ರಾಜ್ಯ

ಆರು ಮನೆಗಳಲ್ಲಿ ಲಕ್ಷ ರು. ಮೌಲ್ಯದ ಬ್ರ್ಯಾಂಡೆಡ್ ಶೂ ಕದ್ದ ಚಾಲಾಕಿ ಕಳ್ಳ

ಸುಮಾರು ಒಂದು ಲಕ್ಷ ರು. ಮೌಲ್ಯದ ಬ್ರ್ಯಾಂಡೆಡ್ ಶೂ ಮತ್ತು ಚಪ್ಪಲಿಗಳನ್ನು ಕಳ್ಳತನ ಮಾಡಿರುವ ಪ್ರಕರಣ ಬೆಂಗಳೂರಿನ ಕಸವನಹಳ್ಳಿ ಲೇಔಟ್ ನಲ್ಲಿ ನಡೆದಿದೆ....

ಆರು ಮನೆಗಳಲ್ಲಿ ಲಕ್ಷ ರು. ಮೌಲ್ಯದ ಬ್ರ್ಯಾಂಡೆಡ್ ಶೂ ಕದ್ದ ಚಾಲಾಕಿ ಕಳ್ಳ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಸುಮಾರು ಒಂದು ಲಕ್ಷ ರು. ಮೌಲ್ಯದ ಬ್ರ್ಯಾಂಡೆಡ್ ಶೂ ಮತ್ತು ಚಪ್ಪಲಿಗಳನ್ನು ಕಳ್ಳತನ ಮಾಡಿರುವ ಪ್ರಕರಣ ಬೆಂಗಳೂರಿನ ಕಸವನಹಳ್ಳಿ ಲೇಔಟ್ ನಲ್ಲಿ ನಡೆದಿದೆ.

ನಗರದ ಕಸವನಹಳ್ಳಿಯಲ್ಲಿರುವ ರಿಲಯಬಲ್ ಲೈಫ್ ಸ್ಟೈಲ್ ಲೇಔಟ್ ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಬೆಳಗಿನ ಜಾವ 4-5 ಗಂಟೆಯೊಳಗೆ ಕಳ್ಳ ತನ್ನ ಕೈ ಚಳಕ ತೋರಿದ್ದಾನೆ.

ಆರು ಮನೆಗಳಲ್ಲಿ 4 ರಿಂದ 5 ಸಾವಿರ ರು ಬೆಲೆ ಬಾಳುವ ಸುಮಾರು 40 ಜೊತೆ ಶೂ ಮತ್ತು ಚಪ್ಪಲಿಗಳನ್ನು ಕದ್ದೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 84 ಮನೆಗಳಿರುವ ಈ ಲೇಔಟ್ ನಲ್ಲಿ  30 ಕುಟುಂಬಗಳು ವಾಸಿಸುತ್ತಿವೆ. ಇನ್ನುಳಿದ ಮನೆಗಳು ನಿರ್ಮಾಣ ಹಂತದಲ್ಲಿದ್ದು ಸೆಕ್ಯೂರಿಟಿಯು ಉತ್ತಮವಾಗಿದೆ.

ರಮೇಶ್ ಎಂಬುವರ ಮನೆ ಮುಂದೆ ಬಿಟ್ಟಿದ್ದ ಬೆಲೆ ಬಾಳುವ ಒಂದು ಜೊತೆ ಶೂ ಮತ್ತು ಚಪ್ಪಲಿ ಕಾಣೆಯಾಗಿತ್ತು. ಈ ಸಂಬಂಧ ಅವರು ಚರ್ಚಿಸುತ್ತಿದ್ದಾಗಲೇ ಉಳಿದ ಆರು ಜನರು ಬಂದು ತಮ್ಮ ಮನೆಯಲ್ಲೂ ಬ್ರಾಂಡೆಡ್ ಶೂ ಮತ್ತು ಚಪ್ಪಲಿ ಕಳ್ಳತನ ವಾಗಿರುವ ಬಗ್ಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಸಿಸಿ ಟಿವಿ ಕ್ಯಾಮೆರಾ ವಶಕ್ಕೆ ತೆಗೆದು ಕೊಂಡು ಪರಿಶಿಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.