ಸುಸೂತ್ರ ಸಂಸಾರ

ಸಂಸಾರವೆಂಬುದು ಮಹಾಸಾಗರ. ಅದರಲ್ಲಿ ಏರಿಳಿತ ಸಾಮಾನ್ಯ. ಆದರೆ, ಕೆಲವೊಮ್ಮೆ ಬರುವ ಕಷ್ಟಗಳೆಂಬ ಅನಿರೀಕ್ಷಿತ ಚಂಡಮಾರುತಗಳು ನಮ್ಮನ್ನೇ ಅಲುಗಾಡಿಸುತ್ತವೆ. ಆದರೆ ಇಂಥ ಕಷ್ಟಗಳಿಗೆ ಹೆದರಿ ಓಡಿಹೋಗುವ ಬದಲು ಅವುಗಳನ್ನು ಸಮರ್ಥವಾಗಿ ಎದುರಿಸಿದಾಗಲೇ, ಸಂಸಾರದಲ್ಲಿನ ಸಾರವೇ ಬೇರೆ. ಸಂಸಾರ ಹೇಗಿರಬೇಕು? ಸುಖಕರವಾಗಿರಲು ಏನೇನು ಮಾಡಬೇಕು? ನಮ್ಮ ಮನಸ್ಸಿನಲ್ಲಿ ಏನೇನಿರಬೇಕು? ಈಗತಾನೆ ಬಂದ ಸಂಗಾತಿಯನ್ನು ನೋಡಿಕೊಳ್ಳುವುದು ಹೇಗೆ? ಅದಕ್ಕಾಗಿ ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿವೆ...
= ಪತಿ, ಪತ್ನಿ ಸಂಬಂಧ ಒಂದೆರಡು ದಿನದ್ದಲ್ಲ. ಸಾಯುವ ತನಕ. ಹೀಗಾಗಿ ನಿಮ್ಮಬ್ಬರ ಯಾವುದೇ ವಿಷಯಗಳುನಾಲ್ಕು ಗೋಡೆಗಳ ಮಧ್ಯ ಇರಲಿ.
= ನಿಮ್ಮ ನಿಮ್ಮ ರಕ್ತ ಸಂಬಂಧಿಗಳ ಬಗ್ಗೆ ಕೆಟ್ಟದ್ದಾಗಿ ಬಿಂಬಿಸಬೇಡಿ ಅಥವಾ ಅವರ ಕುರಿತಾಗಿ ನಕಾರಾತ್ಮಕ ಅಂಶ ಹೇಳದಿರಿ.
= ತಾಯಿಯ ಮನೆಯಲ್ಲಿ ಸ್ವತಂತ್ರವಾಗಿ ಬೆಳೆದವರು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಜೊತೆಗೆ ಹೊಸ ಮನೆಯ ಸಂಪ್ರದಾಯಕ್ಕೆ ಹೊಂದಿಕೊಳ್ಳುವ ತನಕ ಮುಕ್ತವಾಗಿಡಲು ಬಿಡಿ.
= ಹೊಸ ಜನ, ಹೊಸ ಮನೆಯರ ಪರಿಚಯ ಆಗಿ ಸಲುಗೆ ಬೆಳೆಯುವವರೆಗೆ, ಅವರ ಬಗ್ಗೆ ಕಾಳಜಿ ಇರಲಿ.
= ಮಗು ಪಡೆಯುವ ಆತುರದ ನಿರ್ಧಾರ ಅನಗತ್ಯ. ಸಮ್ಮತಿಯ ನಂತರ ಪಡೆದುಕೊಳ್ಳುವುದು ಸೂಕ್ತ.
= ಬೇಕು ಬೇಡುಗಳ ಬಗ್ಗೆ ಹೆಚ್ಚಿನ ಆಸಕ್ತಿಯಿರಲಿ. ಅವರಾಗಿಯೇ ಕೇಳುವವರೆಗೆ ಸುಮ್ಮನಿರದೆ ಪತ್ನಿಯ ಅವಶ್ಯಗಳನ್ನು ಬೇಗ ಪೊರೈಸಿ.
= ಹತ್ತಿರದಲ್ಲಿದ್ದು ಕೇಳುವ- ಹೇಳುವ ಮಾತುಗಳು ಹೊಂದಾಣಿಕೆಗೆ ಕಾರಣವಾಗುತ್ತವೆ. ಅಷ್ಟೇ ಅಲ್ಲ, ದಾಂಪತ್ಯವೂ ಗಟ್ಟಿಯಾಗುತ್ತದೆ.
= ಪ್ರಾಯದಲ್ಲಿನ ಮನಸ್ಸು ಫ್ಯಾಶನ್ ಜಗತ್ತಿಗೆ ಬೇಗ ಹೊಂದಿಕೊಳ್ಳುತ್ತದೆ. ಅದು ವಿವಾಹದ ನಂತರ ಮುಂದುವರಿಯವ ಸಾಧ್ಯತೆ ಹೆಚ್ಚು. ಅದರ ಬಗ್ಗೆ ಹೆಚ್ಚು ವಾಗ್ವಾದಗಳು ಬೇಡ.
= ಗೆಳೆಯನೊಂದಿಗೆ ನಿಮ್ಮ ಒಡನಾಟ ಹಾಗೂ ಅವನೊಂದಿಗೆ ನಿಮ್ಮ ಬಾಂಧವ್ಯಗಳ ಬಗ್ಗೆ ಕಿರು ಪರಿಚಯವಿರಲಿ. ಉತ್ತಮ ಗೆಳೆಯರು ಸಂಕಷ್ಟದಲ್ಲಿ ನೆರವಾಗುವರು.
