ಅಮೆರಿಕಾದಲ್ಲಿ ನಡೆಯಲಿರೋ ಅಂತರರಾಷ್ಟ್ರೀಯ ಒಲಂಪಿಯಾಡ್ ಸ್ಪರ್ಧೆಗೆ ಮಂಗಳೂರು ವಿದ್ಯಾರ್ಥಿನಿ
ಇಂದಿನಿಂದ ಆರಂಭವಾಗುತ್ತಿರುವ ಅಂತರರಾಷ್ಟ್ರೀಯ ಸಸ್ಟೇನಬಲ್ ವರ್ಲ್ಡ್ ಪ್ರಾಜೆಕ್ಟ್ ಒಲಂಪಿಯಾಡ್ ಸ್ಪರ್ಧೆಯಲ್ಲಿ...

ಮಂಗಳೂರು: ಇಂದಿನಿಂದ ಆರಂಭವಾಗುತ್ತಿರುವ ಅಂತರರಾಷ್ಟ್ರೀಯ ಸಸ್ಟೇನಬಲ್ ವರ್ಲ್ಡ್ ಪ್ರಾಜೆಕ್ಟ್ ಒಲಂಪಿಯಾಡ್ ಸ್ಪರ್ಧೆಯಲ್ಲಿ ಮಂಗಳೂರಿನ ಪುತ್ತೂರು ಶಾಲೆಯೊಂದರ ಬಾಲಕಿ ಭಾಗವಹಿಸಲಿದ್ದಾಳೆ.
ಪುತ್ತೂರಿನ ಸುದಾನಾ ಶಾಲೆಯ ಅನೀಶಾ ನಾಯಕ್ ಅಮೆರಿಕಾದ ಹೂಸ್ಟನ್ ನಲ್ಲಿ ನಡೆಯುವ ಒಲಂಪಿಯಾಡ್ ನಲ್ಲಿ ಭಾಗವಹಿಸಲಿದ್ದಾಳೆ, ಭಾರತದಿಂದ ಆಯ್ಕೆಯಾಗಿರುವ ಇಬ್ಬರು ವಿದ್ಯಾರ್ಥಿಗಳಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.
ಜನವರಿ 10 ರಂದು ರಾಜಕೋಟ್ ನಲ್ಲಿ ಜರುಗಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅನೀಶಾ ನಾಯಕ್ Hydrophobicity of Colocasia extract as wall paper protector. ಎಂಬ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ವಿವಿಧ ಹಂತಗಳಲ್ಲಿ ಪ್ರಥಮ ಸ್ಥಾನ ಪಡೆದು ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿಜ್ಞಾನ ಪ್ರಾಜೆಕ್ಟ್ ಇದಾಗಿದೆ.
ಅನೀಶಾ ನಾಯಕ್ ಅವರ ಈ ಸಂಶೋಧನೆಗೆ ಶಾಲಾ ವಿಜ್ಞಾನ ಶಿಕ್ಷಕಿ ಸಾಧನಾ ಹೆಬ್ಬಾರ್ ಮಾರ್ಗದರ್ಶಕರಾಗಿದ್ದು ತಮ್ಮ ಪ್ರಾಜೆಕ್ಟ್ ಸೆಲೆಕ್ಟ್ ಆಗಿರುವುದಕ್ಕೆ ಅತೀವ ಸಂತೋಷ ವ್ಯಕ್ತ ಪಡಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲೇ ಈ ರೀತಿಯ ಪ್ರಾಜೆಕ್ಟ್ ಅನ್ನು ಆಯ್ಕೆಯಾಗಿರುವುದು ನನಗೆ ಆಶ್ಚರ್ಯ ಮೂಡಿಸಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


