ಚರ್ಮದ ಕ್ಯಾನ್ಸರ್ ತಡೆಗೆ ಕಾಫಿ ಕುಡಿಯಿರಿ
ದಿನಕ್ಕೆ ನಾಲ್ಕು ಕಪ್ ಕಾಫಿ ಸೇವನೆ ಮಾಡುವುದರಿಂದ ಚರ್ಮದ ಕ್ಯಾನ್ಸರ್‌ನ್ನು ತಡೆಗಟ್ಟಬಹುದು!...

ದಿನಕ್ಕೆ ನಾಲ್ಕು ಕಪ್ ಕಾಫಿ ಸೇವನೆ ಮಾಡುವುದರಿಂದ ಚರ್ಮದ ಕ್ಯಾನ್ಸರ್‌ನ್ನು ತಡೆಗಟ್ಟಬಹುದು! ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ ತಜ್ಞರು ದಿನಾ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಕಪ್ ಕಾಫಿ ಸೇವನೆ ಮಾಡುವವರಲ್ಲಿ ಮಾರಕ melanoma ( ಚರ್ಮದ ಮೇಲ್ಪದರಲ್ಲಿ ಹರಡುವ ಕ್ಯಾನ್ಸರ್) ಪ್ರಮಾಣ ಶೇ.20ರಷ್ಟು ಕಡಿಮೆಯಿರುತ್ತದೆ ಎಂದು ಹೇಳಿದ್ದಾರೆ.
ಕಾಫಿಯ ಸೇವನೆ ದೇಹಕ್ಕೆ ಒಳ್ಳೆಯದು ಎಂಬುದು ನಮ್ಮ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಅಧ್ಯಯನ ತಂಡದ ರಿಸರ್ಚರ್ ಎರಿಕಾ ಲಾಫ್ಟ್‌ಫೀಲ್ಡ್ ಹೇಳಿದ್ದಾರೆ.
ಅಧ್ಯಯನ ತಂಡವು ಕಳೆದ 10 ವರ್ಷದಲ್ಲಿ 447,357 ಜನರ ಮೇಲೆ ಆರೋಗ್ಯರೀತಿಯ ಬಗ್ಗೆ ಅಧ್ಯಯನ ನಡೆಸಿದೆ. ಅದರಲ್ಲಿ 2,904 ಜನರಿಗೆ ಮೆಲಾನೋಮಾ ಇದ್ದರೆ, 1,874 ಜನರಲ್ಲಿ ಪ್ರಾಥಮಿಕ ಹಂತದ ಮೆಲಾನೋಮಾ ಕಂಡು ಬಂದಿದೆ.
ಆದಾಗ್ಯೂ, ಕಾಫಿ ಸೇವನೆ ಮಾಡುವವರಲ್ಲಿ ಇತರರಿಗೆ ಹೋಲಿಸಿದರೆ ಮೆಲಾನೋಮಾ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಕಾಫಿ ಸೇವನೆ ಚರ್ಮದ ಕ್ಯಾನ್ಸರ್‌ನ್ನು ತಡೆಯಲು ಸಹಕಾರಿಯಾಗಿದೆ ಎಂದು ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದೆ.
(ಅಧ್ಯಯನ ವರದಿ Journal of the National Cancer Institute ನಲ್ಲಿ ಪ್ರಕಟವಾಗಿದೆ.)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


