ರೋಲ್ ಮಾಡೆಲ್
ಮಾಡೆಲ್ ಅಂದರೆ ಸ್ಲಿಮ್ ಆಂಡ್ ಟ್ರಿಮ್ ಆಗಿ, ಸೆಕ್ಸಿಯಾಗಿರಬೇಕು ಎಂಬೆಲ್ಲ ಕಲ್ಪನೆಗಳಿರುತ್ತವೆ. ಇಲ್ಲೊಬ್ಬಳು ಮಾಡೆಲ್ ಅದಕ್ಕೆ ತದ್ವಿರುದ್ಧವಾಗಿದ್ದಾಳೆ...

ಮಾಡೆಲ್ ಅಂದರೆ ಸ್ಲಿಮ್ ಆಂಡ್ ಟ್ರಿಮ್ ಆಗಿ, ಸೆಕ್ಸಿಯಾಗಿರಬೇಕು ಎಂಬೆಲ್ಲ ಕಲ್ಪನೆಗಳಿರುತ್ತವೆ. ಇಲ್ಲೊಬ್ಬಳು ಮಾಡೆಲ್ ಅದಕ್ಕೆ ತದ್ವಿರುದ್ಧವಾಗಿದ್ದಾಳೆ. ಅದನ್ನು ನೀವೀ ಚಿತ್ರದಲ್ಲೇ ಗಮನಿಸಬಹುದು.
ಈಕೆಯ ಹೆಸರಿ ಮೆಲಾನಿ ಗಿಡೋಸ್. ಈಕೆ ಹುಟ್ಟುವಾಗಲೇ ತಲೆಕೂದಲಿರಲಿಲ್ಲ. ಆಮೇಲೆ ಹಲ್ಲೂ ಹುಟ್ಟಲಿಲ್ಲ. ಈ ರೋಗದ ಹೆಸರು ಎಕ್ಟೊಡರ್ಮಲ್ ಡಿಸ್‍ಪ್ಲೇಸಿಯಾ. ಕಳೆದ ವರ್ಷ ಡೆಂಟಲ್ ಇಂಪ್ಲಾಂಟ್ ಮಾಡಿಸಿಕೊಂಡರೂ ಮತ್ತೆ ಅದನ್ನು ತೆಗೆದೆಸೆದಳು. 'ನನ್ನನ್ನು ನೋಡುವವರಿಗೆ ನನಗೆ ಹಲ್ಲಿದ್ದರೇ ಚೆನ್ನ ಎನಿಸಬಹುದು. ಆದರೆ ನನಗೆ ಹಾಗನಿಸಲ್ಲ' ಅನ್ನುತ್ತಾಳೆ.
ಈಕೆಗೆ ಮಾಡೆಲಿಂಗನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೇರೇಪಿಸಿದವನು ಈಕೆಯ ಬಾಯ್ ಫ್ರೆಂಡೇ. ಈಕೆ ಪ್ರಖ್ಯಾತ ಫ್ಯಾಶನ್ ಫೋಟೊಗ್ರಾಫರ್ ಒಬ್ಬನಿಗೆ ಬರೆದ ಚಿತ್ರಸಹಿತ ಪತ್ರವೇ ಆಕೆಯ ಮಾಡೆಲಿಂಗ್ ಕೆರಿಯರ್‍ಗೆ ಮೂಲವಾಯ್ತು. ಇಂಥ ಕಾಯಿಲೆಯೊಂದಿಗೆ ಹುಟ್ಟಿದ್ದಕ್ಕೆ ಆಕೆಗೆ ದೇವರ ಮೇಲೆ ಸಿಟ್ಟಿಲ್ಲ. ಪ್ರಸ್ತುತ ಮಾಡೆಲಿಂಗೇ ಆಕೆಯ ಗುರಿ, ಬದುಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


