ಹಾಲ್ ಕುಡಿ ಡೇಸ್

ನಿಸರ್ಗದ ಎಲ್ಲ ಸಸ್ತನಿಗಳಿಗಿಂತ ಮಾನವರು ನವಜಾತ ಶಿಶುಗಳ ಆರೈಕೆ ವಿಚಾರದಲ್ಲಿ ಹೆಚ್ಚಿನ ಸಂಕಟ ಅನುಭವಿಸುತ್ತಾರೆ. ಅಸಮರ್ಪಕವಾಗಿ ಎದೆಹಾಲು ನೀಡುವುದರಿಂದ ಪ್ರತಿವರ್ಷ ಸುಮಾರು 1 ದಶಲಕ್ಷಕ್ಕೂ ಹೆಚ್ಚು ನವಜಾತಶಿಶುಗಳು ಸಾವನ್ನಪ್ಪುತ್ತವೆ. ಮಿಲಿಯಗಟ್ಟಲೆ ಶಿಶುಗಳು ದೈಹಿಕವಾಗಿ ದುರ್ಬಲವಾಗುತ್ತವೆ.
ನವಜಾತ ಶಿಶುವಿಗೆ ತಾಯಿಯ ಎದೆಹಾಲು ಉಣಿಸುವ ನಿಟ್ಟಿನಲ್ಲಿ ದೈಹಿಕ ಅನುಕೂಲವನ್ನೊದಗಿಸಿರುವುದು ನಿಸರ್ಗದ ಅತ್ಯುತ್ತಮ ಕಾಣಿಕೆ. ಇದನ್ನು ವಿಜ್ಞಾನ ಪುನರ್ ಶೋಧಿಸಿ ದೃಢಪಡಿಸಿದೆ. ಎದೆಹಾಲು ಉಣಿಸುವ ಕ್ರಮ- ಅದರ ಪ್ರಯೋಜನಗಳ ಕುರಿತು ಅರಿವು ಮೂಡಿಸುವ ಪರಂಪರೆಯೂ ನಮ್ಮಲ್ಲಿದೆ.
ಸಿದ್ಧ ಆಹಾರದ ಎಚ್ಚರ
ಎದೆಹಾಲಿಗೆ ಪೂರಕವಾಗಿ ಮಾರುಕಟ್ಟೆಯಲ್ಲಿರುವ ಸಿದ್ಧ ಶಿಶು ಆಹಾರ ಅಷ್ಟು ಒಳ್ಳೆಯದಲ್ಲ. ತಾಯಿ ಅನಾರೋಗ್ಯಪೀಡಿತೆ ಆಗಿದ್ದಲ್ಲಿ 3- 6 ತಿಂಗಳೊಳಗೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಇದ್ದರೆ ಇವು ಸಹಾಯಕ್ಕೆ ಬರುತ್ತವೆ. ಆದರೆ ಅಂಥ ಶಿಶುಗಳಲ್ಲಿ ಅತಿಸಾರ, ಉಸಿರಾಟದ ಸೋಂಕು ತಗುಲಬಹುದು. ಸಮರ್ಪಕ ಪೋಷಕಾಂಶಗಳೂ ದೊರೆಯುವುದಿಲ್ಲ. ಕೊಬ್ಬು, ವಿಟಮಿನ್ಸ್, ಲವಣಗಳು, ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಕ್ಯಾಲ್ಷಿಯಂಗಳು ಅಲರ್ಜಿ ತರಬಹುದು. ಹಾಲಿನ ಮೇಲಿನ ತಿರಸ್ಕಾರ, ತೀವ್ರ ಸ್ವರೂಪದ ರೋಗಗಳು, ಸ್ಥೂಲಕಾಯವಾಗುವ ಸಾಧ್ಯತೆಗಳೂ ಇರುತ್ತವೆ.
ಇಬ್ಬರಿಗೂ ತೊಂದರೆಯೇ...