= ಆಕೆಗೆ ತಾಯಿಯ ಮನೆಯಲ್ಲಿ ಸುದೀರ್ಘವಾಗಿ ಕೆಲಸ ಮಾಡಿ ಅನುಭವವೇ ಇರುವುದಿಲ್ಲ. ಹೀಗಾಗಿ, ಗಂಡನ ಮನೆಯಲ್ಲಿ ಆಯಾಸ ಪಡುತ್ತಾಳೆ. ಅವಳ ಸಂಕಷ್ಟ ಅರ್ಥಮಾಡಿಕೊಳ್ಳಿ.
= ಮನಸ್ಸಿಗೆ ಹತ್ತಿರವಾಗಲು ಇಂಥ ಅವಕಾಶ ಮತ್ತೊಂದಿಲ್ಲ. ಅಡುಗೆ ಮಾಡುವಾಗ ಪತ್ನಿಯ ಸಹಾಯಕ್ಕೆ ಧಾವಿಸಿ (ನೀವು ಫ್ರೀ ಇದ್ದಾಗ). ಇದರಿಂದ ಅವರ ಮನಸ್ಸಿಗೂ ಹತ್ತಿರವಾಗುತ್ತೀರಿ.
= ಅನಗತ್ಯ ಜಗಳ, ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಅನಿವಾರ್ಯತೆಗೆ ಮುಜುಗರ ಬೇಡ. ಸ್ವಾಭಿಮಾನ ಹೊರತಾಗಿ ಕ್ಷಮೆ ಕೇಳಿ. ಬಿಡುವಿದ್ದಾಗ ಬೇರೆ ಸ್ಥಳಗಳಿಗೆ ಭೇಟಿ ಕೊಡಿ. ಆಸಕ್ತಿದಾಯಕ ಹಾಗೂ ಅಪೇಕ್ಷೆಪಡುವ ಸ್ಥಳಗಳಿಗೆ ಭೇಟಿ ನೀಡಿದರೆ ಖುಷಿ ಹೆಚ್ಚಾಗುತ್ತೆ.
= ಹಕ್ಕು, ಆದ್ಯತೆಗಳು ನಿಮಗಷ್ಟೇ ಇರಲಿ. ಅನಗತ್ಯ ವಿಚಾರಗಳಿಗೆ ಮನೆಯವರ ಪ್ರವೇಶಕ್ಕೆ ನಿಷೇಧವಿರಲಿ. ಅನವಶ್ಯ ಮಾತಿಂದ ಮನಸ್ಸು ದುರ್ಬಲವಾಗುತ್ತದೆ. ಜೊತೆಗೆ ಸಂಬಂಧಗಳು ದೂರವಾಗುತ್ತವೆ.
= ಪತ್ನಿಗೆ ಪತಿಯವರ ಕಡೆಯ ಸಂಬಂಧ ಹೊಸದಾಗಿ ಇರುವುದರಿಂದ ಅವರಿಗೆ ಬೆರೆಯಲು ಕಷ್ಟ. ಹೀಗಾಗಿ ಮದುವೆ, ಮುಂಜಿಯಂಥ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಪರಿಚತರಾಗುತ್ತಾರೆ. ತಪ್ಪದೆ ಇಬ್ಬರೂ ಭಾಗಿಯಾಗಿ.
= ಮಿಲನದಲ್ಲಿ ಹಲವು ತೊಂದರೆಗಳು ಸಾಮಾನ್ಯ. ಹೇಳಿಕೊಳ್ಳಲು ಮುಜುಗರ ಇದ್ದರೆ ಮಾನಸಿಕ ಮತ್ತು ದೇಹ ಸಂಬಂಧಿತ ಕಾಯಿಲೆಗೆ ವೈದ್ಯಕೀಯ ಸಲಹೆ ಅತ್ಯಗತ್ಯ. ಕಾಲ ಕಾಲಕ್ಕೆ ಪರೀಕ್ಷೆ, ಸಲಹೆ ತೆಗೆದುಕೊಳ್ಳಿ.
= ಒಬ್ಬರನ್ನೊಬ್ಬರು ಅರಿತುಕೊಳ್ಳುವವರೆಗೆ ಯಾವುದೇ ಆದೇಶ, ಹಕ್ಕು ಚಲಾವಣೆ ಬೇಡ. ವೈಯಕ್ತಿಕ ನಿರ್ಧಾರಗಳಲ್ಲಿ ಮೂಗು ತೂರಿಸುವ ಪ್ರಯತ್ನದಿಂದ ದೂರವಿರಿ.
= ಸಂಸಾರಕ್ಕಾಗಿ ನಿಮ್ಮ ಕನಸುಗಳನ್ನು ಮುಕ್ತವಾಗಿ ಚರ್ಚಿಸಿರಿ. ಹಾಗೆಯೇ ಅವುಗಳಿಗೆ ಸಂಬಂಧಿಸಿದಂತೆ ವಿಷಯ ವಿನಿಮಯ ಮಾಡಿಕೊಳ್ಳಿ. ಅವುಗಳ ಅನುಷ್ಠಾನಕ್ಕೆ ಕೈಹಾಕಿ. ಕೊಟ್ಟ ಮಾತನ್ನು ಪಾಲಿಸಿ. ಸಂಗಾತಿಗೆ ಇಷ್ಟವಾಗುತ್ತದೆ.
= ಕೇವಲ ನೀವು ಇಷ್ಟಪಡುವ ಕೆಲಸಗಳನ್ನು ಕೈಗೊಳ್ಳಲು ಒತ್ತಡ ಹೇರಬೇಡಿ. ಅವರ ಆಸಕ್ತಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಉತ್ತೇಜನ ನೀಡಿ.
= ಮಂಜುನಾಥ ಪ್ಯಾಟಿ
manjunathdpy@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


