ಆರೋಗ್ಯ-ಜೀವನಶೈಲಿ

ಜಾಗತಿಕ ತಾಪಮಾನ ಏರಿಕೆಯಿಂದ ಲೈಂಗಿಕ ಜೀವನಕ್ಕೆ ಧಕ್ಕೆ: ಅಧ್ಯಯನ

ನೀವು ಜಾಗತಿಕ ತಾಪಮಾನವನ್ನು ಇನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಅದು ನೀವು ಊಹಿಸಿದ್ದಕ್ಕಿಂತಲೂ ನಿಮ್ಮ ಜೀವನಕ್ಕೆ

ಜಾಗತಿಕ ತಾಪಮಾನ ಏರಿಕೆಯಿಂದ ಲೈಂಗಿಕ ಜೀವನಕ್ಕೆ ಧಕ್ಕೆ: ಅಧ್ಯಯನ
ಸಾಂದರ್ಭಿಕ ಚಿತ್ರ
Published On :

ಲಂಡನ್: ನೀವು ಜಾಗತಿಕ ತಾಪಮಾನವನ್ನು ಇನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಅದು ನೀವು ಊಹಿಸಿದ್ದಕ್ಕಿಂತಲೂ ನಿಮ್ಮ ಜೀವನಕ್ಕೆ ಹೆಚ್ಚು ಹಾನಿ ಉಂಟುಮಾಡುತ್ತಿದೆ.

ನೂತನ ಸಂಶೋಧನೆಯೊಂದರ ಪ್ರಕಾರ ತಾಪಮಾನ ಹೆಚ್ಚಿದಂತೆ ಸಂಭೋಗದ ಆವರ್ತನ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ತಿಳಿಸಿದೆ ಎಂದು ದ ಇಂಡಿಪೆಂಡೆಂಟ್ ಪತ್ರಿಕೆ ತಿಳಿಸಿದೆ.

ಹೆಚ್ಚು ತಾಪಮಾನದ ದಿನದ ನಂತರದ ಒಂಭತ್ತು ತಿಂಗಳುಗಳಲ್ಲಿ ಜನನ ಅನುಪಾತ ತಣ್ಣಗಿನ ದಿನಕ್ಕಿಂತಲೂ ೦.೭ ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಇದು ತಿಳಿಸಿವುದೇನೆಂದರೆ ಹೆಚ್ಚಿನ ತಾಪಮಾನದ ದಿನಗಳಲ್ಲಿ ಅಂಡಾಣು-ವೀರ್ಯಾಣು ಫಲವತ್ತತೆ ಕಡಿಮೆಯಾಗುತ್ತದೆ ಅಥವಾ ಸಂಭೋಗದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಅಥವಾ ಎರಡು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವೈಪರೀತ್ಯ ತಾಪಮಾನದಿಂದ ಜನನದ ಸಂಖ್ಯೆಯಲ್ಲಿ ಇಳಿಮುಖವಾಗುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ಅದು ಸಂಭೋಗ ಅನುಪಾತದ ಇಳಿಮುಖಕ್ಕೂ ಕಾರಣ ಎಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.