ಸ್ಮಾರ್ಟ್ ಫೋನ್ ನಿಂದ ಕಲಿಕಾ ಪ್ರಕ್ರಿಯೆಗೆ ಹಾನಿ!
ಸ್ಮಾರ್ಟ್ ಫೋನ್ ಬಳಕೆದಾರರ ಬಗ್ಗೆ ನಡೆದ ಅಧ್ಯಯನದಲ್ಲಿ ಸ್ಮಾರ್ಟ್ ಫೋನ್ ನಿಂದ ಕಲಿಕಾ ಪ್ರಕ್ರಿಯೆಗೆ ಹಾನಿ ಉಂಟಾಗಲಿದೆ ಎಂಬ ಅಂಶ ಬಯಲಾಗಿದೆ.

ವಾಷಿಂಗ್ ಟನ್: ಸ್ಮಾರ್ಟ್ ಫೋನ್ ಬಳಕೆದಾರರ ಬಗ್ಗೆ ನಡೆದ ಅಧ್ಯಯನದಲ್ಲಿ ಸ್ಮಾರ್ಟ್ ಫೋನ್ ನಿಂದ ಕಲಿಕಾ ಪ್ರಕ್ರಿಯೆಗೆ ಹಾನಿ ಉಂಟಾಗಲಿದೆ ಎಂಬ ಅಂಶ ಬಯಲಾಗಿದೆ.
ರೈಸ್ ವಿವಿ ನಡೆಸಿದ ಅಧ್ಯಯನದಲ್ಲಿ ಬಳಕೆದಾರರು ಸ್ಮಾರ್ಟ್ ಫೋನ್ ಯಿಂದಾಗುವ ಪರಿಣಾಮಗಳ ಬಗ್ಗೆ ಮಾತನಾಡಿದ್ದು ತಮ್ಮ ಕಲಿಕಾಶಕಿಯನ್ನೇ ಕಸಿಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ ಫೋನ್ ಬಳಕೆ ಹಾಗು ಅದರಿಂದ ಕಲಿಕೆಯ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಪ್ರೊ. ಫಿಲಿಪ್ ಕಾರ್ಟಮ್ ಮಾತನಾಡಿದ್ದು "ಸ್ಮಾರ್ಟ್ ಫೋನ್ ತಂತ್ರಜ್ಞಾನ ಜಾಗತಿಕ ಮಾರುಕಟ್ಟೆಯನ್ನು ವ್ಯಾಪಿಸಿದ್ದು ಕಾಲೇಜುಗಳ ವ್ಯವಸ್ಥೆಯಲ್ಲಿ ಇದರ ಬಳಕೆ ಅತಿ ಹೆಚ್ಚು ಕಂಡುಬರುತ್ತಿದೆ.
ಈ ಅಧ್ಯಯನದಲ್ಲಿ, ಪ್ರಥಮ ಬಾರಿಗೆ ಸ್ಮಾರ್ಟ್ ಫೋನ್ ಬಳಕೆ ಮಾಡಿದ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪ್ರಾರಂಭದ ಹಂತದಲ್ಲಿ ಸ್ಮಾರ್ಟ್ ಫೋನ್ ನಿಂದ ತಮ್ಮ ಕಲಿಕೆಯ ಶಕ್ತಿ ಹೆಚ್ಚಲಿದೆ ಎಂದು ಭಾವಿಸಿದ್ದರು. ಆದರೆ ಅಧ್ಯಯನದ ಅಂತ್ಯದಲ್ಲಿ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಫಿಲಿಪ್ ಕಾರ್ಟಮ್ ತಿಳಿಸಿದ್ದಾರೆ.
2010 -2011 ನಡುವಿನ ಅಧ್ಯಯನದಲ್ಲಿ ಪ್ರಥಮ ಬಾರಿಗೆ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿದ 24 ಜನರನ್ನು ಸಮೀಕ್ಷೆಗೊಳಪಡಿಸಲಾಗಿದೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ಅನೇಕ ವಿಷಯಗಳು ಈ ಸಮೀಕ್ಷೆಯಿಂದ ತಿಳಿದುಬಂದಿದೆ.
ನಿರ್ದಿಷ್ಟ ನಿರ್ದೇಶನ ಕಲಿಕಾ ಚಟುವಟಿಕೆಗಳಲ್ಲಿ ಇಲ್ಲದೆ ಸ್ಮಾರ್ಟ್ ಫೋನ್ ಬಳಸುವುದು ಉಳಿದ ಎಲ್ಲಾ ರೀತಿಯ ಕಲಿಕಾ ಶಕ್ತಿಗೆ ಹಾನಿ ಉಂಟು ಮಾಡಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಈ ವರದಿ ಶಿಕ್ಷಣ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬ್ರಿಟೀಷ್ ಜರ್ನಲ್ ನಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


