ರಾಜ್ಯ

ಬೆಂಗಳೂರು: ಮಲಗಿದ್ದ ಮಹಿಳೆಯ ಕೆನ್ನೆ ಕಚ್ಚಿ ಯುವಕ ಪರಾರಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ಮಲಗಿದ್ದ ಮಹಿಳೆಯೊಬ್ಬರ ಕೆನ್ನೆ ಕಚ್ಚಿ ಪರಾರಿಯಾದ ವಿಲಕ್ಷಣ ಪ್ರಕರಣ...

ಬೆಂಗಳೂರು: ಮಲಗಿದ್ದ ಮಹಿಳೆಯ ಕೆನ್ನೆ ಕಚ್ಚಿ ಯುವಕ ಪರಾರಿ
ಮಹಿಳೆ ಹಾಗೂ ಆರೋಪಿ ಯುವಕ
Published On :
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ಮಲಗಿದ್ದ ಮಹಿಳೆಯೊಬ್ಬರ ಕೆನ್ನೆ ಕಚ್ಚಿ ಪರಾರಿಯಾದ ವಿಲಕ್ಷಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅಪಾರ್ಟ್ ಮೆಂಟ್ ನಿವಾಸಿಯಾಗಿರುವ ಡಾರ್ಜಿಲಿಂಗ್‌ ಮೂಲದ ಮಹಿಳೆ ಮನೆಯಲ್ಲಿ ಮಲಗಿದ್ದ ವೇಳೆ ಒಳ ಪ್ರವೇಶ ಮಾಡಿದ ಶಿರಸಿ ಮೂಲದ ಯುವಕ ಸುನಿಲ್ ಆಕೆಯ ಕೆನ್ನೆಗೆ ರಕ್ತ ಬರುವ ರೀತಿ ಕಚ್ಚಿ ಪರಾರಿಯಾಗಿದ್ದಾನೆ. 
ಈ ಸಂಬಂಧ ಬೆಂಗಳೂರಿನ ಎಚ್ ಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಆಗಸ್ಟ್‌ 25 ರಂದು ಈ ಪ್ರಕರಣ ನಡೆದಿದ್ದು, ಗಂಡನಿಂದ ಬೇರೆಯಾಗಿದ್ದ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ 5 ವರ್ಷಗಳಿಂದ ವಾಸವಾಗಿದ್ದರು. ಮಹಿಳೆಯೊಂದಿಗೆ ಆಕೆಯ ಸಹೋದರಿ ವಾಸ ಮಾಡುತ್ತಿದ್ದಳು. ಇನ್ನು ಸುನಿಲ್‌ ಸಹ ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ. 
ಮಹಿಳೆ ಸುನಿಲ್ ವಿರುದ್ಧ ಎಚ್‌ಎಎಲ್‌ ಪೊಲೀಸರಿಗೆ ದೂರು ನೀಡಿದ್ದು, ಮಹಿಳಾ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.