ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚು ತಿನ್ನಬೇಕೆನಿಸುವ ಅಪಾಯ ಅಧಿಕ!
ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದರಿಂದ ಅದೇನು ಉಪಯೋಗವಾಗುತ್ತದೋ ಇಲ್ಲವೋ ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂತಾಗುವುದಂತೂ ಖಂಡಿತಾ ಎನ್ನುತ್ತಿದೆ ಹೊಸ ಸಂಶೋಧನೆ.

ವಾಷಿಂಗ್ ಟನ್: ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದರಿಂದ ಅದೇನು ಉಪಯೋಗವಾಗುತ್ತದೋ ಇಲ್ಲವೋ ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂತಾಗುವುದಂತೂ ಖಂಡಿತಾ ಎನ್ನುತ್ತಿದೆ ಹೊಸ ಸಂಶೋಧನೆ.
ಫ್ಯಾಷನ್ ಮ್ಯಾಗಜೀನ್ ಹಾಗೂ ಟಿವಿ ಸೇರಿದಂತೆ ಸಾಂಪ್ರದಾಯಿಕ ಮಾಧ್ಯಮಗಳು ಹೆಚ್ಚು ತಿನ್ನಬೇಕೆನಿಸುವ ಅಪಾಯ ಉಂಟು ಮಾಡುತ್ತವೆ ಎಂಬುದು ತಿಳಿದಿತ್ತು. ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ಮ್ಯಾಗಜೀನ್ ಹಾಗೂ ಟಿವಿಗಳ ದೃಶ್ಯಗಳು ಕಂಡುಬರುತ್ತಿದ್ದು ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಇರುವುದರಿಂದ ಯುವ ಜನತೆಯಲ್ಲಿ ತಿನ್ನುವ ವಿಷಯದಲ್ಲಿ ಹಾಗೂ ದೇಹದ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದುವ ಅಪಾಯ ಉಂಟಾಗಲು ಕಾರಣವಾಗುತ್ತಿದೆ ಎಂಬುದನ್ನು ಸಂಶೋಧಕರು ಮನಗಂಡಿದ್ದಾರೆ.
ಈ ಸಂಶೋಧನೆಗಾಗಿ 19 -32 ವಯಸ್ಸಿನ ಸುಮಾರು 1 ,765 ಜನರನ್ನು 2014 ರಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದ್ದು ತಿನ್ನುವುದು ಹಾಗೂ ಸಾಮಾಜಿಕ ಜಾಲತಾಣದ ಬಳಕೆ ಕುರಿತು ಪ್ರಶ್ನೆ ಮಾಡಲಾಗಿದೆ. ಇಷ್ಟು ಜನರಿಂದ ಬಂದ ಪ್ರತಿಕ್ರಿಯೆಯನ್ನು ಕೇವಲ ತಿನ್ನುವ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿರುವವರಿಂದ ಬಂದ ಪ್ರತಿಕ್ರಿಯೆಗೆ ಹೋಲಿಕೆ ಮಾಡಲಾಗಿದ್ದು ಎರಡೂ ಹೊಂದಾಣಿಕೆಯಾಗುತ್ತಿವೆ ಎಂದಿದ್ದಾರೆ ಸಂಶೋಧಕರು.
ಹೆಚ್ಚು ತಿನ್ನಬೇಕೆನಿಸುವ ಸಮಸ್ಯೆ ಹೆಚ್ಚು ಸಾಮಾಜಿಕ ಜಾಲತಾಣಗಳ ಬಳಕೆಗೆ ಉತ್ತೇಜನ ನೀಡುತ್ತಿದೆಯೋ ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯೇ ತಿನ್ನುವ ವಿಷಯದಲ್ಲಿ ಅಸ್ಥಿರತೆಗೆ ಕಾರಣವಾಗುತ್ತಿದೆಯೋ ತಿಳಿಯುತ್ತಿಲ್ಲ ಅಥವಾ ಎರಡೂ ಒಂದಕ್ಕೆ ಒಂದು ಪೂರಕವಾಗಿರಬಹುದು ಎಂದು ಅಕಾಡೆಮಿ ಆಫ್ ನ್ಯೂಟ್ರೀಷನ್ ಹಾಗೂ ಡಯೆಟ್ ಕುರಿತ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


