ಆರೋಗ್ಯ-ಜೀವನಶೈಲಿ

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬದಲ್ಲಿ ಸಾಮಾನ್ಯವಾಗಿ ಮೊದಲನೇ ಮಗುವಿಗೆ ಬುದ್ಧಿಮತ್ತೆ ಹೆಚ್ಚು: ವರದಿ

ಮಕ್ಕಳ ಬುದ್ಧಿಮತ್ತೆ ಬಗ್ಗೆ ಹೊಸ ಸಂಶೋಧನಾ ವರದಿ ಪ್ರಕಟವಾಗಿದ್ದು, ಕುಟುಂಬದ ಮೊದಲ ಮಗು ತನ್ನ ಒಡಹುಟ್ಟಿದವರಿಗಿಂತ ಹೆಚ್ಚು ಬುದ್ಧಿಶಾಲಿಯಾಗಿರುತ್ತದೆ ಎಂದು ಹೇಳಿದೆ.

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬದಲ್ಲಿ ಸಾಮಾನ್ಯವಾಗಿ ಮೊದಲನೇ ಮಗುವಿಗೆ ಬುದ್ಧಿಮತ್ತೆ ಹೆಚ್ಚು: ವರದಿ
ಸಾಂಕೇತಿಕ ಚಿತ್ರ
Published On :

ಲಂಡನ್: ಮಕ್ಕಳ ಬುದ್ಧಿಮತ್ತೆ ಬಗ್ಗೆ  ಹೊಸ ಸಂಶೋಧನಾ ವರದಿ ಪ್ರಕಟವಾಗಿದ್ದು, ಕುಟುಂಬದ ಮೊದಲ ಮಗು ತನ್ನ ಒಡಹುಟ್ಟಿದವರಿಗಿಂತ ಹೆಚ್ಚು ಬುದ್ಧಿಶಾಲಿಯಾಗಿರುತ್ತದೆ ಎಂದು ಹೇಳಿದೆ.
ಜರ್ಮನಿಯ ಲೈಪ್ಜಿಗ್ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸಂಶೋಧನೆ ಪ್ರಕಾರ, ಕುಟುಂಬವೊಂದರಲ್ಲಿ ಮೊದಲು ಹುಟ್ಟುವ ಮಗುವಿಗೆ ತಂದೆ-ತಾಯಂದಿರು ಅತಿ ಹೆಚ್ಚು ಗಮನ ಕೊಡುವುದರಿಂದ ಹೆಚ್ಚು ಬುದ್ಧಿಶಾಲಿಯಾಗಿರುತ್ತಾರೆ. ಮೊದಲ ಮಗುವಿನ ನಂತರ ಹುಟ್ಟುವ ಮಕ್ಕಳ ಮೇಲೆ ಪೋಷಕರ ಗಮನ ಕೊಂಚ ಕಡಿಮೆಯಾಗುವುದೇ  ಹಿರಿಯ ಸಹೋದರ/ ಸಹೋದರಿಯರಿಗಿಂತ ಕಿರಿಯರ ಬುದ್ಧಿ ಮತ್ತೆ ಕಡಿಮೆ ಇರುವುದಕ್ಕೆ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಪೋಷಕರು ಅತಿ ಹೆಚ್ಚು ಗಮನ ಕೊಡುವುದರಿಂದ ಮಕ್ಕಳು ಹೆಚ್ಚು ಕಲಿಯುತ್ತವೆ. ಆದ್ದರಿಂದ ಮೊದಲ ಮಗುವಿಗೆ ಹೆಚ್ಚು ಬುದ್ಧಿಮತ್ತೆ ಇರುತ್ತದೆಯಂತೆ.  ಆದರೆ ಎರಡು ಮಕ್ಕಳಿರುವ ಕುಟುಂಬದಲ್ಲಿ ಹೀಗಾಗುವುದಿಲ್ಲ. ಎರಡೇ ಮಕ್ಕಳಿರುವ ಕುಟುಂಬದಲ್ಲಿ ಎರಡೂ ಮಕ್ಕಳಿಗೆ ಪೋಷಕರು ಹೆಚ್ಚಿನ ಗಮನ ನೀಡಲು ಸಾಧ್ಯವಿರುವುದರಿಂದ ಹಿರಿಯ ಸಹೋದರ/ ಸಹೋದರಿಗಿಂತ ಕಿರಿಯರು ಹೆಚ್ಚು ಬುದ್ಧಿವಂತರಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸಂಶೋಧಕರು.  ಈ ಬಗೆಗಿನ ವರದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಗೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.