ರಾಜ್ಯ

ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ 'ಹೈ' ಗಡುವು: ಹೆಚ್ಚಿನ ದಾಳಿಗೆ 'ಲೋಕಾ' ನಿರ್ಧಾರ

ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಹೈಕೋರ್ಟ್ ಗಡುವು ನೀಡಿರುವ ಹಿನ್ನೆಲೆಯಲ್ಲಿ, ಆಸ್ತಿ ಹಾಗೂ ಹಗರಣಗಳಂತಹ ಪ್ರಕರಣಗಳ ಸಂಬಂಧ ಮುಂದಿನ ಎರಡು ತಿಂಗಳಿನಲ್ಲಿ ಹೆಚ್ಚಿನ ದಾಳಿ ನಡೆಸಲು...

ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ 'ಹೈ' ಗಡುವು: ಹೆಚ್ಚಿನ ದಾಳಿಗೆ 'ಲೋಕಾ' ನಿರ್ಧಾರ
ಸಂಗ್ರಹ ಚಿತ್ರ
Published On :

ಬೆಂಗಳೂರು: ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಹೈಕೋರ್ಟ್ ಗಡುವು ನೀಡಿರುವ ಹಿನ್ನೆಲೆಯಲ್ಲಿ, ಆಸ್ತಿ ಹಾಗೂ ಹಗರಣಗಳಂತಹ ಪ್ರಕರಣಗಳ ಸಂಬಂಧ ಮುಂದಿನ ಎರಡು ತಿಂಗಳಿನಲ್ಲಿ ಹೆಚ್ಚಿನ ದಾಳಿ ನಡೆಸಲು ಲೋಕಾಯುಕ್ತ ಪೊಲೀಸರು ಚಿಂತನೆ ನಡೆಸಿದ್ದಾರೆ.

ಬಾಕಿ ಪ್ರಕರಣಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರಕರಣಗಳನ್ನು ಆಗಸ್ಟ್ ತಿಂಗಳೊಳಗಾಗಿ ಇತ್ಯರ್ಥ ಪಡಿಸುವಂತೆ ಗಡುವು ನೀಡಿತ್ತು. ಅಲ್ಲದೆ, ಬಾಕಿ ಪ್ರಕರಣಗಳನ್ನು ಹೊಸದಾಗಿ ಸ್ಥಾಪನೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ರವಾನೆ ಮಾಡದೆ, ಲೋಕಾಯುಕ್ತ ಪೊಲೀಸರೇ ಇತ್ಯರ್ಥಪಡಿಸುವಂತೆ ಸೂಚನೆ ನೀಡಿತ್ತು.

ಪ್ರಸ್ತುತ ನಗರದಲ್ಲಿ ಅಕ್ರಮ ಆಸ್ತಿ 71 ಹಾಗೂ 58 ಹಗರಣಗಳು ಸೇರಿದಂತೆ 247 ಪ್ರಕರಣಗಳು ಬಾಕಿಯಿದೆ. ಹೈ ಕೋರ್ಟ್ ಗಡುವು ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿದ್ದು, ಮುಂದಿನ ಎರಡು ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ನಡೆಸಲು ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಈ ಕುರಿತಂತೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದು, ತನಿಖಾಧಿಕಾರಿಗಳಿಗೆ ದಾಖಲೆಗಳು ಹಾಗೂ ಸಾಕ್ಷಿಗಳು ಅಗತ್ಯವೆನಿಸಿದ್ದಲ್ಲಿ ನಮ್ಮ ದಾಳಿಯನ್ನು ಮುಂದುವರೆಸುತ್ತೇವೆ. ಈ ಎರಡು ತಿಂಗಳು ಲೋಕಾಯುಕ್ತ ಪೊಲೀಸರಿಗೆ ಸವಾಲಿನ ತಿಂಗಳಾಗಿದೆ. ಪ್ರಕರಣಗಳು ಎಲ್ಲೆಲ್ಲಿ ದಾಖಲಾಗಿದೆಯೋ ಅಲ್ಲೆಲ್ಲಾ ದಾಳಿಯನ್ನು ನಡೆಸುತ್ತೇವೆ. ಕೆಲ ಪ್ರಕರಣಗಳ ಸಂಬಂಧ ರಾಜ್ಯ ಸರ್ಕಾರದ ಅನುಮತಿಬೇಕಿದ್ದು, ಸರ್ಕಾರದ ಅನುಮತಿಗಾಗಿ ಪೊಲೀಸರು ಕಾಯುತ್ತಿದ್ದಾರೆಂದು ಹೇಳಿದ್ದಾರೆ.

9 ತಿಂಗಳಿನಲ್ಲಿ ಲೋಕಾಯುಕ್ತ ಪೊಲೀಸರು 350 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಪ್ರಕರಣಗಳಿಗೆ ಸಂಬಂಧಪಟ್ಟ ಚಾರ್ಜ್ ಶೀಟ್ ನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಬಳಿ ಸಲ್ಲಿಸಲಾಗಿದೆ ಎಂದು ಅಧಿಕಾರಿ  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.