ಆರೋಗ್ಯ-ಜೀವನಶೈಲಿ

ಬೆನ್ನಿನ ಹಿಂದೆ ಕಾಳಜಿ

ಬೆನ್ನಿನ ಹಿಂದೆ ಕಾಳಜಿ
Published On :

ಬೆನ್ನು ಇದೆ ಎಂದ ಮೇಲೆ ನೋವು ಸಹಜ. ಹಾಗಂತ ಅನುಭವಿಸುತ್ತಾ ಕೂರಬೇಕಿಲ್ಲ. ಬೆನ್ನು ನೋವಿನಿಂದ ಮುಕ್ತಿ ಹೊಂದಬೇಕು ಎಂದರೆ ವ್ಯವಸ್ಥಿತ ಆಹಾರ ಸೇವನೆ, ವ್ಯಾಯಾಮ ಅಗತ್ಯವಾಗಿ ಮಾಡಲೇಬೇಕು.
= ವಿಟಮಿನ್ 'ಡಿ' ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಇದರ ಕೊರತೆಯಾದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಅಣಬೆ, ಮೊಟ್ಟೆ, ಸೊಪ್ಪು ಮತ್ತು ಮೀನಿನಲ್ಲಿ ವಿಟಮಿನ್ 'ಡಿ' ಹೆಚ್ಚಿರುತ್ತದೆ.
= ಒಳ್ಳೆಯ ಸಂಗೀತ ಒತ್ತಡ ನಿವಾರಣೆಗೆ ಸಹಕಾರಿ. ಒತ್ತಡ ಕಡಿಮೆಯಾದಂತೆ ಬೆನ್ನು ನೋವು ಕಡಿಮೆಯಾಗುವುದು.
= ಬೆನ್ನು ನೋವು ನಿವಾರಣೆಗೆ ಪ್ರಾಣಾಯಾಮ ಬಹು ಪರಿಣಾಮಕಾರಿ. ಮಾನಸಿಕ ಒತ್ತಡ ನಿವಾರಣೆಗೂ ಇದೇ ಮಾರ್ಗ.
= ಆಗಾಗ್ಗೆ ಮಸಾಜ್ ಥೆರಪಿ ಮಾಡಿಸಿಕೊಂಡರೆ ಉತ್ತಮ. ಇದರಿಂದ ಸ್ನಾಯುಗಳೆಲ್ಲ ಸಡಿಲವಾಗಿ ಚಟುವಟಿಕೆಯಿಂದಿರಲು ಸಾಧ್ಯ. ಮಸಾಜ್ ಮಾಡುವಾಗ ಬೆಳ್ಳುಳ್ಳಿ ಎಣ್ಣೆ ಬಳಸಿದರೆ ಪರಿಣಾಮಕಾರಿ.
= ಕ್ಯಾಲ್ಸಿಯಂ ಇರುವ ಪದಾರ್ಥ ಹೆಚ್ಚಾಗಿ ಸೇವಿಸಬೇಕು. ಅದರಲ್ಲೂ ಹೆರಿಗೆಯಾದಾಗ ಅಧಿಕ ಕ್ಯಾಲ್ಸಿಯಂಯುಕ್ತ ಆಹಾರ ಅಗತ್ಯ.
= ಬೆನ್ನು ನೇರವಾಗಿ ನಿಲ್ಲುವಂಥ ಕುರ್ಚಿಗಳನ್ನು ಬಳಸಿ. ಮಲಗಲು ಗಟ್ಟಿಯಾದ ಜಮಖಾನ ಅಥವಾ ಚಾಪೆ ಬಳಸಿದಲ್ಲಿ ಬೆನ್ನು ಗಟ್ಟಿಮುಟ್ಟಾಗಿದ್ದು ನೋವು ಬಾಧಿಸುವುದಿಲ್ಲ. ಧೂಮಪಾನವೂ ಬೆನ್ನು ನೋವಿಗೆ ಕಾರಣ. ಹೀಗಾಗಿ, ಸಿಗರೇಟು- ಬೀಡಿ ಬಿಟ್ಟುಬಿಡಿ.
= ಬೆಳ್ಳುಳ್ಳಿ, ಆಲೂಗಡ್ಡೆ, ಟೊಮೆಟೋ, ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಹಣ್ಣುಗಳ ಸಲಾಡ್‌ಗಳನ್ನು ಹೆಚ್ಚಾಗಿ ಬಳಸಬೇಕು. ಹೂಕೋಸು, ಎಲೆಕೋಸು, ಬಸಳೆ ಸೇವಿಸಿದರೆ ಒಳ್ಳೆಯದು. ಊಟದ ನಂತರ ಒಂದು ಬಾಳೆಹಣ್ಣು ಸೇವನೆ ರೂಢಿಸಿಕೊಳ್ಳಿ. ಕೊಬ್ಬು, ಖಾರಯುತ ಪದಾರ್ಥ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ದೂರವಿರಿಸುವುದು ಉತ್ತಮ. ಮೊಸರು, ಸಿಹಿತಿಂಡಿ, ಸಕ್ಕರೆ, ಉಪ್ಪಿನಕಾಯಿ, ಟೀ- ಕಾಫಿ ಯಥೇಚ್ಚ ಸೇವನೆ ಬೇಡ.
= ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದಾದರೆ ನೇರ ಭಂಗಿಯಲ್ಲಿ ಕೂರುವುದು ಸೂಕ್ತ.
= ದೇಹದ ತೂಕ ಮಿತಿಯಲ್ಲಿರುವಂತೆ ನೋಡಿಕೊಳ್ಳಿ.
= ದಿನದಲ್ಲಿ ಅರ್ಧ ಗಂಟೆ ನಡೆಯುವ ವ್ಯಾಯಾಮ ಒಳ್ಳೆಯದು.
= ಡ್ರೈವಿಂಗ್ ಮಾಡುವಾಗ ಬೆನ್ನಿಗೆ ಸರಿಯಾದ ಸಪೋರ್ಟ್ ಇಟ್ಟುಕೊಳ್ಳುವುದು ಉತ್ತಮ.



= ಮಂಜು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.