ಬೆಂಗಳೂರು: ರಣಜಿ ಕ್ರಿಕೆಟ್ ಆಟಗಾರನ ಮನೆಯಲ್ಲಿ ಕಳ್ಳತನ, ಮೂವರ ಬಂಧನ
ರಣಜಿ ಆಟಗಾರನ ಮನೆಯಲ್ಲಿ ಮಕ್ಕಳ ಮೂಲಕ ಕಳ್ಳತನ ಮಾಡಿಸಿದ ತಾಯಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಸಂಜಯನಗರ ಠಾಣೆಯ ಪೊಲೀಸರು ..

ಬೆಂಗಳೂರು: ರಣಜಿ ಆಟಗಾರನ ಮನೆಯಲ್ಲಿ ಮಕ್ಕಳ ಮೂಲಕ ಕಳ್ಳತನ ಮಾಡಿಸಿದ ತಾಯಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಸಂಜಯನಗರ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ರಣಜಿ ಕ್ರಿಕೆಟಿಗ ಸಮರ್ಥ್ ಅವರ ಬೆಂಗಳೂರಿನ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಕಳ್ಳತನ ಮಾಡಿಸಿದ್ದಳು. ಈ ಸಂಬಂಧ ಸಂಜಯ ನಗರ ಪೊಲೀಸರು ಮನೆಕೆಲಸದಾಕೆ ಗೌರಿ ಆಕೆ ಮಕ್ಕಳಾದ ದೀಪಾ ಮತ್ತು ಯೋಗೀಶ್ ಎಂಬುವರನ್ನು ಬಂಧಿಸಿದ್ದಾರೆ.
ಆಗಸ್ಟ್ 21ರಂದು ಸಮರ್ಥ್ ತಾಯಿ ನಾಗರತ್ನ ಅವರು ಮಗಳ ಮನೆಗೆ ಹೋಗಿದ್ದರು. ಈ ವೇಳೆ ಅವರು ಮನೆಕೆಲಸದಾಕೆ ಅರೋಪಿ ಗೌರಮ್ಮ ಅವರನ್ನು ಕೂಡ ಮಗಳ ಮನೆಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ತಾಯಿ ಗೌರಿ ತನ್ನ ಇಬ್ಬರು ಕಳವು ಮಾಡಲು ಕಳಿಸಿದ್ದಾಳೆ. ಅಂತೆಯೇ ಮಕ್ಕಳು 360 ಗ್ರಾಂ ಚಿನ್ನವನ್ನು ಮನೆಯಿಂದ ಕದ್ದಿದ್ದರು.
ಮಗಳ ಮನೆಯಿಂದ ಹಿಂತಿರುಗಿದ ನಾಗರತ್ನ ಅವರಿಗೆ ಮನೆಯಲ್ಲಿ ಕಳ್ಳತನವಾದ ಬಗ್ಗೆ ತಿಳಿದಿದ್ದು, ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಕೆಲಸದಾಕೆ ಗೌರಿಯನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಆಕೆ ಸರಿಯಾದ ಉತ್ತರ ನೀಡಲಿಲ್ಲ, ಇದರಿಂದ ಅನುಮಾನ ಗೊಂಡ ಪೊಲೀಸರು ಆಕೆಯ ಮಕ್ಕಳನ್ನು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಮೂಲತ ತಮಿಳುನಾಡಿನವಳಾದ ಗೌರಿ ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಳು. ಆರೋಪಿ ಗೌರಿ ಕಳವು ಮಾಡಲೆಂದೇ 1 ತಿಂಗಳ ಹಿಂದೆಯೇ ಮನೆ ಬೀಗ್ ಕೀ ಕದ್ದಿದ್ದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


