7ರಲ್ಲಿದೆ ಆರೋಗ್ಯದ ಗುಟ್ಟು

ಆರೋಗ್ಯಕರ ದೇಹಕ್ಕೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಆದರೆ, ಉತ್ತಮ ಆರೋಗ್ಯವನ್ನು ಈ 7 ಅಂಶಗಳಿಂದ ಸಂಪಾದಿಸಬಹುದು...
1. ಹೆಚ್ಚು ಹಣ್ಣು, ತರಕಾರಿ ಸೇವನೆ
ಕ್ಯಾರೆಟ್, ಹಸಿರು ಬಟಾಣಿ, ಕಿತ್ತಳೆ, ಸ್ಟ್ರಾಬೆರಿ ಇತ್ಯಾದಿಗಳು ನಮ್ಮ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ 'ಸಿ', ಕ್ಯಾರೆಟನಾಯಿಡ್, ಫೈಟೋನ್ಯೂಟ್ರಿಯೆಂಟ್ಸ್ ಹೊಂದಿರುತ್ತವೆ. ಫೈಟೋನ್ಯೂಟ್ರಿಯೆಂಟ್ಸ್ ರೋಗಾಣುಗಳ ವಿರುದ್ಧ ಹೋರಾಡುವ ಬಿಳಿ ರಕ್ತ ಕಣ ಹೆಚ್ಚಿಸುವಲ್ಲಿ ಸಹಕಾರಿ.
2. ನಿದ್ರಾ ಸಮಯವೇ ಬೂಸ್ಟ್
ನಿದ್ದೆಯ ಅಭಾವ ಸೂಕ್ಷ್ಮಜೀವಿಗಳ ಹಾಗೂ ಕ್ಯಾನ್ಸರ್ ಜೀವಕೋಶಗಳ ಮೇಲೆ ದಾಳಿ ಮಾಡುವ ದೇಹದಲ್ಲಿನ ಜೀವಕೋಶಗಳಲ್ಲಿನ ಕ್ಷಮತೆ ಕಡಿಮೆ ಮಾಡುತ್ತದೆ.
3. ಸ್ತನ ಪಾನ
ಎದೆ ಹಾಲು ಟರ್ಬೋ ಚಾರ್ಜ್ಡ್ ಪ್ರತಿರೋಧಕ. ದೇಹದಲ್ಲಿನ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಿಳಿ ರಕ್ತ ಕಣ ಒಳಗೊಂಡಿದೆ. ಮಗುವಿನ ಜನನದ ನಂತರ ಮೊದಲ ಕೆಲವು ದಿನಗಳಲ್ಲಿ ಉತ್ಪತ್ತಿಯಾಗುವ ಹಳದಿ ಬಣ್ಣದ ಎದೆಹಾಲು (ಪ್ರೀ ಮಿಲ್ಕ್) ರೋಗಗಳ ವಿರುದ್ಧ ಹೋರಾಡುವ ಪ್ರತಿಕಾಯಗಳಲ್ಲಿ ವಿಶೇಷವಾಗಿ ಸಮೃದ್ಧ.
4. ವ್ಯಾಯಾಮ
ವ್ಯಾಯಾಮ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಿ, ಪ್ರತಿಕಾಯಗಳ ಸಂಖ್ಯೆ ವೃದ್ಧಿಸುವಲ್ಲಿ ಸಹಕರಿಸುತ್ತದೆ.
5. ಸೂಕ್ಷ್ಮಾಣು ಹರಡುವಿಕೆಯಿಂದ ರಕ್ಷಣೆ
ರೋಗಾಣುಗಳ ವಿರುದ್ಧ ಹೋರಾಟ ದೇಹದ ಪ್ರತಿರೋಧಕ ಶಕ್ತಿ ವೃದ್ಧಿಸುವುದಿಲ್ಲ. ಆದರೆ ಅದು ಮಗುವಿನ ರೋಗ ನಿರೋಧಕ ಶಕ್ತಿಯ ಮೇಲಿರುವ ಒತ್ತಡ ಕಡಿಮೆಗೊಳಿಸುತ್ತದೆ. ನಿಮ್ಮ ಮಗು ಕೈಯನ್ನು ಆಗಾಗ ತೊಳೆಯುವುದನ್ನು ಖಚಿತಗೊಳಿಸಿ.
6. ಸಿಗರೇಟ್ ಬೇಡ
ನೀವು ಅಥವಾ ನಿಮ್ಮ ಸಂಗಾತಿ ಸಿಗರೇಟು ಸೇವಿಸುವ ಹವ್ಯಾಸ ಹೊಂದಿದ್ದರೆ ನಿಲ್ಲಿಸಿ. ಸಿಗರೇಟು ಸೇವನೆ 4,000ಕ್ಕಿಂತಲೂ ಅಧಿಕ ವಿಷಾಣು ಹೊಂದಿದೆ. ದೇಹದಲ್ಲಿನ ಕೋಶಗಳಿಗೆ ಕಿರಿಕಿರಿ ಅಥವಾ ಕೋಶಗಳನ್ನೇ ನಾಶ ಮಾಡಬಹುದಾದ ಶಕ್ತಿ ವಿಷಾಣುಗಳಿಗಿದೆ.
7. ಟೂತ್‌ಬ್ರಷ್‌ನಲ್ಲಿ ಬ್ಯಾಕ್ಟೀರಿಯಾ
ನಿಮ್ಮ ಮಗು ಅನಾರೋಗ್ಯಕ್ಕೆ ತುತ್ತಾದಲ್ಲಿ ಮೊದಲು ಮಗುವಿನ ಟೂತ್‌ಬ್ರಷ್‌ಅನ್ನು ಹೊರಕ್ಕೆ ಎಸೆಯಿರಿ.
= ಬರ್ಬಾರ ರಿಚ್, ಡಿ.ಡಿ.ಎಸ್ ವಕ್ತಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


