ಕುರುಕು ತಿಂಡಿ ತಿನ್ನುವುದರಿಂದ ಒಂದೇ ವಾರದಲ್ಲಿ ಹೆಚ್ಚುತ್ತದೆ ಕೊಬ್ಬಿನ ಅಂಶ!
ಕುರುಕು ತಿಂಡಿ ತಿನ್ನುವುದರಿಂದ ಕೇವಲ ಒಂದೇ ವಾರದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುತ್ತದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.

ವಾಷಿಂಗ್ ಟನ್: ಕುರುಕು ತಿಂಡಿ ತಿನ್ನುವುದರಿಂದ ಕೇವಲ ಒಂದೇ ವಾರದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುತ್ತದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.
ಸಮೀಕ್ಷೆಗೊಳಪಟ್ಟ ಆರು ಜನರಿಗೆ ಪ್ರತಿ ದಿನ ಪಿಜ್ಜಾ, ಬರ್ಗರ್ ಮತ್ತು ಇತರ ಜಂಕ್ ಆಹಾರ ಸೇರಿದಂತೆ 6 ,000 ಕ್ಯಾಲೊರಿ ಆಹಾರವನ್ನು ನೀಡಲಾಗಿತ್ತು, ಜಂಕ್ ಆಹಾರ ಸೇವಿಸಿದ ಎರಡೇ ದಿನಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಆರು ಜನರ ಪೈಕಿ ಮೂವರ ತೂಕದಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಇನ್ನು ಮೂವರು ತೂಕ ಹೆಚ್ಚಿಸಿಕೊಂದಿದ್ದರು. ಜಂಕ್ ಫುಡ್ ತಿಂದ ವ್ಯಕ್ತಿಗಳಲ್ಲಿ 3 .5 ಕೆ ತೂಕ ಹೆಚ್ಚಿದ್ದು ಇನ್ಸುಲಿನ್ ಪ್ರತಿರೋಧ ಲಕ್ಷಣಗಳು ಗೋಚರಿಸಿದ್ದು, 2 ನೇ ವಿಧದ ಮಧುಮೇಹದ ಪ್ರಮುಖ ಅಂಶ ಇದಾಗಿದೆ.
ಅಮೆರಿಕನ್ನರ ಸರಾಸರಿ ಆಹಾರ ಕ್ರಮ ಹಾಗೂ ಅದು ಎರಡನೇ ಹಂತದ ಮಧುಮೇಹಕ್ಕೆ ಹೇಗೆ ಕಾರಣವಾಗಲಿದೆ ಎಂಬುದನ್ನು ತಿಳಿಯಲು ಈ ಸಂಶೋಧನೆ ನಡೆಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


