ಆರೋಗ್ಯ-ಜೀವನಶೈಲಿ

ವಯಾಗ್ರ ಸೇವನೆಯಿಂದ ಹೃದಯಾಘಾತ ಅಪಾಯ ಕಡಿಮೆ: ಅಧ್ಯಯನ

ಲೈಂಗಿಕ ಸುಖ ಪಡೆಯಲು ಪುರುಷರು ಸೇವಿಸುವ ಸಣ್ಣ ನೀಲಿ ಮಾತ್ರೆ ವಯಾಗ್ರ ಹೃದಯಾಘಾತ ಸಂಭವವನ್ನು ಕಡಿಮೆಗೊಳಿಸುತ್ತದೆ ಎಂದು ಇತ್ತೀಚಿನ ಅಧ್ಯಯನ..

ವಯಾಗ್ರ ಸೇವನೆಯಿಂದ ಹೃದಯಾಘಾತ ಅಪಾಯ ಕಡಿಮೆ: ಅಧ್ಯಯನ
ಸಾಂದರ್ಭಿಕ ಚಿತ್ರ
Published On :

ಲಂಡನ್: ಲೈಂಗಿಕ ಸುಖ ಪಡೆಯಲು ಪುರುಷರು ಸೇವಿಸುವ ಸಣ್ಣ ನೀಲಿ ಮಾತ್ರೆ ವಯಾಗ್ರ ಹೃದಯಾಘಾತ ಸಂಭವವನ್ನು ಕಡಿಮೆಗೊಳಿಸುತ್ತದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ವಯಾಗ್ರ ಮಾತ್ರೆಯ ಈ ವಿಸ್ಮಯಕಾರಿ ಸಂಗತಿಯನ್ನು ಲಂಡನ್ ಪ್ರಸಿದ್ಧ ವಿಜ್ಞಾನಿ ಆಂಡ್ರ್ಯೂ ಟ್ರಾಫೋರ್ಡ್ ಹೇಳಿದ್ದಾರೆ.

ಮ್ಯಾಂಚೆಸ್ಟರ್ ಸಂಶೋಧಕರು ಸಕ್ಕರೆ ಕಾಯಿಲೆಯಿರುವ  ಸುಮಾರು 6.000 ರೋಗಿಗಳಿಗೆ ವಯಾಗ್ರ ನೀಡಿದ್ದರು. ಇದರಿಂದ ಅವರ ಲೈಂಗಿಕ ಶಕ್ತಿ ವೃದ್ಧಿಯಾಗುವುದಲ್ಲದೇ ರಕ್ತದೊತ್ತಡ ಕೂಡ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಹೃದಯ ತೊಂದರೆಯಿದ್ದರೂ ಲೈಂಗಿಕ ಕ್ರಿಯೆ ಬಗ್ಗೆ ಆಸಕ್ತಿಯಿದ್ದವರಿಗೆ ಈ ಮಾತ್ರೆ ನೀಡಲಾಯಿತು, ಆದರೆ ಇದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು ಅಧ್ಯಯನ ತಿಳಿಸಿದೆ.

ಲೈಂಗಿಕ ಕ್ರಿಯೆಗಾಗಿ ಬಳಸುವ ವಯಾಗ್ರದಿಂದ ಹೃದಯಾಘಾತ ಸಂಭವ ಕಡಿಮೆಯಾಗುವುದರ ಜೊತೆಗೆ ಅಧಿಕ ಹೃದಯ ಬಡಿತವನ್ನು ಕಡಿಮೆಗೊಳ್ಳಲು ಈ ಔಷಧ ಸಹಕಾರಿಯಾಗಿದೆ, ಇದು ಇತ್ತೀಚೆಗೆ ನಡೆದ ಸಂಶೋಧನೆಯಿಂದ ದೃಢ ಪಟ್ಟಿದೆ ಎಂದು ಟ್ರಾಫೋರ್ಡ್ ತಿಳಿಸಿದ್ದಾರೆ.

ಈ ಅಧ್ಯಯನದ ವರದಿಯನ್ನು  ಬಿಎಂಜೆ ಹಾರ್ಟ್ ಜರ್ನಲ್ ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.