ಆರೋಗ್ಯ

ಸಣ್ಣ ತೊಂದರೆಗೂ ಪ್ಯಾರಾಸಿಟಮಲ್ ಸೇವಿಸುತ್ತಿದ್ದೀರಾ? ಹಾಗಾದರೆ ಅಪಾಯ ಕಟ್ಟಿಟ್ಟ ಬುತ್ತಿ!

ಜ್ವರ, ತಲೆ ನೋವು, ಮೈಕೈ ನೋವು, ಹಲ್ಲು ನೋವಿನಂತಹ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೂ ಮಾತ್ರೆ ತೆಗೆದುಕೊಳ್ಳುತ್ತಿರುವವರಿಗೆ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ಶಾಕ್ ನೀಡಿದೆ.

ಸಣ್ಣ ತೊಂದರೆಗೂ ಪ್ಯಾರಾಸಿಟಮಲ್ ಸೇವಿಸುತ್ತಿದ್ದೀರಾ? ಹಾಗಾದರೆ ಅಪಾಯ ಕಟ್ಟಿಟ್ಟ ಬುತ್ತಿ!
ಪ್ಯಾರಾಸಿಟಮಲ್
Published On :

ಜ್ವರ, ತಲೆ ನೋವು, ಮೈಕೈ ನೋವು, ಹಲ್ಲು ನೋವಿನಂತಹ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೂ ಮಾತ್ರೆ ತೆಗೆದುಕೊಳ್ಳುತ್ತಿರುವವರಿಗೆ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ಶಾಕ್ ನೀಡಿದೆ.

ಹೌದು.. ಸಣ್ಣ ತೊಂದರೆಗಳಿಗೂ ಪ್ಯಾರಸೆಟಮಾಲ್‌ ನುಂಗುವ ಅಭ್ಯಾಸ ಹೆಚ್ಚಿರುವ ಈ ಹೊತ್ತಿನಲ್ಲಿ, ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನಕಾರರು ಮಹತ್ವದ ವರದಿ ನೀಡಿದ್ದು, ಹೆಚ್ಚು ಪ್ಯಾರಸಿಟಮಲ್ ಸೇವನೆಯಿಂದ ನಮ್ಮ ಲಿವರ್ ಗೆ ಹಾನಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಾವು ನುಂಗುವ ಔಷಧಗಳು ಅತಿಯಾದರೆ ನಮ್ಮ ಯಕೃತ್ತಿನ ಆರೋಗ್ಯವನ್ನೇ ನುಂಗಿ ಹಾಕುತ್ತವೆ ಎಂದು ಇತ್ತೀಚಿನ ಅಧ್ಯಯನಗಳು ಬಹಿರಂಗ ಪಡಿಸಿವೆ.

ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನದಲ್ಲೇನಿದೆ?

ಪ್ರತಿ ಸಣ್ಣ ವಿಷಯಕ್ಕೂ, ವೈದ್ಯರ ಸಲಹೆ ಇಲ್ಲದೆ ಪ್ಯಾರಸೆಟಮಾಲ್ ಅಥವಾ ನೋವಿನ ಮಾತ್ರೆಗಳನ್ನು ನುಂಗುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಕೆಲವೊಮ್ಮೆ ಶಾಶ್ವತವೂ ಆಗಬಹುದು. ಇದು ಅಂಗಾಂಗ ವೈಫಲ್ಯಕ್ಕೂ ದಾರಿ ಮಾಡುತ್ತದೆ ಎಂದು ಅಧ್ಯಯನದಲ್ಲಿ ಎಚ್ಚರಿಸಲಾಗಿದೆ. ಪ್ರಮುಖವಾಗಿ ಭಾರತದಲ್ಲಿ ಬಳಸುವ ಪ್ಯಾರಸೆಟಮಾಲ್ ಪ್ರಮಾಣಕ್ಕಿಂತ ಪಶ್ಚಿಮ ದೇಶಗಳಲ್ಲಿ ಪ್ಯಾರಸೆಟಮಾಲ್ ಅಥವಾ ಅಸೆಟೋಮೆನೊಫಿನ್ ಬಳಸುವ ಪ್ರಮಾಣ ಹೆಚ್ಚು. ಆದರೆ ಕೋವಿಡ್‌ ನಂತರದ ದಿನಗಳಲ್ಲಿ ಪ್ಯಾರಸೆಟಮಾಲ್ ಬಳಸುವ ಪ್ರಮಾಣ ಎಲ್ಲಾ ದೇಶಗಳಲ್ಲಿ ಮೊದಲಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಂಥ ಅಧ್ಯಯನಗಳು ಮಹತ್ವ ಪಡೆದಿವೆ.

ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನ
ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನ

ಯಕೃತ್ತಿಗೆ ಹಾನಿ

ರೋಗದ ಉಪಶಮನಕ್ಕಾಗಿ ಬಳಸುವ ಈ ಔಷಧಗಳು ಮಿತಿ ಮೀರಿದರೆ ಅಪಾಯಗಳಿಗೆ ಆಹ್ವಾನ ನೀಡುತ್ತವೆ ಎಂಬುದು ಸಾಬೀತಾಗಿದೆ. ಕೆಲವು ಸಂದರ್ಭಗಳಲ್ಲಿ, ಯಕೃತ್ತಿನ ಮೇಲೆ ದುಷ್ಟಪರಿಣಾಮ ಬೀರುವ ಈ ಔಷಧಗಳು, ಅಲ್ಲಿನ ಆರೋಗ್ಯವಂತ ಕೋಶಗಳನ್ನು ಹಾಳು ಮಾಡುತ್ತವೆ ಹಾಗೂ ಅಂಗದ ವೈಫಲ್ಯಕ್ಕೂ ಕಾರಣವಾಗಬಹುದು. ಯಾವುದೇ ಕೋಶಗಳು ತಮ್ಮ ಅಂಗಗಳ ಗೋಡೆಯ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡರೆ ಆಪತ್ತು ಎದುರಾಗುತ್ತದೆ. ಇದರಿಂದ ಆ ಕೋಶಗಳು ಕ್ರಮೇಣ ಸಾಯಬಹುದು. ಇಂಥ ಸಂದರ್ಭಗಳಲ್ಲಿ ಅಂಗಗಳು ಪೂರ್ಣ ಅಥವಾ ಭಾಗಶಃ ಹಾನಿಗೊಂಡು ವಿಫಲವೂ ಆಗಬಹುದು ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.