ರಕ್ತ ಕ್ರಾಂತಿ

ರಕ್ತ ಪ್ರತಿಯೊಬ್ಬ ವ್ಯಕ್ತಿಯ ದೇಹದ ಜೀವಕೋಶಗಳ ಪೋಷಕ. ಹಿಮೋಗ್ಲೋಬಿನ್, ಆಮ್ಲಜನಕದಿಂದ ಕೂಡಿದ ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದರೆ ದೇಹದ ಆರೋಗ್ಯ ಏರುಪೇರಾಗುತ್ತದೆ. ಆರೋಗ್ಯಯುತ ದೇಹಕ್ಕೆ ರಕ್ತಕಣಗಳ ಸಂಖ್ಯೆ ಬಹಳ ಮುಖ್ಯ. ರಕ್ತಕಣಗಳ ಸಂಖ್ಯೆ ಕಡಿಮೆಯಾದರೆ ರಕ್ತಹೀನತೆಯಾಗುತ್ತದೆ.
ನಿತ್ಯ ಉತ್ತಮ ಪೌಷ್ಟಿಕ ಆಹಾರ ಸೇವಿಸಿದರೆ ರಕ್ತಹೀನತೆಯನ್ನು ತಡೆಗಟ್ಟಬಹುದು. ದೇಹದಲ್ಲಿ ಅಧಿಕ ರಕ್ತಕಣಗಳ ಸಂಖ್ಯೆಯ ಉತ್ಪಾದನೆ ಹಾಗೂ ರಕ್ತಚಲನೆಯನ್ನು ಸರಿದೂಗಿಸಬಹು. ಇದಕ್ಕೆ ಬೀಟ್‌ರೂಟ್, ಹಸಿ ತರಕಾರಿ, ಹಣ್ಣುಗಳು ಸಹಾಯಕ. ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಸೇವಿಸಿದರೆ ಆರೋಗ್ಯಯುತ ಬದುಕು ನಿಮ್ಮದಾಗುತ್ತದೆ. ಇಲ್ಲದಿದ್ದರೆ ವೈದ್ಯರೇ ದೇವರು ಎಂದು ಜೋತು ಬೀಳಬೇಕಾಗುತ್ತದೆ.
ಬೀಟ್‌ರೂಟ್
ಬೀಟ್‌ರೂಟ್‌ನಲ್ಲಿ ಕಬ್ಬಿಣದಂಶ ಅಧಿಕ. ಇದರಲ್ಲಿರುವ ಪ್ರೋಟಿನ್‌ಗಳು ರಕ್ತಕಣಗಳ ಉತ್ಪಾದನೆ ಮತ್ತು ರಕ್ತ ಚಲನೆಯನ್ನು ಹೆಚ್ಚಿಸುತ್ತವೆ. ರಕ್ತವನ್ನು ಉತ್ಪಾದಿಸುವುದಲ್ಲದೇ ರಕ್ತ ಶುದ್ಧೀಕರಣಕ್ಕೂ ಸಹಾಯಕ. ಬೀಟ್‌ರೂಟ್‌ನಿಂದ 'ವಿಟಮಿನ್ ಎ' ಹೇರಳವಾಗಿ ಲಭಿಸುತ್ತದೆ. ಕಡುಗೆಂಪು ಗಡ್ಡೆಯಿಂದ 'ವಿಟಮಿನ್ ಸಿ' ಪಡೆಯಬಹುದು. ನಿತ್ಯ ಊಟಕ್ಕೆ ಬೀಟ್‌ರೂಟ್ ಬಳಸಿದರೆ ಉತ್ತಮ ಆರೋಗ್ಯಕ್ಕೆ ಸಾಧ್ಯ.
