ಆರೋಗ್ಯ-ಜೀವನಶೈಲಿ

ಮಾಹಿತಿ ಹರಡಿ ... ವೈರಸ್‍ನಲ್ಲ... ಹೆಪಟೈಟಿಸ್ ಸಿ ನಿಂದ ಗುಣಹೊಂದಿ

ಹೆಪಟೈಟಿಸ್ ಸಿ ಅನ್ನೋದು ಒಂದು ರೀತಿಯ ವೈರಸ್. ಇದು ಗಂಭಿರ ಪಿತ್ತಜನಕಾಂಗದ ರೋಗವನ್ನು ಉಂಟುಮಾಡುತ್ತದೆ ಮತ್ತು...

ಮಾಹಿತಿ ಹರಡಿ ... ವೈರಸ್‍ನಲ್ಲ... ಹೆಪಟೈಟಿಸ್ ಸಿ ನಿಂದ ಗುಣಹೊಂದಿ
ಹೆಪಟೈಟಿಸ್ ಸಿ
Published On :

ಬೆಂಗಳೂರು, ಜುಲೈ 23, 2015: ಹೆಪಟೈಟಿಸ್ ಸಿ ಅನ್ನೋದು ಒಂದು ರೀತಿಯ ವೈರಸ್. ಇದು ಗಂಭಿರ ಪಿತ್ತಜನಕಾಂಗದ ರೋಗವನ್ನು ಉಂಟುಮಾಡುತ್ತದೆ ಮತ್ತು ಸಿರೋಸಿಸ್, ಪಿತ್ತಜನಕಾಂಗದ ವೈಫಲ್ಯದ ಯಕೃತ್ತಿನ ಕ್ಯಾನ್ಸರ್ ಅಂತಹ ರೋಗಗಳಿಗು ಕಾರಣವಾಗಬಹುದು

ಹೆಪಟೈಟಿಸ್ ಸಿ ಒಂದು ನಿಶ್ಯಬ್ದ ಸಾಂಕ್ರಾಮಿಕ ಎಂದು ಕರೆಯಲಾಗುತ್ತದೆ ಏಕೆಂದರೆ ಈ ಸೋಂಕು ಉಳ್ಳವರಿಗೆ ಅನೇಕ ವರ್ಷಗಳ ಕಾಲ ಯಾವ ಲಕ್ಷಣಗಳು ತೋರ್ಪಡುವುದಿಲ್ಲ ಇದರಿಂದಾಗಿ ಸೋಂಕು ಇರುವ ವಿಷಯವೇ ಗೋತ್ತಾಗುವುದಿಲ್ಲ. ಯಕೃತ್ತಿನ ವೈಫಲ್ಯ ಯಕೃತ್ತಿನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಸೋಂಕು ತಗುಳಿದ ನಂತರ 2-3 ದಶಕಗಳಲ್ಲಿ ಸಂಭವಿಸಬಹುದು.

ಹೆಪಟೈಟಿಸ್ ಸೋಂಕು ಗಮನಾರ್ಹ ಜಾಗತಿಕ ಆರೋಗ್ಯ ಸಮಸ್ಯೆ, HCV ಇದು - ಸಂಬಂಧಿಸಿದ ಕಾರಣಕ್ಕಾಗಿ ವಾರ್ಷಿಕವಾಗಿ ಸುಮಾರು 5,00,000 ತಡೆಗಟ್ಟಬಹುದಾದ ಸಾವುಗಳಿಗೆ ಕಾರಣವಾಗುತ್ತದೆ.

