ಬೇವಿನಿಂದ ಬದುಕು ಬೆಲ್ಲ

'ಬೇಸಿಗೆಯಲ್ಲಿ ಬೇವಿನ ಮರ ತಂಪು' ಎಂಬ ಜಾನಪದ ಮಾತು ಬಹಳ ಫೇಮಸ್ಸು. ಬೇವು ಬಾಯಿಗೆ ಕಹಿಯಾಗಿದ್ದರೂ ದೇಹಕ್ಕೆ ಒಳಗೂ ಹೊರಗೂ ಆರೋಗ್ಯ ಪೂರ್ಣ ರಕ್ಷಣೆ ನೀಡುವ ಅಮೃತ. ಅಂಥ ಬೇವಿನ ಒಂದಿಷ್ಟು ವಿಶೇಷತೆಗಳು ಇಲ್ಲಿವೆ...
- ಸಾವಿರಾರು ವರ್ಷ ಆಯುಷ್ಯವೃದ್ಧಿ ಸಿದ್ಧಿ ಪಡೆದುಕೊಂಡು ಜೀವಿಸಿದ ಋಷಿ ಮಹರ್ಷಿಗಳು ನಿತ್ಯ ಬೇವು ಸೇವಿಸುತ್ತಿದ್ದರು.
- ನಿತ್ಯ ಬೇವು, ಎಲೆ-ರಸ ಸೇವಿಸಿದರೆ ವಿಷಪೂರಿತ ಕೀಟಗಳು ಕಚ್ಚಿದರೂ ವಿಷದ ಅಪಾಯವಾಗಲಾರದು.
- ನಿತ್ಯ ಎಳೆ ಬೇವಿನ ಕಾಂಡದಿಂದ ಹಲ್ಲುಜ್ಜಿದರೆ, ದಂತಕ್ಷಯ, ಒಸಡು, ಹುಣ್ಣು, ಬಾಯಿ ದುರ್ಗಂಧ ನಾಶವಾಗುವುದು.
- ನಿತ್ಯ ಬೇವಿನ ರಸ ಹಳೆ ಬೆಲ್ಲದೊಂದಿಗೆ ಸೇವಿಸಿದರೆ ಕುಷ್ಠ, ಕ್ಷಯ, ಕ್ಯಾನ್ಸರ್‌ಗಳು ಮಾಯವಾಗುತ್ತವೆ.
- ಚರ್ಮ ಕಾಯಿಲೆ, ತಲೆ ಹೊಟ್ಟುಗಳನ್ನು ದೂರ ಮಾಡುವುದಕ್ಕೂ ಬೇವಿಗೆ ಗೊತ್ತು.
- ಬೇವಿನ ರಸದಲ್ಲಿ ಅರಿಶಿನ ಪುಡಿ ಕಲಸಿ, ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ಮಾಯ.
- ಮೈ ತುರಿಕೆ- ಅಲರ್ಜಿ ಆಗಿದ್ದರೆ ಬೇವಿನ ರಸದಲ್ಲಿ ಉಪ್ಪು- ಲಿಂಬೆ ರಸ ಬೆರೆಸಿ ಲೇಪಿಸಿಕೊಂಡು ನಂತರ ಸ್ನಾನ ಮಾಡಬೇಕು.
- ತಲೆಹೊಟ್ಟು, ಶೀರು, ಹೇನು ಆಗಿದ್ದರೆ ಬೇವಿನೆಣ್ಣೆಯಲ್ಲಿ ಸೀಗೆಕಾಯಿ ಪುಡಿ ಬೆರೆಸಿ ರಾತ್ರಿ ತಲೆಗೆ ಮೆತ್ತಿಕೊಂಡು ಬೆಳಗ್ಗೆ ಸ್ನಾನ ಮಾಡಬೇಕು.
- ಬೇವಿನ ರಸದಲ್ಲಿ ಶ್ರೀಗಂಧದ ಪುಡಿ ಬೆರೆಸಿ ಮುಲಾಮಿನಂತೆ ಹಚ್ಚಿಕೊಂಡರೆ ಹುಣ್ಣುಗಳು ಕಣ್ಮರೆಯಾಗುತ್ತವೆ.
- ಕೀಟಗಳು ವಿಪರೀತವಾಗಿದ್ದರೆ ಹಸಿ ಬೇವಿನ ಎಲೆಗಳ ಹೊಗೆ ಹಾಕಬೇಕು.
- ನೆಗಡಿ- ಫ್ಲ್ಯೂ ಆಗಿದ್ದರೆ ಹಸಿ ಬೇವಿನೆಲೆಗಳ ಬಿಸಿ ನೀರಿನ ಸ್ಟೀಮ್ ತೆಗೆದುಕೊಂಡರೆ ಶಮನವಾದೀತು.
- ಚಳಿಗಾಲದಲ್ಲಿ ತುಟಿ- ಹಿಮ್ಮಡಿಗಳು ಬಿರುಕು ಬಿಟ್ಟಿದ್ದರೆ ಬೇವಿನ ರಸದಲ್ಲಿ ಗ್ಲಿಸರೀನ್ ಸೇರಿಸಿ ಲೇಪಿಸಿಕೊಳ್ಳಬೇಕು.ಟಿ
- ಶಂಕರ ಎಂ. ಮುತ್ತಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


