ಹಿಂಬದಿ ಸೌಂದರ್ಯಕ್ಕೆ ಹೀಗೆ ಮಾಡಿ
ಸೌಂದರ್ಯ ಸಮರದಲ್ಲಿ ನಿತ್ಯ ಸಂಘರ್ಷ. ಅದರಲ್ಲೂ ಹೆಣ್ಣು ಮಾತ್ರ ತನ್ನ ಅಂದಕ್ಕೆ ತೋರುವ ಕಾಳಜಿ ಅಪರಿಮಿತ. ಇಂದಿನ..

ಸೌಂದರ್ಯ ಸಮರದಲ್ಲಿ ನಿತ್ಯ ಸಂಘರ್ಷ. ಅದರಲ್ಲೂ ಹೆಣ್ಣು ಮಾತ್ರ ತನ್ನ ಅಂದಕ್ಕೆ ತೋರುವ ಕಾಳಜಿ ಅಪರಿಮಿತ. ಇಂದಿನ ಯುವತಿಯರಿಗಂತೂ ಸೌಂದರ್ಯ ಪ್ರಜ್ಞೆ ವಿಪರೀತ. ಹಾಗಾಗಿ ಅವರು ಅದಕ್ಕೇನು ಬೇಕೋ ಅದನ್ನೆಲ್ಲ ಮಾಡುತ್ತಾರೆ. ಹೆಣ್ಣು ಅಂದವಾಗಿ ಕಾಣಬೇಕಿದ್ದರೆ ಎದುರಿನಿಂದ ಮಾತ್ರವಲ್ಲ, ಎಲ್ಲ ಕೋನಗಳಿಂದಲೂ ಚೆಂದ ಕಾಣಬೇಕು. ಅದಕ್ಕಾಗಿ 'ಬ್ಯಾಕ್ ಬ್ಯೂಟಿ' ಹೆಚ್ಚಾಗಬೇಕಾದರೆ ಇಲ್ಲೊಂದಿಷ್ಟು ಸುಲಭ ಆಸನಗಳನ್ನು ಕೊಡಲಾಗಿದೆ. ಅವುಗಳನ್ನು ಅನುಸರಿಸಿದರೆ ಹಿಂಬದಿಯ ಬ್ಯೂಟಿ ಕಟ್ಟಿಟ್ಟ ಬುತ್ತಿ. ಈ ಆಸನಗಳನ್ನು ನಿತ್ಯ ಮಾಡಿದರೆ 'ಸೆಕ್ಸಿ ಬ್ಯಾಕ್' ನಿಶ್ಚಿತ.
ಬ್ರಿಡ್ಜ್ ಪೋಸ್
ಪಾದಗಳನ್ನು ನೆಲಕ್ಕೆ ತಾಗಿಸಿ, ಬೆನ್ನು ಮೇಲೆ
ಮಲಗಿಕೊಂಡು ಮೊಳಕಾಲುಗಳನ್ನು ಬಗ್ಗಿಸಿ, ಭುಜಗಳನ್ನು ಹಿಗ್ಗಿಸಿ. ನಂತರ ಬೆನ್ನನ್ನು ಎತ್ತರಿಸುತ್ತಿರುವಾಗಲೇ ಸೊಂಟವನ್ನು ಹಿಂಡಿ. ನಂತರ ಮತ್ತೆ ಮೊದಲಿನ ಸ್ಥಿತಿಗೆ ಬಂದು, ಇದೇ ರೀತಿ 10 ಸಲ ಮಾಡಿ.
ಕ್ಯಾಮೆಲ್ ಪೋಸ್
ಮೊಳಕಾಲಿನ ಮೇಲೆ ಕುಳಿತುಕೊಳ್ಳಿ. ಬಳಿಕ ನಿಮ್ಮ ಬೆನ್ನನ್ನು ಮೆಲ್ಲಕ್ಕೆಬ್ಬಿಸಿ ಬಿಲ್ಲಿನಂತೆ ಹಿಂದಕ್ಕೆ ಬಾಗಿಸಿ, ಅಂಗೈಗಳನ್ನು ಪಾದದ ಮೇಲಿಡಿ. ಈ ಸ್ಥಿತಿಯಲ್ಲಿ ಕನಿಷ್ಠ 30 ಸೆಕೆಂಡ್‌ಗಳವರೆಗೂ ಇರಿ. ಇದಕ್ಕೆ ಉಷ್ಟ್ರಾಸಾಸನ ಎನ್ನುತ್ತಾರೆ. ಈ ರೀತಿ ಮತ್ತೆ ಪುನಃ ಮಾಡಿ.
ಬೆಂಟ್ ಓವರ್ ರೋವ್
ಮೊದಲಿಗೆ ಕುರ್ಚಿ ಅಂಚಿನಲ್ಲಿ ಕುಳಿತುಕೊಳ್ಳಿ. ಸೊಂಟವನ್ನು ಸ್ವಲ್ಪ ಮುಂದಕ್ಕೆ ಬಗ್ಗಿಸಿ. ಈ ಹಂತದಲ್ಲಿ ಬೆನ್ನು, ಕುತ್ತಿಗೆ ಮತ್ತು ತಲೆ ಒಂದೇ ರೇಖೆಯಲ್ಲಿರಲಿ. ಈಗ ನೀವು ವಾಟರ್ ಬಾಟಲ್ ಅಥವಾ ಭಾರವಾದ ವಸ್ತುಗಳನ್ನು ಹಿಡಿದುಕೊಳ್ಳಿ. ನಿಧಾನವಾಗಿ ಮೊಣಕೈಗಳನ್ನು ಬಗ್ಗಿಸಿ, ಕೈಗಳನ್ನು ಮೇಲಕ್ಕೆತ್ತಿ. ಆಮೇಲೆ ನಿಧಾನವಾಗಿ ಮತ್ತೆ ಕೆಳಗೆ ತನ್ನಿ. ಇದೇ ರೀತಿ 10 ಸಲ ಮಾಡಿ.
ಕೊಬ್ರಾ ಪೋಸ್
ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿಕೊಳ್ಳಿ. ತೋಳುಗಳನ್ನು ವಿಶಾಲವಾಗಿಟ್ಟುಕೊಳ್ಳಿ. ಮೊಣಕೈಗಳನ್ನು ಬಾಗಿಸಿ, ಭುಜಕ್ಕೆ ನೇರವಾಗಿ ಅಂಗೈಗಳನ್ನು ನೆಲಕ್ಕೆ ತಾಗಿಸಿ, ತೋಳುಗಳು, ಬೆನ್ನು, ಎದೆ ಮತ್ತು ಕುತ್ತಿಗೆಯನ್ನು ನೆಲದಿಂದ ಮೇಲಕ್ಕೆತ್ತಿ. ಈ ಸ್ಥಿತಿಯಲ್ಲಿ 30 ಸೆಕೆಂಡುಗಳವರೆಗೂ ಇರಿ. ಹೀಗೆ ಐದು ಸಲ ಪುನಃ ಮಾಡಿ. ಇದಕ್ಕೆ ಭುಜಂಗಾಸನ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