ದೀರ್ಘಕಾಲದ ಹೆಪಟೈಟಿಸ್ ಸಿ ಉಳ್ಳವರು ಕಾಯಿಲೆಯ ಲಕ್ಷಣಗಳು ಹೊಂದಿರುವುದಿಲ್ಲ, ಆದ್ದರಿಂದ ಅವರು ಪರಿಕ್ಷೆಗಳನ್ನು ಮಾಡದ ಹೊರತು ಅವರಿಗೆ ಸೋಂಕು ಇರುವುದು ಗೊತ್ತಾಗುವುದಿಲ್ಲ. ತೀವ್ರವಾದ ಹೆಪಟೈಟಿಸ್ ಸಿ ಉಳ್ಳ ಜನರು ಯಾವ ಲಕ್ಷಣಗಳು ಅಥವಾ ಅನಾರೋಗ್ಯ ಇಲ್ಲದೆ ದಶಕಗಳವರೆಗೆ ಬದುಕಬಲ್ಲರು. ಲಕ್ಷಣಗಳು ಕಾಣಿಸಿಕೊಂಡಾಗ ಅದು ಅಡ್ವಾನ್ಸಡ್ ಯಕೃತ್ತು ರೋಗದ ಚಿಹ್ನೆಯಾಗಿರುತ್ತದೆ. ಹೆಪಟೈಟಿಸ್ ಸಿ ಲಕ್ಷಣಗಳು ಅಂದರೆ: ಜ್ವರ, ಆಯಾಸ, ಹಸಿವಾಗದಿರುವುದು, ಪಿತ್ತೋದ್ರೇಕ, ವಾಂತಿ, ಹೊಟ್ಟೆ ನೋವು, ಗಾಢ ಮೂತ್ರ, ಬೂದು ಬಣ್ಣದ ಸ್ಟೋಲ್ಸ್, ಕೀಲು ನೋವು ಮತ್ತು/ಅಥವಾ ಕಾಮಾಲೆ.

ಡಾ. ಲೋರೆನ್ಸ್ ಪೀಟರ್, ಹೆಚ್‍ಒಡಿ,  ಗ್ಯಾಸ್ಟ್ರೋಎಂಟರೊಲಾಜಿಸ್ಟ್, ಮಣಿಪಾಲ್ ಆಸ್ಪತೆ ಹೇಳುವಂತೆ, “ಹೆಪಟೈಟಿಸ್ ಸಿ  ವೈರಸ್ ಪಡೆದ ಕೆಲ ವ್ಯಕ್ತಿಗಳು ತಮಗೆ ತಗುಳಿದ ವೈರಸ್ ಅನ್ನು ತೆರವುಗೊಳಿಸಲು ಅಥವಾ ತೊಡೆದುಹಾಕಲು ಸಾಧ್ಯವಾಗುತ್ತದೆ, ಆದರೆ ಸೋಂಕು ತಗುಲಿದ ಬಹಳಷ್ಟು ಜನರಲ್ಲಿ ದಿರ್ಘಕಾಲದ ಅಥವಾ ಜೀವನ ಪೂರ್ತಿ ಸೋಂಕು ಅಭಿವೃದ್ದಿಯಾಗುತ್ತಲೇ ಇರುತ್ತದೆ. ಕಾಲಾನಂತರದಲ್ಲಿ, ದೀರ್ಘಕಾಲದ ಹೆಪಟೈಟಿಸ್ ಸಿ ಉಳ್ಳವರು ಪಿತ್ತಜನಕಾಂಗದ ಡ್ಯಾಮೇಜ್ ಅಥವಾ ಸಿರೋಸಿಸ್, ಪಿತ್ತಜನಕಾಂಗದ ವೈಫಲ್ಯ ಅಥವಾ ಲಿವರ್ ಕ್ಯಾನ್ಸರ್ ಸೇರಿದಂತೆ ಗಂಭೀರ ಪಿತ್ತಜನಕಾಂಗದ ಸಮಸ್ಯೆಗಳಿಗೆ ಒಳಗಾಗುತ್ತಾರೆ.”

ಸುಮಾರು 100ರಲ್ಲಿ 75 ರಷ್ಟು ಮಂದಿ ಹೆಪಟೈಟಿಸ್ ಸಿ ಪಡೆಯುತ್ತಾರೆ ಮತ್ತು ಅವರಲ್ಲಿ ತೀವ್ರ(ದೀರ್ಘಕಾಲದ) ಸೋಂಕು ಅಭಿವೃದ್ದಿಯಾಗುತ್ತದೆ.

ಸುಮಾರು 75ರಲ್ಲಿ 20ರಷ್ಟು ತೀವ್ರವಾದ ಹೆಪಟೈಟಿಸ್ ಸಿ  ಹೊಂದಿರುವ ಮಂದಿ ತೀವ್ರ ಅನಾರೋಗಕ್ಕೆ ಅಥವಾ ರೋಗಕ್ಕೆ ಒಳಗಾಗುತ್ತಾರೆ. ತಿವ್ರವಾಗಿ ಯಕೃತ್ತನ್ನು ಡ್ಯಾಮೇಜ್ ಮಾಡಲು ಸಾಮಾನ್ಯವಾಗಿ ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ.

