ಆರೋಗ್ಯ-ಜೀವನಶೈಲಿ

ಗುಣಸಂಧಿ

ಗುಣಸಂಧಿ
Published On :

ಮಂಡಿನೋವು ಈಗ ದೊಡ್ಡ ಮಂಡೆಬಿಸಿ ಕಾಯಿಲೆ. ವಯಸ್ಸಾದವರ ಪಾಲಿಗೆ ಬಿಡಿ, ಯುವಕರಿಗೇ ಇದು ಯಮ ನರಕ ತೋರಿಸುತ್ತಿದೆ.
ಸಂಧಿವಾತದ ಅನೇಕ ಮುಖಗಳನ್ನು ವೈದ್ಯಲೋಕ ಪತ್ತೆ ಹಚ್ಚಿದೆ. ಇವುಗಳಲ್ಲಿ 'ಅಸ್ತಿ ಸಂಧಿವಾತ' ಸಾಮಾನ್ಯವಾಗಿ ಕಂಡುಬರುವ ಮಂಡಿನೋವು. ಇದು ಚಯಾಪಚಯ ಕ್ರಿಯೆಯಿಂದ ಹಿಡಿದು ಮೂಳೆಗಳ ಸಂಧಿ ಭಾಗ, ಮೂಳೆಗಳು, ಕಾಟರ್‌ಲೇಜ್, ಮಂಡಿ ಹಾಗೂ ಮೂಳೆಕಟ್ಟಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಸಂಧಿವಾತ ಹೋಗಲಾಡಿಸಲು ಅನೇಕ ಚಿಕಿತ್ಸೆಗಳೂ ಇವೆ. ಆದರೆ, ನೋವು ಗಂಭೀರವಾಗಿದ್ದರೆ ಯಾವುದೇ ಚಿಕಿತ್ಸೆಯಿಂದ ಶೇ.100ರಷ್ಟು ಗುಣಪಡಿಸಲು ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ವಯಸ್ಕರಲ್ಲಿ ಮೊಣಕಾಲಿನ ಮೂಳೆ ನಾರಿನ ಹರಿತದಿಂದಾಗಿ ಅಸ್ತಿ ಸಂಧಿವಾತ ಕಾಣಿಸಿಕೊಳ್ಳುತ್ತದೆ. ಯುವಕರಲ್ಲಿ ಅತಿಯಾದ ದೇಹ ತೂಕದಿಂದಾಗಿ ಅಥವಾ ಅಪಘಾತ ಮತ್ತು ಕ್ರೀಡೆಯಲ್ಲಿ ಸಂಭವಿಸುವ ಗಾಯಗಳಿಂದಾಗಿ ಈ ನೋವು ಕಾಣಿಸಿಕೊಳ್ಳತ್ತದೆ. ಆದ್ದರಿಂದ ಮಂಡಿ ನೋವು, ಸೆಳೆತ ಹಾಗೂ ಸಂಧಿಗಳಲ್ಲಿನ ಊತ ಸಮಸ್ಯೆಯ ಕುರಿತಾಗಿ ಎಚ್ಚರ ವಹಿಸುವುದು ತೀರಾ ಅವಶ್ಯ. ಆರಂಭದಲ್ಲೇ ಚಿಕಿತ್ಸೆ ಪಡೆದರೆ ಇನ್ನೂ ಉತ್ತಮ.
ಮಂಡಿ ಸಂಧಿವಾತ ಪೀಡಿತರ ಸ್ಥಿತಿಗತಿ ಒಬ್ಬರಿಗಿಂತ ಮತ್ತೊಬ್ಬರದ್ದು ಭಿನ್ನ. ಹೀಗಾಗಿ ಎಲ್ಲ ರೋಗಿಗಳಿಗೂ ಒಂದೇ ಥರನಾದ ಚಿಕಿತ್ಸೆ ಅನುಸರಿಸುವುದು ಸಾಧ್ಯವಾಗುವುದಿಲ್ಲ. ಅಂದಹಾಗೆ ಸಮಸ್ಯೆಯ ತೀವ್ರತೆ, ಮಂಡಿ ಭಾಗದ ಯಾವ ಸ್ಥಳದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂಬುದನ್ನು ಆಧರಿಸಿ ಚಿಕಿತ್ಸಾ ವಿಧಾನ ಅನುಸರಿಸಲಾಗುತ್ತದೆ.
