ನೋವುರಹಿತ ಹೋಮಿಯೋಪತಿ

ನವಜಾತ ಶಿಶುಗಳ, ಮಕ್ಕಳ ಚಿಕಿತ್ಸೆಗೆ ಹೋಮಿಯೋಪತಿ ಹೇಳಿ ಮಾಡಿಸಿದ್ದು. ಸುಮಾರು 200 ವರ್ಷಗಳ ಹಿಂದೆ ಜರ್ಮನ್ ವೈದ್ಯ ಸ್ಯಾಮ್ಯುಯೆಲ್ ಹಾನ್ಮನನ್ ಹೋಮಿಯೋಪತಿ ಚಿಕಿತ್ಸೆ ಕಂಡು ಹಿಡಿದಾಗಿನಿಂದ ಜನಸಾಮಾನ್ಯರ ಆರೋಗ್ಯಿಕ ಅಗತ್ಯ ಪೂರೈಸುತ್ತಿದೆ. ಗಿಡಮೂಲಿಕೆಗಳಿಂದ, ಸಸ್ಯ ಜನ್ಯ, ಖನಿಜಗಳಿಂದ ಹೋಮಿಯೋಪತಿ ಔಷಧಿ ತಯಾರಿಸಲಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಶೇ.100 ವಿಷರಹಿತ ಔಷಧಿಗಳು.
ಸಾಮಾನ್ಯವಾಗಿ ಮಕ್ಕಳಲ್ಲಿ ಆಗಾಗ್ಗೆ ಅನಾರೋಗ್ಯ, ಪ್ರಕ್ಷಬ್ಧ, ಅಸಮಾಧಾನಕರ ವರ್ತನೆ ಕಂಡುಬರುತ್ತದೆ. ಪೋಷಕರಿಗೆ ಮಕ್ಕಳನ್ನು ಸಂತೋಷಪಡಿಸಲು ಏನು ಮಾಡಬೇಕು ಎಂಬುದೇ ಪ್ರಶ್ನೆಯಾಗಿರುತ್ತದೆ. ಮಗು ಆಗಾಗ ನಿದ್ದೆಯಿಂದ ಎಚ್ಚರಗೊಂಡು ಅಳುವುದಿದೆ. ಅಂಥ ಸಂದರ್ಭಗಳಲ್ಲಿ ಹೋಮಿಯೋಪತಿ ಚಿಕಿತ್ಸೆ ಮಗುವನ್ನು ಹೆಚ್ಚು ಸಂತೋಷವಾಗಿ, ಸಹಜತೆಯಿಂದಿರಲು ನೆರವಾಗುತ್ತದೆ.
ಮಕ್ಕಳ ಆರೋಗ್ಯದ ಸಮಸ್ಯೆಗೆ ಹೋಮಿಯೋಪತಿ ಸೂಕ್ತ ಚಿಕಿತ್ಸೆ. ಕಹಿ ಗುಳಿಗೆಯಲ್ಲದ ನೋವು ರಹಿತ ಔಷಧಿಗಳು ಮಕ್ಕಳಿಗೆ ಇಷ್ಟವಾಗುತ್ತವೆ. ಒಂದು ಡೋಸ್ ಮದ್ದಿನ ಪರಿಣಾಮ ಬಹಳ ಕಾಲ ಇರುತ್ತದೆ. ಮಕ್ಕಳ ದೈಹಿಕ, ಭಾವನಾತ್ಮಕ ಪರಿಸರದಿಂದ ಉಂಟಾದ ಒತ್ತಡ, ಅನುವಂಶಿಕ ಪರಿಸ್ಥಿತಿ, ಲಸಿಕೆ ನೀಡಿರುವುದರಿಂದ ಆದ ಹಾನಿ ಮುಂತಾದ ಸಮಸ್ಯೆ ಉತ್ತಮ ರೀತಿಯಲ್ಲಿ ಪರಿಹರಿಸಲು ಹೋಮಿಯೋಪತಿ ಸಹಕಾರಿ.
ಶೀತ, ಕೆಮ್ಮು, ಹೊಟ್ಟೆ ನೋವು, ಗಂಟಲು ನೋವು, ಅಲರ್ಜಿ, ಎಸ್ಕೀಮಾ ಗುಣಪಡಿಸುವಲ್ಲಿ ಹೋಮಿಯೋಪತಿ ಚಿಕಿತ್ಸೆ ಪರಿಣಾಮಕಾರಿ. ಆ್ಯಂಟಿ ಬಯಾಟಿಕ್ ಅಥವಾ ಇತರ ಔಷಧಗಳಂತೆ ಹೋಮಿಯೋಪತಿ ಮಾತ್ರೆ ಬಳಸುವುದರಿಂದ ಜೀರ್ಣಕ್ರಿಯೆಗೆ ಅಡೆತಡೆ ಇಲ್ಲದೆ ಪ್ರತಿರೋಧದ ಶಕ್ತಿ ಕುಂದುವುದಿಲ್ಲ. ಯಾವುದೇ ಅಲರ್ಜಿ ಉಂಟಾಗುವುದಿಲ್ಲ. ದೀರ್ಘ ಕಾಲ ಈ ಔಷಧಿ ಸೇವಿಸಿದರೂ ಯಾವುದೇ ಹಾನಿಯಿಲ್ಲ.
= ಡಾ. ಮೈಕಲ್ ಗೋನ್ಸಾಲ್ವೀಸ್
ಮೊ. 9980188918, 8050485240
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


