ಶಸ್ತ್ರಚಿಕಿತ್ಸೆಗೊಳಗಾದವರು ಶೀಘ್ರವಾಗಿ ಚೇತರಿಸಿಕೊಳ್ಳಲು ಸಂಗೀತ ಕೇಳಿ!
ಶಸ್ತ್ರಚಿಕಿತ್ಸೆಗೊಳಗಾದವರು ಶೀಘ್ರವಾಗಿ ಚೇತರಿಸಿಕೊಳ್ಳಲು ಸಂಶೋಧಕರು ಹೊಸ ವಿಧಾನವನ್ನು ಕಂಡುಹಿಡಿದ್ದಾರೆ.

ಲಂಡನ್: ಶಸ್ತ್ರಚಿಕಿತ್ಸೆಗೊಳಗಾದವರು ಶೀಘ್ರವಾಗಿ ಚೇತರಿಸಿಕೊಳ್ಳಲು ಸಂಶೋಧಕರು ಹೊಸ ವಿಧಾನವನ್ನು ಕಂಡುಹಿಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಮೊದಲು, ಶಸ್ತ್ರಚಿಕಿತ್ಸೆ ವೇಳೆ, ಅಥವಾ ನಂತರ ಸಂಗೀತವನ್ನು ಕೇಳುವುದರಿಂದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳುತ್ತಾರಂತೆ.
ಬ್ರುನೆಲ್ ವಿಶ್ವವಿದ್ಯಾಲಯದಲ್ಲಿ, ಶಸ್ತ್ರ ಚಿಕಿತ್ಸೆ ವೇಳೆ ಸಂಗೀತ ಕೇಳುವುದರ ಬಗ್ಗೆ 7000 ರೋಗಿಗಳನ್ನೊಳಗೊಂಡ ಸುಧೀರ್ಘವಾದ ಅಧ್ಯಯನ ನಡೆದಿದೆ. ಸಂಗೀತ ಕೇಳುವುದರಿಂದ ನೋವು ಮತ್ತು ಆತಂಕ ಕಡಿಮೆಯಾಗಿ ನೋವಿಗೆ ಚಿಕಿತ್ಸೆ ನೀಡುವ ಅಗತ್ಯವೂ ಕಡಿಮೆಯಾಗುತ್ತದೆ.
ಸಾಮಾನ್ಯ ಅರವಳಿಕೆ ಮದ್ದು ನೀಡಿದಾಗಲೂ ಸಂಗೀತ ಆಲಿಸುವುದರಿಂದ ರೋಗಿಯ ನೋವು ಕುಗ್ಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಗೀತ ಕೇಳುವ ಸೌಲಭ್ಯ ಒದಗಿಸಬೇಕು ಎಂದು ಖ್ಯಾತ ಲೇಖಕ ಡಾ ಕ್ಯಾಥರೀನ್ ಮೀಡ್ಸ್ ಹೇಳಿದ್ದಾರೆ. ಈ ಸಂಶೋಧನಾ ವರದಿ ಲಾನ್ಸೆಟ್ ನಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