ಚಿಕಿತ್ಸಾ ವಿಧಾನ ಯಾವುದೇ ಆಗಿರಲಿ ಮೊದಲಿಗೆ ರೋಗಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗುತ್ತದೆ. ಕೆಲವೊಮ್ಮೆ ಆರ್ಥೋಸ್ಕೋಪಿ (ಕೀಹೋಲ್ ಅಥವಾ ಮೂಳೆ ಸಂಧಿನ ಪರೀಕ್ಷೆ) ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ ತಜ್ಞರ ನೆರವು ಪಡೆಯಬೇಕಾಗುತ್ತದೆ.
ಚಿಕಿತ್ಸೆಯ ವಿಧಗಳು
= ಫಿಸಿಯೋಥೆರಪಿ ಮೂಲಕ ಸಂಧಿ ಭಾಗದ ಸುತ್ತಮುತ್ತಲಿನ ಮಾಂಸಖಂಡಗಳ ಶಕ್ತಿ
    ವರ್ಧಿಸಲಾಗುತ್ತದೆ.
= ಅನಲಾಜಿಕ್ಸ್ ಹಾಗೂ ಸ್ಟೆರಾಯ್ಡ್ ಮುಕ್ತ ಔಷಧಗಳನ್ನು (ಎನ್‌ಎಸ್‌ಎಐಡಿಎಸ್) ನೀಡುವ ಮೂಲಕ ಆರಂಭಿಕ ಹಂತದಲ್ಲಿ ನೋವು ಹಾಗೂ ಊತವನ್ನು ಕಡಿಮೆಯಾಗುವಂತೆ ಮಾಡಲಾಗುತ್ತದೆ.
= ವಿಸ್ಕೋಸಪ್ಲಿಮೆಂಟ್ಸ್ ಎಂಬ ಲ್ಯೂಬಿಚಿಕ್ ಇಂಜಕ್ಷನ್‌ಗಳನ್ನು ಮಂಡಿ ಭಾಗಕ್ಕೆ ನೀಡಿ ನೋವು ಕಡಿಮೆಯಾಗುವಂತೆ ಮಾಡಲಾಗುತ್ತದೆ.
= ಮೊಣಕಾಲಿನ ಚಿಪ್ಪಿನ ಬದಲಾವಣೆಯ ಶಸ್ತ್ರಚಿಕಿತ್ಸೆ. ಈ ಮೂಲಕ ಹಾನಿಗೊಳಗಾಗಿರುವ ಮಂಡಿ ಭಾಗವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬದಲಾಯಿಸಲಾಗುತ್ತದೆ.
= ಮಂಡಿ ಮೂಳೆ ಭಾಗದ ಪುನರ್ ರಚನೆ, ಈ ವಿಧವಾದ ಶಸ್ತ್ರ ಚಿಕಿತ್ಸೆಯಲ್ಲಿ ಮಂಡಿ ಮೂಳೆ ಭಾಗವನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತದೆ.
= ಆಸ್ಟೆಯೊವು: ಈ ವಿಧಾನದಲ್ಲಿ ಸಂಧಿ ಭಾಗದಲ್ಲಿನ ಮೂಳೆ ಭಾಗವನ್ನು ಛೇದಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಈ ಮೂಲಕ ನೋವು ಕಡಿಮೆಯಾಗುವಂತೆ ಮಾಡಲಾಗುತ್ತದೆ.
= ಟೋಟಲ್ ನೀ ರಿಪ್ಲೇಸ್‌ಮೆಂಟ್. ಮಂಡಿ ಮೂಳೆ ಸಂಪೂರ್ಣ ಹಾನಿಗೊಳಗಾಗಿದ್ದಲ್ಲಿ ಈ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಈ ವಿಧಾನದಲ್ಲಿ ಹಾನಿಗೊಳಗಾದ ಮಂಡಿ ಮೂಳೆಯನ್ನು ಕತ್ತರಿಸಿ ಹೊರತೆಗೆದು ಪ್ಲಾಸ್ಟಿಕ್ ಅಥವಾ ಲೋಹದ ಚಿಪ್ಪನ್ನು ಅಳವಡಿಸಲಾಗುತ್ತದೆ.


 ಡಾ. ಚಂದ್ರಶೇಖರ್ ಪಿ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.