ಆರೋಗ್ಯ-ಜೀವನಶೈಲಿ

ಎಚ್‍ಐವಿ ನಾಶಕ್ಕೆ ಹೊಸ ಕಾರ್ಯತಂತ್ರ

ಏಡ್ಸ್ ಗೆ ಕಾರಣವಾಗುವ ಎಚ್ ಐವಿ ವೈರಸ್ ಅನ್ನೇ ನಾಶಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮಹತ್ವದ ಹೆಜ್ಜೆಯಿಟ್ಟಿದ್ದಾರೆ...

ಎಚ್‍ಐವಿ ನಾಶಕ್ಕೆ ಹೊಸ ಕಾರ್ಯತಂತ್ರ
ಸಾಂದರ್ಭಿಕ ಚಿತ್ರ
Published On :

ಲಂಡನ್: ಏಡ್ಸ್ ಗೆ ಕಾರಣವಾಗುವ ಎಚ್ ಐವಿ ವೈರಸ್ ಅನ್ನೇ ನಾಶಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

ಹ್ಯೂಮನ್ ಇಮ್ಯೂನೋ ಡಿಫಿಶಿಯನ್ಸಿ ವೈರಸ್(ಎಚ್‍ಐವಿ)ನ ಸಕ್ಕರೆ ಮತ್ತು ಪೌಷ್ಟಿಕಾಂಶ ಸಾಗಾಟದ ಪೈಪ್‍ಲೈನ್ ಅನ್ನೇ ಬ್ಲಾಕ್ ಮಾಡುವ ಮೂಲಕ ವೈರಸ್ ಅನ್ನು ಸಾಯುವಂತೆ ಮಾಡಬಹುದು ಎಂದು ನಾರ್ತ್‍ವೆಸ್ಟರ್ನ್ ಮೆಡಿಸಿನ್ ಮತ್ತು ವ್ಯಾಂಡರ್‍ಬಿಲ್ಟ್ ಯುನಿವರ್ಸಿಟಿ ಸಂಶೋಧಕರು ಕಂಡುಕೊಂಡಿದ್ದಾರೆ.

ಒಂದು ಸಕ್ರಿಯವಾದ ಪ್ರತಿರಕ್ಷಿತ ಕೋಶದೊಳಕ್ಕೆ ವೈರಸ್ ಪ್ರವೇಶಿಸಿದ ಬಳಿಕ, ಅದು ಕೋಶದಲ್ಲಿರುವ ಸಕ್ಕರೆ ಮತ್ತು ಪೋಷಕಾಂಶಗಳನ್ನು ಹೀರಿಕೊಂಡು ಬೆಳೆಯಲಾರಂಭಿಸುತ್ತದೆ. ಹಾಗಾಗಿ ಈ ಸಕ್ಕರೆ, ಪೌಷ್ಟಿಕಾಂಶ ಸಾಗಾಟದ ಪೈಪ್‍ಲೈನ್ ಅನ್ನೇ ಬ್ಲಾಕ್ ಮಾಡಿದರೆ ಸೋಂಕುಳ್ಳ ವೈರಸ್‍ನ ಬೆಳವಣಿಗೆ ಕುಂಠಿತಗೊಂಡು, ಅದು ಸಾಯುತ್ತದೆ ಎನ್ನುವುದು ವಿಜ್ಞಾನಿಗಳ ವಾದ. ಫೋಸ್ಪೋಲಿಪೇಸ್ ಡಿ1(ಪಿಎಲ್‍ಡಿ1) ಎಂಬ ಕೋಶ ಘಟಕವನ್ನು ಬಳಸಿ ಪೈಪ್‍ಲೈನ್‍ಗೆ ತಡೆಯೊಡ್ಡಬಹುದು ಎನ್ನುತ್ತಾರೆ ಅವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.