ಹೆಪಟೈಟಿಸ್ ಸಿ ಸಾಮಾನ್ಯವಾಗಿ, ಹೆಪಟೈಟಿಸ್ ಸಿ ಸೋಂಕಿತ ವ್ಯಕ್ತಿಯ ರಕ್ತದ ಜೊತೆ ಸೋಂಕು ಇಲ್ಲದ ವ್ಯಕ್ತಿಯ ರಕ್ತ ಸಂಪರ್ಕಕ್ಕೆ ಬಂದಾಗ ಹರಡುವುದು. ಇದು ಅನೇಕ ರೀತಿಯ ಮೂಲಕ ಸಂಭವಿಸಬಹುದು. ಭಾರತದಲ್ಲಿ ಹೆಪಟೈಟಿಸ್ ಸಿ  ಸೋಂಕು ತಗಲುವ ಅತ್ಯಂತ ಸಾಮಾನ್ಯ ವಿಧಾನ ಎಂದರೆ ರಕ್ತವರ್ಗಾವಣೆ, ಅದರಲ್ಲು ವಿಶೇಷವಾಗಿ 2001ಕ್ಕೆ ಮೊದಲು ಅನೇಕ ರಕ್ತರ್ವರ್ಗಾವಣೆಯ ಮಾಡಿಸಿಕೊಂಡವರಲ್ಲಿ ಇರಬಹುದು. ಇನ್ನು ಕೆಲವರಿಗೆ ಔಷಧಿಗಳ ಚುಚ್ಚು ಸೂಜಿಗಳು ಅಥವಾ ಇತರ ಉಪಕರಣಗಳನ್ನು ಹಂಚಿಕೊಳ್ಳುವ ಮೂಲಕ ಹೆಪಟೈಟಿಸ್ ಸಿ ಸೋಂಕು ತಗಲುಬಹುದು. ಮತ್ತಷ್ಟು ಜನರಿಗೆ ಮನೆಗಳಲ್ಲಿ ಅಥವಾ ಇತರ ಪರವಾನಗಿರಹಿತ ಅಥವಾ ಅನೌಪಚಾರಿಕ ಸೌಲಭ್ಯಗಳಿರುವ ಕಡೆ ದೇಹದ ಚುಚ್ಚುವಿಕೆ ಅಥವಾ ಹಚ್ಚೆ ಹಾಕಿಸುವುದರಿಂದ ಹೆಪಟೈಟಿಸ್ ಸಿ ಸೋಂಕಿಗೆ ಒಳಪಡಬಹುದು. ಅಪರೂಪದ ಸಂದರ್ಭಗಳಲ್ಲಿ ಹೆಪಟೈಟಿಸ್ ಸಿ ಲೈಂಗಿಕವಾಗಿ ಕೂಡ ಹರಡುವ ಸಾಧ್ಯತೆ ಇರಬಹುದು. ಹೆಪಟೈಟಿಸ್ ಸಿ ಇರುವ ತಾಯಂದಿರಿಗೆ ಹುಟ್ಟುವ ಮಕ್ಕಳು ಹೆರಿಗೆ ಸಮಯದಲ್ಲಿ ಸೋಂಕು ಪಡೆಯಬಹುದು. ಕೆಲವರು ಈ ಅಪಾಯಕಾರಿ ಅಂಶಗಳಲ್ಲಿ ಯಾವುದೇ ಸಂಪರ್ಕ ಇಲ್ಲದಿದ್ದರೂ ಕೂಡ ಸೋಂಕಿತರಾಗಬಹುದು. ಸೋಂಕಿತ ವ್ಯಕ್ತಿಯ ರೇಜರ್ ಅಥವಾ ಹಲ್ಲುಜ್ಜುವ ಬ್ರಷ್ ಅಥವಾ ಚೂಪಾದ ವಸ್ತುಗಳು (ಉದಾ: ಉಗುರು ಟ್ರಿಮ್ಮರ್ನಲ್ಲಿ) ಹಂಚಿಕೆ ಮಾಡುವ ಮೂಲಕ ಕೂಡ ಜನರು ಸೋಂಕಿತರಾಗಬಹುದು.