ಹಸಿ ತರಕಾರಿ
ಹಸಿರು ತರಕಾರಿಗಳಾದ ಎಲೆಕೋಸು, ಹೂಕೋಸು, ಸಿಹಿಗೆಣಸು ತರಕಾರಿಗಳಲ್ಲಿ ಪೌಷ್ಟಿಕ ಅಂಶಗಳು ಹೇರಳವಿರುವುದರಿಂದ ದೇಹದ ಆರೋಗ್ಯಕ್ಕೆ ಉತ್ತಮ. ದೇಹದ ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ರಕ್ತ ಉತ್ಪಾದನೆಗೆ ಸಹಾಯಕಾರಿ. ಹಸಿ ತರಕಾರಿಯನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.
ಕಬ್ಬಿಣದ ಅಂಶವುಳ್ಳ ಆಹಾರ
ಕಬ್ಬಿಣದ ಅಂಶ ಕೊರತೆಯಾದರೆ ದೇಹದಲ್ಲಿ ಆಲಸ್ಯತನ ಹೆಚ್ಚುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಲು ಕಬ್ಬಿಣ ಅಂಶ ಅಗತ್ಯ. ಈ ಆಹಾರದಲ್ಲಿ ದೇಹಕ್ಕೆ ಬೇಕಾದ ಖನಿಜವನ್ನು ಒದಗಿಸುತ್ತದೆ. ಕಬ್ಬಿಣದ ಅಂಶವುಳ್ಳ ಆಹಾರವು ಮೂಳೆಗಳನ್ನು ಬಲಿಷ್ಠವಾಗಿಡುವುದಲ್ಲದೆ, ಆಮ್ಲಜನಕವನ್ನೂ ಒದಗಿಸುತ್ತದೆ. ರಕ್ತದಲ್ಲಿ ಕಡಿಮೆ ಕಬ್ಬಿಣದ ಅಂಶ ಇದ್ದರೆ ರಕ್ತಹೀನತೆಯಾಗುತ್ತದೆ. ಮಾಂಸ, ಮೀನು, ಮೆಂತ್ಯ, ಅಂಜೂರದ ಹಣ್ಣು, ಒಣದ್ರಾಕ್ಷಿ ಸೇವನೆಯಿಂದ ಕಬ್ಬಿಣದ ಅಂಶ ಹೆಚ್ಚಿಸಿಕೊಳ್ಳಬಹುದು.
ಬಾದಾಮಿ
ಬಾದಾಮಿ ಬೀಜಗಳಲ್ಲಿ ಅಧಿಕ ಕಬ್ಬಿಣ ಅಂಶವಿದೆ. ಇದು ದೇಹದಲ್ಲಿ ರಕ್ತವನ್ನು ಉತ್ಪಾದಿಸಲು ಮತ್ತು ಸರಾಗವಾಗಿ ಹರಿಯುವಿಕೆಯನ್ನು ಹೆಚ್ಚಿಸುತ್ತದೆ. ದಿನಕ್ಕೊಮ್ಮೆ ಬಾದಾಮಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಶೇ.6ರಷ್ಟು ಕಬ್ಬಿಣದ ಅಂಶವನ್ನು ಪಡೆಯಬಹುದು.
ಹಣ್ಣುಗಳು
ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಪೌಷ್ಟಿಕತೆ ಹೆಚ್ಚುತ್ತದೆ. ರಕ್ತಕಣಗಳೂ ವೃದ್ಧಿಸುತ್ತವೆ. ರಕ್ತಹೀನತೆಗೆ ಒಳಗಾದ ವ್ಯಕ್ತಿಗಳು ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಹಣ್ಣುಗಳು ಪೌಷ್ಟಿಕತೆ ಮಾತ್ರವಲ್ಲದೆ ರಕ್ತಕಣಗಳ ಸಂಖ್ಯೆ ಉತ್ಪಾದನೆಗೆ ಪರಿಣಾಮ ಬೀರುತ್ತದೆ. ಕಲ್ಲಂಗಡಿ, ಸೇಬು, ದ್ರಾಕ್ಷಿ, ಒಣದ್ರಾಕ್ಷಿ, ಸೇವಿಸುವುದರಿಂದ ದೇಹದಲ್ಲಿ ರಕ್ತ ಚಲನೆಯನ್ನು ಹೆಚ್ಚಿಸುತ್ತದೆ.
- ಮಂಜುನಾಥ. ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


