ಆ.31ರ ನಂತರ ಕೃಷಿಗಿಲ್ಲ ನೀರು: ಇಂಧನ ಸಚಿವ
ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಗಳಿಗೆ ಪೂರೈಕೆ ಮಾಡಲಾಗುತ್ತಿರುವ ನೀರನ್ನು ಆಗಸ್ಟ್ 31 ರಿಂದ ಸ್ಥಗಿತಗೊಳಿಸಲಾಗುವುದು ಎಂದು ಇಂಧನ...

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಗಳಿಗೆ ಪೂರೈಕೆ ಮಾಡಲಾಗುತ್ತಿರುವ ನೀರನ್ನು ಆಗಸ್ಟ್ 31 ರಿಂದ ಸ್ಥಗಿತಗೊಳಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ನಗರದಲ್ಲಿ ನಿನ್ನೆಯಷ್ಟೇ ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕೃಷ್ಣರಾಜ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ಕಳೆದ ನಾಲ್ಕು ವರ್ಷದಲ್ಲಿ ಈ ಬಾರಿ ಅತ್ಯಂತ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಆಗಸ್ಟ್ 31ರಿಂದ ನೀರಿನ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದರು.
ಕಾವೇರಿಯಲ್ಲಿ ಕೃಷಿಗೆ ಪೂರೈಕೆ ಮಾಡುವಷ್ಟು ನೀರಿಲ್ಲದಿರುವ ಬಗ್ಗೆ ಈಗಾಗಲೇ ರೈತರೊಂದಿಗೆ ಮಾತುಕತೆ ನಡೆಸಲಾಗಿದೆ. ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ. ಈಗಾಗಲೇ ಜಲಾಶಯಗಳಲ್ಲಿ ನಿಯಮಿತ ನೀರಿದ್ದು, ಕೃಷಿಗೆ ನೀರನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ.
ಬೆಂಗಳೂರು ನಗರಕ್ಕೆ 15 ಟಿಎಂಸಿ ಕುಡಿಯುವ ನೀರಿನ ಅಗತ್ಯವಿದೆ. ಡಿಸೆಂಬರ್ ಅಂತಿಮಕ್ಕೆ 25 ಟಿಎಂಸಿ ನೀರುನ್ನು ಶೇಖರಿಸಲಾಗುತ್ತದೆ. ಪ್ರಸ್ತುತ ಕೆಆರ್ ಎಸ್ ನಲ್ಲಿ ಕೇವಲ 12.5 ಟಿಎಂಸಿ ನೀರಿದೆ. ರೈತರಿಗೆ ಇನ್ನು 80 ದಿನಗಳು ನೀರನ್ನು ಪೂರೈಸಿದ್ದೇ ಆದರೆ, 40 ಟಿಎಂಸಿ ನೀರಿನ ಅಗತ್ಯ ಬೀಳುತ್ತದೆ ಎಂದು ಹೇಳಿದ್ದಾರೆ.
ಹವಾಮಾನ ಇಲಾಖೆ ಅಧಿಕಾರಿಗಳೊಂದಿಗಿನ ಮಾತುಕತೆ ಕುರಿತಂತೆ ಮಾತನಾಡಿದ ಅವರು, ಈ ಬಾರಿ ಕಡಿಮೆ ಮಳೆಯಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 1 ರಿಂದ ಬೆಳೆಯುವ ಬೆಳೆಗೆ ನೀರನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಕುಡಿಯುವ ನೀರನ್ನೇ ಸಾಕಷ್ಟು ಮಂದಿ ಕೃಷಿಗೆ ಬಳಕೆ ಮಾಡುತ್ತಿದ್ದಾರೆ. ಈ ಚಟುವಟಿಕೆಗಳು ಹೀಗೆ ಮುಂದುವರೆದಿದ್ದೇ ಆದರೆ, ಕುಡಿಯುವ ನೀರಿಗೂ ಕೊರತೆಯುಂಟಾಗಬಹುದು. ಹೀಗಾಗಿ ರೈತರು ಇನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸರ್ಕಾರವನ್ನು ದೂಷಿಸಬಾರದು. ನೀರು ಬಳಕೆ ಕುರಿತಂತೆ ಶೀಘ್ರದಲ್ಲೇ ನಿಗಾ ಸಮಿತಿಯನ್ನು ನಿಯೋಜಿಸಲಾಗುತ್ತದೆ. ಈ ಬಗ್ಗೆ ನೀರಾವರಿ ಇಲಾಖೆಗೂ ಪತ್ರವನ್ನು ಬರೆಯಲಾಗುತ್ತದೆ ಎಂದಿದ್ದಾರೆ.
ವಿದ್ಯುತ್ ಕೊರತೆಯಿಲ್ಲ
ನೀರಿನ ಕೊರತೆಯುಂಟಾದರೂ ರಾಜ್ಯದಲ್ಲಿ ವಿದ್ಯುತ್ ಕೊರತೆಯುಂಟಾಗುವುದಿಲ್ಲ. ಪ್ರಸ್ತುತ 9500 ಮಿಲಿಯನ್ ಯುನಿಟ್ ವಿದ್ಯುತ್ ಇದೆ. ಇದರಲ್ಲಿ ಕೇವಲ 8000 ಮಿಲಿಯನ್ ಯುನಿಟಿಗಳಷ್ಟನ್ನು ಬಳಕೆ ಮಾಡಲಾಗುತ್ತಿದೆ. ಒಂದು ವೇಳೆ ಕೊರತೆಯುಂಟಾದರೆ, ಖಾಸಗಿವಲಯದಲ್ಲಿ 1 ಯುನಿಟ್ ಗೆ ರು.4.36 ರಂತೆ ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