ಹೆಪಟೈಟಿಸ್ ಸಿ ಅನ್ನು ವಿವಿಧ ರಕ್ತ ಪರೀಕ್ಷೆಗಳಿಂದ ಅರಿತುಕೊಳ್ಳಬಹುದು ಮತ್ತು ಕೆಲವೊಮ್ಮೆ ಪಿತ್ತಜನಕಾಂಗದ ಬಯಾಪ್ಸಿ ಮಾಡಿಸಿ ಯಕೃತ್ತು ಆರೋಗ್ಯಕ್ಕೆ ಪ್ರಭಾವಿತವಾಗಿದೆಯೇ ಎಂದು ಪರಿಶೀಲಿಸುವುದರಿಂದ ತಿಳಿಯಬಹುದು.

ಡಾ. ಪರ್ವೇಶ್ ಕುಮಾರ್ ಜೈನ್, ಹೆಚ್‍ಒಡಿ, ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗ, ವಿಕ್ಟೋರಿಯ ಆಸ್ಪತ್ರೆ, ಹೇಳುವ ಪ್ರಕಾರ, “HCV ಆರಂಭಿಕ ಹಂತಗಳಲ್ಲಿ ಸಾಮಾನ್ಯವಾಗಿ ಲಕ್ಷಣಗಳಿಲ್ಲದ ಕಾರಣ, ಸ್ಕ್ರೀನಿಂಗ್ ಬಗ್ಗೆ ಜಾಗೃತಿ ಹೆಚ್ಚಿಸಬೇಕು, ಅದರಿಂದಾಗಿ ಹೆಚ್ಚು ರೋಗಿಗಳಲ್ಲಿ ಸಿರೋಸಿಸ್ ಅಥವಾ ಪಿತ್ತಜನಕಾಂಗದ ಕ್ಯಾನ್ಸರ್ ಆರಂಭವಾಗುವ ಮೋದಲೇ ಪತ್ತೆಹಚ್ಚಬಹುದು, ಯಾವುದೆ ನಿರೋಧಕ ಲಸಿಕೆ ಇಲ್ಲದಿದ್ದರೂ, ಬಹಳಷ್ಟು ಹೆಪಟೈಟಿಸ್ ಸಿ ರೋಗಿಗಳಲ್ಲಿ 12-24 ವಾರಗಳಲ್ಲಿ ಹೊಸ ಪ್ರಬಲವಾದ ಪೋಟೆಂಟ್ ಓರಲ್ ಡ್ರಗ್ ಬಳಸಿ ಗುಣಪಡಿಸಬಹುದಾಗಿದೆ. ಪ್ರತಿ ವರ್ಷ, ಜುಲೈ 28 ರಂದು ‘ವಿಶ್ವ ಹೆಪಟೈಟಿಸ್ ದಿನ’ ಎಂದು ನೆನೆಪಿಸಿಕೊಳ್ಳಲಾಗುತ್ತದೆ ಮತ್ತು ಬೃಹತ್ ಸಾರ್ವಜನಿಕ ಮತ್ತು ಮಾಧ್ಯಮ ಆಸಕ್ತಿಯನ್ನು ಬೆಳೆಸಲು ಜೊತೆಗೆ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಅಂತರರಾಷ್ಟೀಯ ಸಂಸ್ಥೆಯಂತಹ ವಿಶ್ವ ಆರೋಗ್ಯ ಸಂಸ್ಥೆ(WHO)ಯಿಂದ ಬೆಂಬಲವನ್ನು ಪಡೆಯಲು ಕೂಡ ನೆರವಾಯಿತು. ಇದು ರೋಗಿಗಳು, ಪಾಲಿಸಿ ನಿರೂಪಕರು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಟ್ಟಿಗೆ ಸೇರಿಸಿ ವೈರಲ್ ಹೆಪಟೈಟಿಸ್ ಜಾಗತಿಕ ಹೊರೆಯನ್ನು ಕಡಿಮೆಮಾಡಲು ನೆರವಾಯಿತು.”

ಯಾವುದೇ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡಾಗ ನಿಮ್ಮ ವೈದ್ಯರ ಜೊತೆಯಲ್ಲಿ ಹೆಪಟೈಟಿಸ್ ಸಿ  ಬಗ್ಗೆ ಮಾತನಾಡಿ ಸಲಹೆ ಪಡೆಯಿರಿ. ಇದು ಮಾರಕಕ್ಕೆ ತಿರುಗುವ ಮೊದಲು ಗುಣಪಡಿಸಲು ಸಹಾಯ ಮಾಡುವ ಅನೇಕ ಪರಿಣಾಮಕಾರಿ ಔಷಧಿಗಳು ಇಂದು ಲಭ್ಯವಿದೆ.

