ಮುಂಗಾರು ಮಳೆ ಆನಂದಿಸಿ, ಆದರೆ ಸ್ವಲ್ಪ ಮುಂಜಾಗ್ರತೆ ಇರಲಿ
ಬೇಸಿಗೆಯಲ್ಲಿ ಸುರಿದ ಮಳೆ ಬಿಸಿಲಿನ ಬವಣೆಯಿಂದ ಬಳಲಿದ್ದ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿದೆ. ಇನ್ನೂ ಕೆಲ ದಿನ ಮಳೆ ಬರಬಹುದು...

ಬೇಸಿಗೆಯಲ್ಲಿ ಸುರಿದ ಮಳೆ ಬಿಸಿಲಿನ ಬವಣೆಯಿಂದ ಬಳಲಿದ್ದ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿದೆ. ಇನ್ನೂ ಕೆಲ ದಿನ ಮಳೆ ಬರಬಹುದು. ನಾವು ವರಾಂಡಾದಲ್ಲಿ ಕುಳಿತು ಮಳೆ ಬರುವ ಸಂತಸವನ್ನು ಆನಂದಿಸಬಹುದು. ಆದರೆ, ಈ ಸಂದರ್ಭದಲ್ಲಿ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಕಡೆಗಣಿಸಬಾರದು. ನೀರು ಸಂಬಂಧಿಸಿದ ಸೊಳ್ಳೆಗಳಿಂದ ಕೆಲವು ರೋಗಗಳು ಕಾಣಿಸಿಕೊಳ್ಳಿವೆ. ಇದು, ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಮಳೆ ಹನಿಯನ್ನು ಆನಂದಿಸುವುದರ ಜತೆಗೆ ಸೋಂಕು ಇರುವ ಪಾನಿ ಮತ್ತು ಪಾನಿಪೂರಿ ಕುರಿತು ಜಾಗ್ರತೆ ವಹಿಸಬೇಕು.
ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕೆಲ ಸಾಮಾನ್ಯ ಸೋಂಕುಗಳಲ್ಲಿ ಡೆಂಗಿ, ಜ್ವರ, ನೆಗಡಿ, ನೀರು ಸೋಂಕು, ಆಹಾರ ಸೋಂಕು, ಅಜೀರ್ಣ, ಕಾಲೆರಾ ಇತ್ಯಾದಿ. ಇವುಗಳಲ್ಲಿ ಕೆಲವು ತಕ್ಷಣಕ್ಕೆ ಗುಣಮುಖ ಆಗುವುದಿಲ್ಲ. ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು ಎನ್ನುತ್ತಾರೆ ಯಶವಂತಪುರದ ಕೊಲಂಬಿಯ ಏಷಿಯಾ ರೆಫರಲ್ ಹಾಸ್ಪಿಟಲ್‍ನ ಕನ್ಸಲ್ಟಂಟ್ ಎಮರ್ಜೆನ್ಸಿ ಮೆಡಿಸಿನ್ ಡಾ. ಪವನ್ ಮಂಗಳೂರು ಅವರು.
ಮಳೆ ಅವಧಿಯಲ್ಲಿ ಸುರಕ್ಷಿತವಾಗಿ ಇರಲು ಕೈಗೊಳ್ಳಬೇಕಾದ ಕೆಲವು ಕ್ರಮಗಳು ಇಲ್ಲಿವೆ.
