ಬಿಪಿಗೆ ಮನೆಮದ್ದು

ಬಿಪಿ ಈಗ ಎಲ್ಲರಿಗೂ ಕಾಮನ್. ಅದಕ್ಕೆ ವ್ಯಾಯಾಮ, ಯೋಗದೊಂದಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವು ಮದ್ದುಗಳಿವೆ. ತಿಳಿದುಕೊಳ್ಳಿ....
- ರಾತ್ರಿ ಮಲಗುವ ಮೊದಲು 6 ಬೆಳ್ಳುಳ್ಳಿ ಜಜ್ಜಿ ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಒಂದು ಹಿಡಿ ಒಣ ದ್ರಾಕ್ಷಿ, ಒಂದು ಲೋಟ ಹಾಲನ್ನು ಸೇರಿಸಿ. ಮಂದ ಉರಿಯ ಮೇಲಿಟ್ಟು ಕುದಿಸಿ ಇಳಿಸಿದ ನಂತರ ಬೆಳ್ಳುಳ್ಳಿಯನ್ನು ತೆಗೆದು ಆ ದ್ರಾಕ್ಷಿಯನ್ನು ತಿಂದು ಹಾಲನ್ನು ಕುಡಿಯಿರಿ. 21-42 ದಿನಗಳ ಇದರ ಸೇವನೆ ಅಗತ್ಯ.
- ಅಕ್ಕಿ ಅಥವಾ ಬತ್ತದ ಅರಳಿನ ತೆಳ್ಳನೆ ಗಂಜಿ ಮಾಡಿ ಅದರಲ್ಲಿ ತಲಾ ಒಂದು ಚಮಚ ಬೆಳ್ಳುಳ್ಳಿ, ನಿಂಬೆ, ಜೇನು ಸೇರಿಸಿ ದಿನಕ್ಕೆರಡು ವೇಳೆ 3-4 ವಾರ ಸೇವಿಸಿ.
- ರಾತ್ರಿ ಒಂದು ಲೋಟ ನೀರಿನಲ್ಲಿ 2 ಚಮಚ ಹಸಿ ಕೊತ್ತಂಬರಿ ಬೀಜದ ಚೂರ್ಣ ಹಾಕಿ ಮುಚ್ಚಿಡಿ. ಬೆಳಗ್ಗೆ ಅದನ್ನು ಚೆನ್ನಾಗಿ ಹಿಸುಕಿ, ಅದಕ್ಕೆ 7 ಗ್ರಾಂ ಕಲ್ಲು ಸಕ್ಕರೆ ಪುಡಿ ಸೇರಿಸಿ ನಿತ್ಯ ಬೆಳಗ್ಗೆ ಸೇವಿಸಿ.
- ನಿತ್ಯ ಬೆಟ್ಟದ ನೆಲ್ಲಿ ರಸ ಸೇವಿಸಿ.
- ಕಲ್ಲಂಗಡಿ ಬೀಜ ಮತ್ತು ಗಸಗಸೆ ಪುಡಿಯನ್ನು ಒಂದು ಟೀ ಚಮಚದಷ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸಿ
- ಒಂದು ಟೀ ಚಮಚದಷ್ಟು ಮೆಂತ್ಯ ಪುಡಿಯನ್ನು ನೀರಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ಎರಡು ಬಾರಿ 10-15 ದಿನಗಳವರೆಗೆ ಸೇವಿಸಿ.
- ಅರ್ಧ ಚಮಚ ಈರುಳ್ಳಿ ರಸಕ್ಕೆ ಜೇನುತುಪ್ಪ ಬೆರೆಸಿ 2 ಚಮಚದಷ್ಟು ಪ್ರಮಾಣದಲ್ಲಿ ಸೇವಿಸಿ.
- ದಾಸವಾಳ ಪುಷ್ಪದ 2-3 ದಳಗಳನ್ನು ಜಗಿದು ರಸ ಸೇವಿಸಿ.
- ತಾಜಾ ಪರಂಗಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳವರೆಗೆ ಸೇವಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


