ಚಳಿಗಾಲದಲ್ಲಿ ಒಡೆಯುವ ಪಾದಗಳ ಆರೈಕೆಗೆ ಮನೆಮದ್ದು
ಪಾದಗಳ ಆರೈಕೆಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಪಾದಗಳ ಬಿರುಕಿಗೆ ಚಿಕಿತ್ಸೆ ನೀಡಬಹುದು. ..

ಚಳಿಗಾಲದಲ್ಲಿ ಚರ್ಮದದ ಆರೈಕೆ ಬಹು ದೊಡ್ಡ ಸಮಸ್ಯೆ. ಒಣ ಚರ್ಮದವರಿಗೆ ತಣ್ಣನೆ ಗಾಳಿಯಿಂದಾಗಿ ಪಾದಗಳು ಬಿರುಕು ಬಿಡುತ್ತವೆ. ಚರ್ಮ ಒಣಗಿ ಪಾದ ಬಿರುಕು ಪಡುವುದು ಚಳಿಗಾಲಗದಲ್ಲಿ ಸಾಮಾನ್ಯ.
ಹಾಗಂತ ಅದಕ್ಕೆ ಆರೈಕೆ ಮಾಡದೇ ಹಾಗೆ ಬಿಟ್ಟರೇ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗಾಗಿ ಪಾದಗಳ ಆರೈಕೆಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಪಾದಗಳ ಬಿರುಕಿಗೆ ಚಿಕಿತ್ಸೆ ನೀಡಬಹುದು.
ಕ್ಯಾಂಡಲ್ ನ ಮೇಣವನ್ನು ಸಾಸಿವೆ ಎಣ್ಣೆ ಜೊತೆ ಮಿಕ್ಸ್ ಮಾಡಿ ಒಡೆದ ಪಾದಗಳಿಗೆ ಹಚ್ಚಿ ಒಂದಿಡಿ ರಾತ್ರಿ ಬಿಡುವುದರಿಂದ ಕಾಲುಗಳು ಮೃದುವಾಗಿ ಬಿರುಕು ಮಾಯವಾಗುತ್ತದೆ. ಸುಮಾರು ಒಂದು ವಾರಗಳ ಕಾಲ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಗ್ಲಿಸರಿನ್ ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಸುಮಾರು 15 ದಿನಗಳ ಕಾಲ ಹಚ್ಚಿದರೇ ಉತ್ತಮ ಫಲಿತಾಂಶ ದೊರೆಯುತ್ತದೆ.
ಇನ್ನು ಎಳ್ಳೆಣ್ಣೆ ಒಡೆದ ಪಾದಗಳ ಚಿಕಿತ್ಸೆಗೆ ರಾಮಬಾಣ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಎಳ್ಳೆಣ್ಣೆ ಹಚ್ಚಿದರೇ ಕಾಲುಗಳ ಸೌಂದರ್ಯ ಇಮ್ಮಡಿಗೊಂಡು, ಪಾದಗಳಿಗೆ ಹೊಳಪು ದೊರೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


