗೂ ವಿಡಿಯೋ ಪ್ರಸಾರ ಮಾಡಿದ ಎರಡು ಸುದ್ದಿ ಚಾನೆಲ್ ಗಳಿಗೆ ಸಿಐಡಿ ನೋಟಿಸ್ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.