ಲಕ್ಷಣಗಳು

  • ರೋಗಿಗಳಲ್ಲಿ ಸಾಮಾನ್ಯವಾಗಿ ರೋಗಲಕ್ಷಣಗಳು ಇರುವುದಿಲ್ಲ
  • ಕೆಲವು ರೋಗಿಗಳು ಈ ಲಕ್ಷಣಗಳನ್ನು ಹೊಂದಿರಬಹುದು.
  • ಜ್ವರ, ಬಳಲಿಕೆ, ತಲೆನೋವು.
  • ಹಸಿವಿಲ್ಲದಿರುವಿಕೆ, ವಾಕರಿಕೆ, ಹೊಟ್ಟೆ ನೋವು.
  • ಡಾರ್ಕ್ ಮೂತ್ರ, ಜೇಡಿ-ಬಣ್ಣದ ಸ್ತೂಲ್ಸ್.
ಹರಡಿಕೆ
  • ವಿಶ್ವದಾದ್ಯಂತ ಸುಮಾರು 185 ಮಿಲಿಯನ್ ಜನರು ಹೆಪಟೈಟಿಸ್ ಸಿ ವೈರಸ್ (HCV) ಸೋಂಕಿತರಾಗಿದ್ದಾರೆ.
  • ಭಾರತದಲ್ಲಿ ಹೆಚ್‍ಸಿವಿ ಹರಡಿರುವ ಪ್ರಮಾಣದ ಅಂದಾಜು 0.5 ರಿಂದ 1.5% ಅಂದರೆ ಸುಮಾರು 12-15 ಮಿಲಿಯನ್ ರೋಗಿಗಳು ಹೆಪಟೈಟಿಸ್ ಸಿ ಸೋಂಕಿತರಾಗಿದ್ದಾರೆ.
  • ಹೆಪಟೈಟಿಸ್ ಸಿ ಇರುವ ರೋಗಿಗಳಿಗೆ ಎಚ್‍ಐವಿ/ಏಡ್ಸ್ ಹೊಂದಿರುವ ಸೋಂಕಿಗಿಂತ ಅನೇಕ ಪಟ್ಟು ಪ್ರಬಲವಾಗಿರುತ್ತದೆ.
  • ಜಾಗತಿಕವಾಗಿ ಹೆಪಟೈಟಿಸ್ ಸಿ ಯಕೃತ್ತಿನ ಸಿರೋಸಿಸ್ 28% ಇದ್ದರೆ ಮತ್ತು ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳು 26% ಇದೆ.
ಅಪಾಯದಲ್ಲಿರುವ ಜನರು
  • ಸೋಂಕಿತ ವ್ಯಕ್ತಿಯೊಂದಿಗೆ ಔಷಧ ಸೂಜಿಗಳು ಹಂಚಿಕೊಳ್ಳುವವರು.
  • ಜಾಗತಿಕವಾಗಿ ಡ್ರಗ್ ಬಳಸುವ 67% ಜನರು ಹೆಪಟೈಟಿಸ್ ಸಿ ಸೋಂಕಿತರು.
  • ರಕ್ತವರ್ಗಾವಣೆ ಅಥವಾ ಅಸುರಕ್ಷಿತ ಚುಚ್ಚುಮದ್ದು ಪಡೆದವರು.
  • ಅಸುರಕ್ಷಿತ ಚುಚ್ಚುಮದ್ದಿನಿಂದ ಹೊಸ ಹೆಪಟೈಟಿಸ್ ಸಿ ಸೋಂಕು ಪಡೆದವರು 42%
  • ರಕ್ತ ಶುದ್ದೀಕರಣದ ರೋಗಿಗಳು ಮತ್ತು ಸೋಂಕಿತ ವ್ಯಕ್ತಿಯಿಂದ ಅಂಗಾಂಗ ಕಸಿ ಪಡೆದವರು.
  • ಹೆಪಟೈಟಿಸ್ ಸಿ ಇರುವ ತಾಯಂದಿರ ಮಕ್ಕಳು
  • ಹಚ್ಚೆ ಅಥವಾ ಪಾಶ್ಚೀಕರಿಸದ ಉಪಕರಣಗಳಿಂದ ಚುಚ್ಚಿದವರು
  • ಸೋಂಕು ಪೀಡಿತ ರೇಜರ್ ಅಥವಾ ಬ್ರಷ್ ಹಂಚಿಕೊಂಡ ಜನರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.