ತೂಕ ಕಳೆದುಕೊಳ್ಳುವತ್ತ ಚಿತ್ತ ನೆಟ್ಟ ವಿಶ್ವದ ಅತಿ ತೂಕದ ವ್ಯಕ್ತಿ
೪೩೫ ಕೆಜಿ ತೂಗುವ ವಿಶ್ವದ ಅತಿ ಹೆಚ್ಚು ತೂಕದ ವ್ಯಕ್ತಿ ಮೆಕ್ಸಿಕೋದ ಆಸ್ಪತ್ರೆಯಲ್ಲಿ ತೂಕ ಇಳಿಸಿವ ಶಸ್ತ್ರಚಿಕೆತ್ಸೆಗೆ ಆಣಿಯಾಗುತ್ತಿದ್ದಾರೆ. ಅತಿ ತೂಕದಿಂದ ಹಾಸಿಗೆಯಲ್ಲೇ

ಮೆಕ್ಸಿಕೋ: ೪೩೫ ಕೆಜಿ ತೂಗುವ ವಿಶ್ವದ ಅತಿ ಹೆಚ್ಚು ತೂಕದ ವ್ಯಕ್ತಿ ಮೆಕ್ಸಿಕೋದ ಆಸ್ಪತ್ರೆಯಲ್ಲಿ ತೂಕ ಇಳಿಸಿವ ಶಸ್ತ್ರಚಿಕೆತ್ಸೆಗೆ ಆಣಿಯಾಗುತ್ತಿದ್ದಾರೆ. ಅತಿ ತೂಕದಿಂದ ಹಾಸಿಗೆಯಲ್ಲೇ ಇರಬೇಕಿದ್ದ ಈ ವ್ಯಕ್ತಿಗೆ ಗಂಭಿರವಾದ ಆರೋಗ್ಯದ ತೊಂದರೆಗಳು ಕಾಣಿಸಿಕೊಂಡಿದ್ದವು.
೩೭ ವರ್ಷದ ಆಂಡ್ರೆಸ್ ಮೊರೆನೋ ಹುಟ್ಟಿದಾಗಲೇ ೬ ಕೆಜಿ ಇದ್ದರು. ತಮ್ಮ ೧೦ನೆಯ ವಯಸ್ಸಿಗೆ ೧೨೦ ಕೆಜಿ ತೂಗುತ್ತಿದ್ದ ಇವರು ೨೦ ವಯಸ್ಸಿನ ನಂತರ ೧೭೦ ಕೆಜಿ ಯಿಂದ ೪೩೫ ಕೆಜಿ ಯವರೆಗೆ ಬೆಳೆದಿದ್ದರು ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.
ಮೆಕ್ಸಿಕೋದ ಆರ್ಬೋಲೆಡಾಸ್ ಆಸ್ಪತ್ರೆಯ ಗ್ಯಾಸ್ಟ್ರಿಕ್ ಬೈಪಾಸ್ ಘಟಕದಲ್ಲಿ ಬೊಜ್ಜು ಕರಗಿಸುವ ಶಸ್ತ್ರಚಿಕೆತ್ಸೆಗೆ ಒಳಗಾಗಲಿದ್ದಾರೆ.
"ನನ್ನ ಜೀವನದ ಹೊಸ ಅಧ್ಯಾಯಕ್ಕೆ ಕೊಂಡೊಯ್ಯುವ ಪ್ರಯಾಣ ಕೈಗೊಳ್ಳಲಿದ್ದೇಣೆ. ನನ್ನ ದೇಹ ಜೈಲಿನಂತಾಗಿದೆ ಇದನ್ನು ಮೀರುವ ಹೊಸ ಪುಸ್ತಕದ ಹೊಸ ಅಧ್ಯಾಯಕ್ಕೆ ಕಾಲಿಡಲಿದ್ದೇನೆ" ಎಂದು ಮೊರೆನೋ ತಿಳಿಸಿದ್ದಾರೆ.
ಇವರನ್ನು ಆರ್ಬೇಗಾನ್ ನ ಅವರ ಮನೆಯಿಂದ ಆಸ್ಪತ್ರೆಗೆ ಕರೆತರಲು ಏಳು ಜನರು ಸಹಾಯ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


