ಆರೋಗ್ಯ-ಜೀವನಶೈಲಿ

ಸೌಂದರ್ಯ ಸಮರ

ಸೌಂದರ್ಯ ಕೇವಲ ಹೆಂಗಸರ ಆಸ್ತಿ ಅಲ್ಲ. ಗಂಡಸರೂ ಈಗ ಕನ್ನಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಪದೇ ಪದೇ...

ಸೌಂದರ್ಯ ಸಮರ
Published On :

ಸೌಂದರ್ಯ ಕೇವಲ ಹೆಂಗಸರ ಆಸ್ತಿ ಅಲ್ಲ. ಗಂಡಸರೂ ಈಗ ಕನ್ನಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಪದೇ ಪದೇ ಕೂದಲು ಸರಿಮಾಡಿಕೊಳ್ಳುವ, ಗಡ್ಡವನ್ನೊಮ್ಮೆ ನೇವರಿಸುವ, ಮೀಸೆ ತಿರುವಿಕೊಳ್ಳುವ ಅವರ ನಡವಳಿಕೆ ಈಗೀಗ ವಿಪರೀತ. ಇತ್ತೀಚಿನ ಅಧ್ಯಯನವೊಂದು ಪುರುಷರೂ ಸ್ತ್ರೀಯರಷ್ಟೇ ಸೌಂದರ್ಯಪ್ರಿಯರು ಎಂಬ ಸತ್ಯವನ್ನು ಹೊರಹಾಕಿದೆ.
ಹುಷಾರ್ ಪುರುಷರೇ...
    ಶೇ.80ರಷ್ಟು ಪುರುಷರಿಗೆ ಮಗುಚಿ ಮಲಗುವ ಅಂದರೆ ಹೊಟ್ಟೆ ಕೆಳಭಾಗದಲ್ಲಿ ಇರುವಂತೆ ಮಲಗುವ ಅಭ್ಯಾಸ. ಈ ವೇಳೆ ಮುಖಕ್ಕೆ ದಿಂಬು ಒತ್ತುವುದರಿಂದ ನೆರಿಗೆಗಳು ಹೆಚ್ಚುತ್ತವೆ.
    ಧೂಮಪಾನದಿಂದ ತುಟಿಗಳು ಕಪ್ಪಾಗುತ್ತವೆ. ಮುಖ ಸುಕ್ಕುಗಟ್ಟುತ್ತದೆ. ಆರೋಗ್ಯಕ್ಕೂ ಒಳ್ಳೆಯದಲ್ಲ.
    ಕೈಕಾಲಿನ ಉಗುರುಗಳನ್ನು ನೀಟಾಗಿ ಕತ್ತರಿಸದೇ ಇರುವುದು.
    ಅತಿಯಾದ ಮದ್ಯಪಾನ.
ನಿಮ್ಮ ಬ್ಯೂಟಿಗೆ...
ತ್ವಚೆಯ ಬಗ್ಗೆ ಆರೈಕೆ ಮಾಡಿದರಷ್ಟೇ ಸದಾ ಯವ್ವನಿಗರಾಗಿ ಕಾಣಲು ಸಾಧ್ಯ. ಇಲ್ಲದೇ ಹೋದರೆ ಮೂವತ್ತನೇ ವಯಸ್ಸಿಗೇ ಮುದುಕರಾಗಿರುವ ಲಕ್ಷಣ ಎದ್ದು ಕಾಣುತ್ತದೆ. ಮತ್ತೆ ಕೆಲವರಲ್ಲಿ ಸೌಂದರ್ಯವರ್ಧಕಗಳನ್ನು ಬಳಸಿದರೆ ನೋಡಿದವರು ಚುಡಾಯಿಸುತ್ತಾರೆ ಎನ್ನುವ ಅಂಜಿಕೆಯೂ ಇದೆ.
    ಶೇವ್ ಮಾಡಿ ನಂತರ ಮುಖಕ್ಕೆ ಜೇನು ಹಚ್ಚಿ. ಹತ್ತು ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆದರೆ ತ್ವಚೆ ಮೃದು ಮತ್ತು ಸುಂದರವಾಗಿ ಕಾಣುತ್ತದೆ.
    ಮನೆಯಿಂದ ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಲೋಷನ್ ಬಳಸಿ.
= ಹೆಲ್ಮೆಟ್ ಧರಿಸುವ ಮೊದಲು ಕರವಸ್ತ್ರ ಅಥವಾ ರುಮಾಲು ಬಳಸಿ.
ಮುಖದ ಸೌಂದರ್ಯಕ್ಕೆ...
    ಮೂವತ್ತು ಸಮೀಪಿಸುತ್ತಿದ್ದಂತೆ ಪ್ರತಿಯೊಬ್ಬ ಪುರುಷನೂ ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸಿಕೊಳ್ಳಬೇಕು. ನಿತ್ಯವೂ ಕ್ಲೆನ್ಸರ್ ಬಳಸಿದರೆ ಮುಖ ಬಿಸಿಲಿಗೆ ಟ್ಯಾನ್ ಆಗುವುದು ತಪ್ಪುತ್ತದೆ. ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್ ಅಥವಾ ಬಾದಾಮಿ ಎಣ್ಣೆ ಹಚ್ಚಿಕೊಳ್ಳುವುದು ಉತ್ತಮ. ನಿತ್ಯ ಶೇವಿಂಗ್ ಮತ್ತು ನಂತರ ಅಸ್ಟ್ರಿಜೆಂಟ್ ಬಳಕೆ ನಿಮ್ಮ ಗದ್ದವನ್ನು ನಯವಾಗಿಸುತ್ತದೆ.
    ನಿಮ್ಮ ಮುಖಕ್ಕೆ ಒಪ್ಪುವ ಮೀಸೆ ನಿಮ್ಮದಾಗಲಿ. ಅಗಲ ಮುಖವಾಗಿದ್ದರೆ ದಪ್ಪ ಮೀಸೆ ಒಪ್ಪುತ್ತದೆ. ಉದ್ದನೆಯ ಮುಖ ಇದ್ದರೆ ಮೀಸೆ ಇಲ್ಲದಿರುವುದೇ ಉತ್ತಮ. ದುಂಡು ಮುಖಕ್ಕೆ ಫ್ರೆಂಚ್ ಗಡ್ಡ ಓಕೆ.
= ಇದೆಲ್ಲದರೊಟ್ಟಿಗೆ ನಿತ್ಯ ಹಣ್ಣು, ಹಾಲು, ತರಕಾರಿ, ನಟ್ಸ್ ನಿಮ್ಮ ಆರೋಗ್ಯವನ್ನು ಉತ್ತಮ ಪಡಿಸುತ್ತವೆ. ಮೈ ತೂಕ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಪ್ರಯತ್ನ ಜಿಮ್‌ನಲ್ಲಿಯೇ ಇರಲಿ. ಅದು ಬಿಟ್ಟು ಯಾವ್ಯಾವುದೋ ಮಾತ್ರೆ, ಪೌಡರ್ ಬಳಕೆ ಒಳ್ಳೆಯದಲ್ಲ. ಕಾರ್ಬೋಹೈಡ್ರೆಡ್ ಇರುವ ಇರುವ ಆಹಾರಗಳ ಬಳಕೆ ಕಡಿಮೆ ಇರಲಿ. ವ್ಯಾಯಾಮ, ವಾಕ್, ