ಬೆಂಗಳೂರಿನಲ್ಲಿ ಓಡಾಡಲು ದೋಣಿ ಬಳಸುವುದು ನಾಚಿಕೆಗೇಡಿನ ಸಂಗತಿ: ಕೋಳಿವಾಡ
ನಗರದಲ್ಲಿ ಒಂದೇ ಒಂದು ನದಿ ಇಲ್ಲ, ಆದರೆ ಮಳೆ ಬಂದಾಗ ದೋಣಿಯಲ್ಲಿ ಹೋಗಬೇಕಾಗಿ ಬಂದಿರುವುದು ಅತ್ಯಂತ ದುರದೃಷ್ಟಕರ ಹಾಗೂ ನಾಚಿಕೆಗೇಡಿನ ವಿಷಯ ಎಂದು ಹೇಳಿದರು...

ಬೆಂಗಳೂರು: ಬೆಂಗಳೂರಿನಂತ ನಗರದಲ್ಲಿ ಓಡಾಡಲು ದೋಣಿ ಬಳಸುವುದು ನಾಚಿಕೆಗೇಡಿನ ಸಂಗತಿ ಎಂದು ವಿಧಾನಸಭೆ ಸ್ಪೀಕರ್ ಹಾಗೂ ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷರೂ ಆಗಿರುವ ಕೆ.ಬಿ ಕೋಳಿವಾಡ ಹೇಳಿದ್ದಾರೆ.
ನಿನ್ನೆ ಚಿಕ್ಕನಹಳ್ಳಿ ಕೆರೆ, ಕೋಡಿ ಚಿಕ್ಕನಹಳ್ಳಿ ಕರೆ, ಮಡಿವಾಳ ಕೆರೆ, ಚಿಕ್ಕಬೇಗೂರು ಕೆರೆ, ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ನಗರದಲ್ಲಿ ಒಂದೇ ಒಂದು ನದಿ ಇಲ್ಲ, ಆದರೆ ಮಳೆ ಬಂದಾಗ ದೋಣಿಯಲ್ಲಿ ಹೋಗಬೇಕಾಗಿ ಬಂದಿರುವುದು ಅತ್ಯಂತ ದುರದೃಷ್ಟಕರ ಹಾಗೂ ನಾಚಿಕೆಗೇಡಿನ ವಿಷಯ ಎಂದು ಹೇಳಿದರು.
ನಗರದಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಆಗಸ್ಟ್ ೧೧ರೊಳಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿವೆ, ಎಷ್ಟು ಪ್ರಕರಣಗಳಿಗೆ ನ್ಯಾಯಾಲಯ ತಡೆ ನೀಡಿದೆ ಮುಂತಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಈ ಎಲ್ಲಾ ಮಾಹಿತಿ ದೊರೆತ ತಕ್ಷಣ ಸಿ.ಜೆ. ಅವರನ್ನು ಭೇಟಿಯಾಗಿ ವಿಶೇಷ ಕೋರ್ಟ್ ಸ್ಥಾಪನೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಇತ್ತೀಚೆಗೆ ದಾಖಲೆ ಮಳೆ ಸುರಿದಿದ್ದರಿಂದ ಅನುಗ್ರಹ, ಅಕ್ಷಯನಗರ ಬಡಾವಣೆ ಸೇರಿದಂತೆ ಹಲವೆಡೆ ಕರೆ ನೀರು ಹರಿದು ಪ್ರವಾಹ ಉಂಟಾಗಿದೆ. ಕೆಲವರು ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ನ್ಯಾಯಾಲಯದಿಂದ ತಡೆ ತಂದಿರುವುದರಿಂದ ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕೆಲವಡೆ ಒತ್ತುವರಿ ತೆರವು ಮಾಡಲಾಗಿದೆ, ಇದುವೆರೆಗೆ ೮೨೨ ಎಕರೆ ಪ್ರದೇಶ ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದಾಗ, ನೀವು ಕೇವಲ ಬಡವರು ಒತ್ತುವರಿ ಮಾಡಿಕೊಂಡ ಜಾಗವನ್ನು ಮಾತ್ರ ತೆರವುಗೊಳಿಸುತ್ತಿದ್ದೀರಿ, ಬಲಾಢ್ಯ ಮತ್ತು ಪ್ರಭಾವಿಗಳು, ಬಿಲ್ಡರ್‌ಗಳು ಮಾಡಿಕೊಂಡ ಒತ್ತುವರಿ ತೆರವು ಮಾಡಿಲ್ಲ, ಅವರನ್ನು ಮುಟ್ಟುವ ಧೈರ್ಯ ಮಾಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


