ಡೆಂಘೀಗೆ ಅಂಕುಶ ಹಾಕುವ ಲಸಿಕೆ ಸಿಕ್ಕಿತು
ಜಗತ್ತನ್ನೇ ತಲ್ಲಣಗೊಳಿಸಿರುವ ಅದರಲ್ಲೂ ಭಾರತದಾದ್ಯಂತ ಸಹಸ್ರಾರು ಬಲಿ ತೆಗೆದುಕೊಂಡ ಡೆಂಘೀಗೆ ಕೊನೆಗೂ ಲಸಿಕೆ ಸಿಕ್ಕಿದೆ...

ಲಂಡನ್: ಜಗತ್ತನ್ನೇ ತಲ್ಲಣಗೊಳಿಸಿರುವ ಅದರಲ್ಲೂ ಭಾರತದಾದ್ಯಂತ ಸಹಸ್ರಾರು ಬಲಿ ತೆಗೆದುಕೊಂಡ ಡೆಂಘೀಗೆ ಕೊನೆಗೂ ಲಸಿಕೆ ಸಿಕ್ಕಿದೆ. ಡೆಂಘೀ ಗುಣಪಡಿಸುವ ಔಷಧವನ್ನು ಮೆಕ್ಸಿಕೋದಲ್ಲಿ ಕಂಡುಹಿಡಿಯಲಾಗಿದೆ ಎಂದು 'ಬಿಬಿಸಿ' ವರದಿ ಮಾಡಿದೆ.
ಡೆಂಘೀ ಸೊಳ್ಳೆಗಳು ಪ್ರತಿವರ್ಷ 22 ಸಾವಿರ ಮಂದಿಯ ಜೀವ ಆಪೋಶನ ತೆಗೆದುಕೊಳ್ಳುತ್ತವೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಖಚಿತ ಪಡಿಸಿತ್ತು. ಈ ಲಸಿಕೆಯಿಂದ ಈ ಸಂಖ್ಯೆ ಗಣನೀಯ ಇಳಿಯಲಿದೆ ಎಂದು ಮೆಕ್ಸಿಕೋದ ಆರೋಗ್ಯ ಸಚಿವಾಲಯ ಹೇಳಿದೆ. 20 ವರ್ಷಗಳ ಪ್ರಯತ್ನದಿಂದಾಗಿ ಡೆಂಘ್‍ವಾಕ್ಸಿಯಾ ಎಂಬ ಲಸಿಕೆ ಕಂಡುಹಿಡಿದಿರುವುದಾಗಿ ಸ್ಯನೋಫಿ ಎಂಬ ಫ್ರಾನ್ಸ್ ಮೂಲದ ಔಷಧಿ ಕಂಪನಿ ಹೇಳಿಕೊಂಡಿದೆ. ಮೊದಲ ಹಂತದಲ್ಲಿ ಮೆಕ್ಸಿಕೋದ 40 ಸಾವಿರ ಡೆಂಘೀ ಪೀಡಿತರಿಗೆ ಲಸಿಕೆ ನೀಡಲಿದೆ.
ಸೀಮಿತ ಬಳಕೆ: ವಿಶ್ವಾದ್ಯಂತ ಪ್ರತಿವರ್ಷ 40ಕೋಟಿ ಜನರು ಡೆಂಘೀ ಪೀಡಿತರಾಗುತ್ತಿದ್ದಾರೆ. ಹೊಸ ಲಸಿಕೆಯನ್ನು 9 ವರ್ಷ ಮೇಲ್ಪಟ್ಟವರು ಹಾಗೂ 49 ವರ್ಷ ಒಳಗಿನವರಿಗೆ ಮಾತ್ರ ಮೀಸಲಿಡಲಾಗಿದ್ದು, ಪದೇ ಪದೆ ಈ ಕಾಯಿಲೆ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಮಾತ್ರ ಬಳಸಲು ನಿರ್ಧರಿಸಲಾಗಿದೆ. 4 ಮಾದರಿಯ ಡೆಂಘೀ ವೈರಸ್‍ಗಳನ್ನು ಇದು ನಿಷ್ಕ್ರಿಯಗೊಳಿಸಲಿದೆಯಂತೆ. ಕಳೆದ 20 ವರ್ಷಗಳಲ್ಲಿ ಈ ಲಸಿಕೆ ತಯಾರಿಕೆಗೆ ತಗುಲಿರುವ ಖರ್ಚು ಬರೋಬ್ಬರಿ ರು.10400ಕೋಟಿ. ಚಿಕೂನ್ ಗುನ್ಯಾ, ಝಿಕಾ ಜ್ವರ, ಡೆಂಘೀ ಎಲ್ಲವನ್ನೂ ಹರಡುವ ಈಡೆಸ್ ಈಜಿಪ್ಟಿ ಎಂಬ ಸೊಳ್ಳೆ ಕಳೆದ 65 ವರ್ಷಗಳಿಂದ ವೈದ್ಯರು ಮತ್ತು ವಿಜ್ಞಾನಿಗಳಿಗೆ ಸವಾಲಾಗಿಯೇ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


