ಆರೋಗ್ಯ-ಜೀವನಶೈಲಿ

ಅತಿಯಾದ ಟಿವಿ ವೀಕ್ಷಣೆಯಿಂದ ಹೆಚ್ಚು ಅನಾರೋಗ್ಯ!

ಅಮೆರಿಕಾ ಸಂಶೋಧಕರ ಪ್ರಕಾರ ಅತಿ ಹೆಚ್ಚು ಸಮಯ ಟಿವಿ ನೋಡುವುದಕ್ಕೂ ಮರಣ ಸಂಭವಿಸುವ ಅಂಶಗಳು ಕಾಡುವುದಕ್ಕೂ ಸಂಬಂಧವಿದೆಯಂತೆ.

ಅತಿಯಾದ ಟಿವಿ ವೀಕ್ಷಣೆಯಿಂದ ಹೆಚ್ಚು ಅನಾರೋಗ್ಯ!
ಅತಿಯಾದ ಟಿವಿ ವೀಕ್ಷಣೆ(ಸಾಂಕೇತಿಕ ಚಿತ್ರ)
Published On :

ವಾಷಿಂಗ್ಟನ್: ಅಮೆರಿಕಾ ಸಂಶೋಧಕರ ಪ್ರಕಾರ ಅತಿ ಹೆಚ್ಚು ಸಮಯ ಟಿವಿ ನೋಡುವುದಕ್ಕೂ ಮರಣ ಸಂಭವಿಸುವ ಅಂಶಗಳು ಕಾಡುವುದಕ್ಕೂ ಸಂಬಂಧವಿದೆಯಂತೆ. ಅಮೆರಿಕಾದಲ್ಲಿ ಶೇ.80 ರಷ್ಟು ಜನರು ದಿನವೊಂದರಲ್ಲಿ 3 .5 ಗಂಟೆ ಟಿವಿ ವೀಕ್ಷಿಸುತ್ತಾರೆ. ಹೆಚ್ಚು ಟಿವಿ ವೀಕ್ಷಿಸುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಈಹಿಂದಿನ ಸಂಶೋಧನೆಗಳಿಂದ ಪ್ರಕಾರ ಹೆಚ್ಚು ಟಿವಿ ವೀಕ್ಷಣೆಯಿಂದ ಕ್ಯಾನ್ಸರ್ ಹಾಗೂ  ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗಲಿದೆ ಎಂಬುದು ತಿಳಿದಿತ್ತು. ಈಗಿನ ಸಂಶೋಧನೆಯಿಂದ  ಮಧುಮೇಹ, ನ್ಯುಮೋನಿಯಾ, ಪಾರ್ಕಿನ್ ಸನ್ ಖಾಯಿಲೆ, ಲಿವರ್ ನಂತಹ ಮಾರಕ ಸಮಸ್ಯೆಗಳೂ ಹೆಚ್ಚಾಗಲಿವೆ ಎಂಬುದು ಬಹಿರಂಗವಾಗಿದೆ. 
ಟಿವಿ ನೋಡುವುದಕ್ಕೂ ಮಾರಕ ಸಮಸ್ಯೆಗಳು ಉಂಟಾಗುವುದಕ್ಕೂ ಇರುವ ಸಂಬಂಧದ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂದು ಸಾರಾ ಖೇಡ್ಲೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನ ವರದಿ ಅಮೆರಿಕಾದ  ಪ್ರಿವೆಂಟಿವ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.