ಸರಳ ಮದ್ದು ಶುಂಠಿ
ಸಾವಿರಾರು ವರ್ಷಗಳಿಂದಲೂ ಶುಂಠಿ ನಮ್ಮ ಆಹಾರ ಸಂಸ್ಕೃತಿ ಮತ್ತು ಔಷಧ ಸಂಸ್ಕೃತಿ ಎರಡರಲ್ಲೂ ಮಹತ್ವದ ಸ್ಥಾನ ಗಳಿಸಿಕೊಂಡಿದೆ.

ಸಾವಿರಾರು ವರ್ಷಗಳಿಂದಲೂ ಶುಂಠಿ ನಮ್ಮ ಆಹಾರ ಸಂಸ್ಕೃತಿ ಮತ್ತು ಔಷಧ ಸಂಸ್ಕೃತಿ ಎರಡರಲ್ಲೂ ಮಹತ್ವದ ಸ್ಥಾನ ಗಳಿಸಿಕೊಂಡಿದೆ. ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಇದರ ಬಳಕೆ ಹೆಚ್ಚು.
ಶೀತವಾಗಲಿ, ಅಜೀರ್ಣವಾಗಲಿ, ತಲೆನೋವಾಗಲಿ... ಮನೆಮದ್ದುಗಳ ಪೈಕಿ ತಕ್ಷಣ ನೆನಪಿಗೆ ಬರುವುದು ಶುಂಠಿ. ಅರ್ಧಕಪ್ ಶುಂಠಿ ಕಷಾಯ ಕುಡಿದರೆ ಸಣ್ಣಪುಟ್ಟ ತೊಂದರೆಗಳೆಲ್ಲಾ ಮಾಯ. ಹೀಗಾಗಿಯೇ ನಮ್ಮ ಹಿತ್ತಲುಗಳಲ್ಲಿ ಶುಂಠಿಗಿಡಕ್ಕೆ ಕಾಯಂ ಸ್ಥಾನ. ಶಹರಗಳಲ್ಲಿಯೂ ಮಡಿಕೆಗಳಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು. ಶುಂಠಿ ತೀವ್ರ ಥರದ ಸಂಧಿವಾತವನ್ನೂ ನಿಯಂತ್ರಣಕ್ಕೆ ತರುತ್ತದೆ ಎನ್ನುತ್ತಾರೆ ಡೆನ್ಮಾರ್ಕ್ನ ಒಡೆನ್ಸ್ ವಿಶ್ವವಿದ್ಯಾಲಯದ ಡಾ.ಕೃಷ್ಣ ಶ್ರೀವಾತ್ಸವ.
ಸಂಧಿವಾತದಿಂದ ಬಳಲುತ್ತಿದ್ದ ವ್ಯಕ್ತಿಗೆ ಅವರು ನಿತ್ಯ 50 ಗ್ರಾಂ ನಷ್ಟು ಶುಂಠಿಯನ್ನು ಒಂದು ತಿಂಗಳು ಸೇವಿಸಲು ಸಲಹೆ ಮಾಡಿದ್ದರು. ಮೂರು ತಿಂಗಳ ಬಳಿಕ ಅವರನ್ನು ಪರೀಕ್ಷಿಸಿದಾಗ ಸಂಧಿವಾತದಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದು ಹತ್ತು ವರ್ಷ ಹಿಂದಿನ ಘಟನೆ. ಆನಂತರ ಒಮ್ಮೆಯೂ ಆ ವ್ಯಕ್ತಿಯನ್ನು ವಾತ ಕಾಡಿಲ್ಲ ಎನ್ನುತ್ತಾರೆ ಡಾ.ಕೃಷ್ಣ. ಸಂಧಿವಾತದಿಂದ ಬಳಲುತ್ತಿರುವವರು ಒಂದು ಸಲಕ್ಕೆ 5 ಗ್ರಾಂ ನಂತೆ ದಿನಕ್ಕೆ ಮೂರು ಸಲ, ಒಂದು ತಿಂಗಳ ಕಾಲ ಶುಂಠಿ ಸೇವಿಸುವುದು ಉತ್ತಮ ಎನ್ನುವುದು ಅವರ ಸಲಹೆ.
ಶುಂಠಿಯನ್ನು ಕಿತ್ತು ತಂದು ಹಾಗೆಯೇ ಸೇವಿಸಬೇಡಿ. ಅದು ಅಪಾಯಕಾರಿ ಸಹ. ಅದರ ಖಾರಕ್ಕೆ ಬಾಯಿ ಸುಟ್ಟು ಹೋಗಬಹುದು. ಶುಂಠಿಯನ್ನು ನಿತ್ಯದ ಅಡುಗೆಯಲ್ಲಿ ಬಳಸಬಹುದು ಅಥವಾ ಶುಂಠಿ ಕಷಾಯ ಮಾಡಿಕೊಂಡು ಕುಡಿಯಬಹುದು. ಇದಾವುದೂ ಆಗದಿದ್ದರೆ ಚಹಾದಲ್ಲಿ ಡಿಕಾಕ್ಷನ್ ಮಾಡುವಾಗಲೇ ಚೂರು ಶುಂಠಿ ಹಾಕಿಕೊಂಡರೆ ಚೆನ್ನಾಗಿ ಕುದಿಯುತ್ತದೆ. ಚಹಾ ರುಚಿಯೂ ಹೆಚ್ಚುತ್ತದೆ.
ಔಷಧವನ್ನೂ ಸೇವಿಸಿಂದತಾಗುತ್ತದೆ. ಔಷಧವಾಗಿ ಬಳಸುವವರು ಸಾಧ್ಯವಾದಷ್ಟೂ ತಾಜಾ ಅಂದರೆ ಹಸಿ ಶುಂಠಿಯನ್ನೇ ಬಳಸುವುದು ಒಳ್ಳೆಯದು. ಒಣ ಶುಂಠಿಗಿಂತಲೂ ಇದರಲ್ಲಿ ಪರಿಣಾಮ ಹೆಚ್ಚು. ಆರೋಗ್ಯವಂತರೂ ನಿಯಮಿತವಾಗಿ ಶುಂಠಿ ಬಳಸುತ್ತಿದ್ದರೆ ವಾತದ ಸಮಸ್ಯೆ ಮಾತ್ರವಲ್ಲ, ಹಲವು ಆರೋಗ್ಯ ತೊಂದರೆಗಳನ್ನು ದೂರ ಇಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


