ರಾಜ್ಯ

ಹೆಚ್ಚಿದ ವಾಹನಗಳ ಸಂಖ್ಯೆ: ಬೆಂಗಳೂರಲ್ಲಿ ಪ್ರತಿದಿನ ಕನಿಷ್ಠ 19 ಅಪಘಾತಗಳು

ಕಳೆದ 5 ವರ್ಷಗಳಲ್ಲೇ ಬೆಂಗಳೂರಿನಲ್ಲಿ ಅಪಘಾತದ ಪ್ರಮಾಣ ಈ ವರ್ಷ ಹೆಚ್ಚಿದ್ದು, ಪ್ರತಿದಿನ ಸುಮಾರು 19 ಅಪಘಾತಗಳು ನಡೆಯುತ್ತಿವೆ. ಮಾರಣಾಂತಿಕ ಮತ್ತು ...

ಹೆಚ್ಚಿದ ವಾಹನಗಳ ಸಂಖ್ಯೆ: ಬೆಂಗಳೂರಲ್ಲಿ ಪ್ರತಿದಿನ ಕನಿಷ್ಠ 19 ಅಪಘಾತಗಳು
ಕನಕಪುರ ಮುಖ್ಯ ರಸ್ತೆ
Published On :

ಬೆಂಗಳೂರು: ಕಳೆದ 5 ವರ್ಷಗಳಲ್ಲೇ  ಬೆಂಗಳೂರಿನಲ್ಲಿ ಅಪಘಾತದ ಪ್ರಮಾಣ ಈ ವರ್ಷ ಹೆಚ್ಚಿದ್ದು, ಪ್ರತಿದಿನ ಸುಮಾರು 19 ಅಪಘಾತಗಳು ನಡೆಯುತ್ತಿವೆ. ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಅಪಘಾತಗಳಿಗೆ ಬೆಂಗಳೂರು ಸಾಕ್ಷಿಯಾಗುತ್ತಿದೆ.

2015ರಲ್ಲಿ 4,828 ರಸ್ತೆ ಅಪಘಾತ ನಡೆದಿತ್ತು, 2016 ರ ನವೆಂಬರ್ ವೇಳೆಗೆ 6,357 ಅಪಘಾತಗಳು ನಡೆದಿದ್ದು, ಪ್ರತಿದಿನ ಸುಮಾರು 19 ಅಪಘಾತಗಳು ದಾಖಲಾಗುತ್ತಿವೆ.

2011 ರಿಂದ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2015ರಲ್ಲಿ ರಸ್ತೆ ಅಪಘಾತದಲ್ಲಿ 735 ಮಂದಿ ಮೃತ ಪಟ್ಟಿದ್ದು, 3,876 ಮಂದಿ ಗಾಯಗೊಂಡಿದ್ದಾರೆ. 2016 ರಲ್ಲಿ ನಡೆದ ಅಪಘಾತಗಳಲ್ಲಿ 740 ಮಂದಿ ಸಾವನ್ನಪ್ಪಿ, 4,047 ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪೊಲೀಸರು 83,08 ಲಕ್ಷ ಕೇಸುಗಳನ್ನು ದಾಖಲಿ ಸಿದ್ದಾರೆ.ಬೆಂಗಳೂರಿನಲ್ಲಿ ಹೆಚ್ಚಿದ ವಾಹನಗಳ ಸಂಖ್ಯೆಯಿಂದಾಗಿ ಅಪಘಾತಗಳ ಪ್ರಮಾಣ ಕೂಡ ಹೆಚ್ಚಿದೆ. 2012 ರಲ್ಲಿ 41.56 ಲಕ್ಷ ಇದ್ದ ವಾಹನಗಳ ಸಂಖ್ಯೆ 2016 ರ ವೇಳೆಗೆ 65.85 ಲಕ್ಷ ವಾಹನಗಳಿಗೇರಿದೆ. ಒಟ್ಟಾರೆ 65.85 ಲಕ್ಷ ವಾಹನಗಳ ಪೈಕಿ, 45.60 ಲ ಕ್ಷ ದ್ವಿಚಕ್ರ ವಾಹನಗಳು, ಮತ್ತು 12.73 ಲಕ್ಷ ಕಾರುಗಳು ಬೆಂಗಳೂರಿನಲ್ಲಿವೆ.

ಬೆಂಗಳೂರಿನಲ್ಲಿ ಅಪಘಾತದ ಪ್ರಮಾಣ ಹೆಚ್ಚಲು ಪ್ರಮುಖ ಕಾರಣ ವೇಗವಾದ ಚಾಲನೆ, ರ್ಯಾಶ್ ಡ್ರೈವಿಂಗ್,  ಅಲ್ಕೋಹಾಲ್ ಮತ್ತು ಡ್ರಗ್ಸ್ ಸೇವನೆ ಮತ್ತಿನಲ್ಲಿರುವ ಯುವ ಜನತೆಯಿಂದಾಗಿ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ. ಹೆಚ್ಚಿದ ವಾಹನಗಳ ಸಂಖ್ಯೆ ಹಾಗೂ ಕೆಟ್ಟ ರಸ್ತೆಗಳಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.