ಸೋಂಕುಗಳ ಕಾರಣಕ್ಕಾಗಿ ಶಿಶುಗಳು ಮರಣ ಹೊಂದುತ್ತಿರುವ ಹೆಚ್ಚಿನ ಘಟನೆಗಳಿಗೆ ಸ್ತನ್ಯಪಾನ ಮಾಡಿಸದೇ ಇರುವುದು ಹಾಗೂ ಚಿಕ್ಕಮಕ್ಕಳಲ್ಲಿ ಕಂಡುಬರುವ ಸ್ಥೂಲಕಾಯ ಕಾರಣ. ಟೈಪ್ 1 ಹಾಗೂ 2 ಡಯಾಬಿಟಿಸ್, ರಕ್ತಹೀನತೆ ಮತ್ತು ಹಠಾತ್ ಮರಣಹೊಂದುವ ಲಕ್ಷಣಗಳೊಂದಿಗೆ ಕೂಡ ಸಂಬಂಧವನ್ನು ಹೊಂದಿರುತ್ತದೆ. ತಾಯಂದಿರು ಸ್ತನ್ಯಪಾನ ಮಾಡಿಸದೇ ಇರುವುದು, ಪ್ರಮೆನೊಪಾಸಲ್ ಬ್ರೆಸ್ಟ್ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ರಿಟೇನ್ಡ್ ಗೆಸ್ಟೇಶನಲ್ ವೇಯ್ಟ್ ಗೇಯ್ನ್, ಟೈಪ್ 2 ಡಯಾಬಿಟಿಸ್, ಮೈಕಾರ್ಡಿಯಲ್ ಇನ್‌ಫ್ರಾಕ್ಷನ್ ಹಾಗೂ ಮೆಟಬಾಲಿಕ್ ಸಿಂಡ್ರೋಮ್ ಮುಂತಾದವುಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಸ್ತನ್ಯಪಾನದ ಪರಿಣಾಮಗಳು ಮತ್ತು ತಾಯಿ ಹಾಗೂ ಮಗು ಇಬ್ಬರೂ, ಜನನ ಕಾಲದಿಂದಾರಂಭಿಸಿ ಸೂಕ್ತ ಸಾಕ್ಷ್ಯಾಧಾರಿತ ಆರೈಕೆಗಳನ್ನು ಪಡೆಯಬೇಕು. ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ.
ಸ್ತನಪಾನ ಆರೋಗ್ಯಕ್ಕೆ ಸೋಪಾನ
ವಿಶ್ವ ಆರೋಗ್ಯ ಸಂಸ್ಥೆ ಹೇಳೋದೇನಂದ್ರೆ...
= ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಬೇಕು.
= ಮಗುವಿಗೆ ದಿನದಲ್ಲಿ 10 ರಿಂದ 12 ಬಾರಿ ಎದೆಹಾಲಿನ ಅವಶ್ಯವಿರುತ್ತದೆ. ಆದ್ಯತೆ ಅನುಗುಣವಾಗಿ ಎದೆಹಾಲನ್ನು ಕೊಡಬೇಕು.
= ಬಾಟಲಿ ಅಥವಾ ಚೂಚುಕಗಳ ಬಳಕೆ ಮಾಡಬಾರದು.
= ಮೊದಲ ಆರು ತಿಂಗಳು ಸಂಪೂರ್ಣವಾಗಿ ಎದೆಹಾಲು ನೀಡುವುದು.
= ನಂತರದಲ್ಲಿ ಪೂರಕ ಆಹಾರವನ್ನು ನೀಡುತ್ತ 2 ವರ್ಷಗಳವರೆಗೂ ಎದೆಹಾಲು ಉಣಿಸಬೇಕು.
= ಎದೆ ಹಾಲು ಉಣಿಸುವುದರಿಂದ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್, ಸ್ಥೂಲಕಾಯ ತಪ್ಪಿಸಬಹುದು.
ಎದೆಹಾಲನ್ನು ಯಶಸ್ವಿಯಾಗಿ ನೀಡುವಂತಾಗಲು, ಮಹಿಳೆಯರು ಲಭ್ಯವಿರುವ ಎಲ್ಲ ಮಾಹಿತಿ, ಕಾರ್ಯರೂಪಗೊಳಿಸುವ ಸಹಾಯ, ಆರೋಗ್ಯ ಆರೈಕೆ ಸೇವೆಗಳನ್ನು ಪರಿಣತರಿಂದ ಪಡೆಯಬೇಕು. ಅಂದರೆ, ನವಜಾತ ಶಿಶುಗಳು ಮತ್ತು ಚಿಕ್ಕವಯಸ್ಸಿನ ಮಕ್ಕಳಿಗೆ ಯಾವ ಪ್ರಮಾಣದಲ್ಲಿ ಎದೆಹಾಲಿನ ಅವಶ್ಯವಿರುತ್ತದೆ ಹಾಗೂ ಎದೆಹಾಲಿನ ಉತ್ಪಾದನೆಯ ಹೆಚ್ಚಳ, ರಕ್ಷಣೆ ಕುರಿತು ಆಪ್ತ ಸಮಾಲೋಚನೆ ಪಡೆದುಕೊಳ್ಳುವುದು ಅಗತ್ಯ.
- ಜಾಯ್ಸ್ ಜಯಶೀಲನ್, ಫೊರ್ಟಿಸ್ ಆಸ್ಪತ್ರೆಯ ಸ್ತನ್ಯಪಾನ ಸಮಾಲೋಚಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


