ರಾಜ್ಯ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಉದ್ಯಮಿಯ ತಾಯಿ, ಸಹೋದರನ ಡಿಎನ್ ಎ ಪರೀಕ್ಷೆಗೆ ಕೋರ್ಟ್ ಅನುಮತಿ

ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ, ಭಾಸ್ಕರ್ ಶೆಟ್ಟಿ ತಾಯಿ ಹಾಗೂ ಸಹೋದರನ ಡಿಎನ್ಎ ಪರೀಕ್ಷೆಗೆ ಉಡುಪಿ ಸ್ಥಳೀಯ ನ್ಯಾಯಾಲಯ ..

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಉದ್ಯಮಿಯ ತಾಯಿ, ಸಹೋದರನ ಡಿಎನ್ ಎ ಪರೀಕ್ಷೆಗೆ ಕೋರ್ಟ್ ಅನುಮತಿ
ಭಾಸ್ಕರ್ ಶೆಟ್ಟಿ ಪುತ್ರ ನವನೀತ್ ಮತ್ತು ನಿರಂಜನ್ ಭಟ್
Published On :

ಉಡುಪಿ: ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ, ಭಾಸ್ಕರ್ ಶೆಟ್ಟಿ ತಾಯಿ ಹಾಗೂ ಸಹೋದರನ ಡಿಎನ್ಎ ಪರೀಕ್ಷೆಗೆ ಉಡುಪಿ ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದೆ.

ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಸೆಡ್ತಿ ಮತ್ತು ಸಹೋದರನ ಡಿಎನ್ ಎ ಪರೀಕ್ಷೆ ಮಾಡಲು ಅನುಮತಿಗಾಗಿ ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದರು. ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ನದಿಯಿಂದ ಭಾಸ್ಕರ್ ಶೆಟ್ಟಿ ಮೂಳೆ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಕಳುಹಿಸಲಿದ್ದಾರೆ.

ಭಾಸ್ಕರ್ ಶೆಟ್ಟಿ ಅವರನ್ನು ಕೊಲೆ ಮಾಡಿ ಹೋಮ ಕುಂಡದಲ್ಲಿ ಅವರ ದೇಹವನ್ನು ಸುಡಲಾಗಿತ್ತು, ನಂತರ ಅವಶೇಷವನ್ನು ಸಮೀಪದ ನದಿಗೆ ಬಿಡಲಾಗಿತ್ತು.

ಪ್ರಕರಣ ಸಂಬಂಧ ಮೂವರು ಆರೋಪಿಗಳಿಗೆ ಸೆಪ್ಟಂಬರ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಯನ್ನು ಮಂಗಳೂರು ಜೈಲಿಗೂ ಹಾಗೂ ಪುತ್ರ ನವನೀತ್ ಮತ್ತು ಸ್ವಘೋಷಿತ ಜ್ಯೋತಿಷಿ ನಿರಂಜನ್ ಭಟ್ ಇಬ್ಬರನ್ನು ಜಿಲ್ಲಾ ಕಾರಾಗೃಹದಲ್ಲಿಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.