- ಆದಷ್ಟು ಚೆನ್ನಾಗಿ ಕೈ ತೊಳೆದುಕೊಳ್ಳಬೇಕು. ಬ್ಯಾಕ್ಟಿರಿಯಾ ಮತ್ತು ವಐರಸ್ ದೇಹವನ್ನು ಪ್ರವೇಶಿಸಲು ಕೆಲವೊಮ್ಮೆ ಕಲ್ಮಶ ಕೈಗಳೇ ಕಾರಣವಾಗಲಿವೆ. ನಿಂತ ಮಳೆ ನೀರಿನಿಂದ ಸಮಸ್ಯೆ ಆಗಲಿದೆ. ಇದು, ಬ್ಯಾಕ್ಟಿರಿಯ ಉಗಮಕ್ಕೆ ಕಾರಣವಾಗಲಿದೆ. ಮಕ್ಕಳು ಇಂಥ ನೀರನ್ನು ಮುಟ್ಟಲು ಬಯಸುತ್ತಾರೆ. ಹೀಗಾಗಿ, ನೀರು ನಿಂತ ಸಂದರ್ಭದಲ್ಲಿ ಅದನ್ನು ಮುಟ್ಟಿದಾಗ ಆದಷ್ಟು ಕೈಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.
- ಆರೋಗ್ಯಕರ ಆಹಾರ ಸೇವನೆ ಮುಂಗಾರು ಅವಧಿಯಲ್ಲಿ ಹೆಚ್ಚು ಅಗತ್ಯ. ಆದಷ್ಟು ಬೀದಿ ಬದಿಯ, ಜಂಕ್ ಫುಡ್‍ಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಹಣ್ಣು ಸೇವಿಸುವ ಮುನ್ನ ಅದನ್ನು ಸ್ವಚ್ಛವಾಗಿ ತೊಳೆಯುವುದು ಉತ್ತಮ.
- ಆದಷ್ಟು ನೀರು ಸೇವಿಸಿ. ನೀರು ನಿಮ್ಮ ದೇಹದಲ್ಲಿನ ಟಾಕ್ಸಿಕ್ ಅಂಶವನ್ನು ಹೊರಹಾಕಲು ಸಹಾಯಕ. ದೇಹ ಆರೋಗ್ಯವಾಗಿ ಇರುತ್ತದೆ. ಮನಸ್ಸಿಗೆ ಚೇತರಿಕೆ ಬರುತ್ತದೆ.
- ನೀರು ನಿಲ್ಲದಂತೆ ಎಚ್ಚರವಹಿಸಿ. ಇದು, ಸೊಳ್ಳೆಗಳ ಉಗಮಕ್ಕೆ ಕಾರಣವಾಗಲಿದೆ. ಬಕೆಟ್‍ಗಳಲ್ಲಿಯೂ ನೀರು ಇರದಂತೆ ಜಾಗ್ರತೆ ವಹಿಸಿ. ನೀರು ಇದ್ದಲ್ಲಿ ಅದನ್ನು ಸರಿಯಾಗಿ ಮುಚ್ಚಲಾಗಿದೆ ಎಂದು ಖಾತರಿಪಡಿಸಿ ಕೊಳ್ಳಬೇಕು.
- ಹಗಲಿನ ಹೊತ್ತು ಸೊಳ್ಳೆಗಳು ಬರದಂತೆ ಮನೆಯ ಕಿಟಕಿಯನ್ನು ಸgರಿಯಾಗಿ ಮುಚ್ಚಿರುವುದನ್ನು ಖಾತರಿಪಡಿಸಿಕೊಳ್ಳಿ. ಸೊಳ್ಳೆ ನಿವಾರಕ ಅಂಶಗಳನ್ನು ಬಳಸಿ.
- ಡಸ್ಟಬಿನ್ ಅನ್ನು ಬಳಕೆ ಮಾಡದಾದಾಗ ಸರಿಯಾಗಿ ಮುಚ್ಚಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.
- ಸೊಳ್ಳೆಗಳಿಂದ ದೂರ ಇರಲು ಇರುವ ಪ್ರಕೃತಿ ಸಹಜ ಕ್ರಮವೆಂದರೆ ಮನೆಯಂಗಳದಲ್ಲಿ ತುಳಸಿ ಬೆಳೆಸಿ. ಇದು, ಸೊಳ್ಳೆಗಳು ಆ ಪರಿಸರದಲ್ಲಿ ಕಾಣಿಸಿಕೊಳ್ಳದಂತೆ ನೆರವಾಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


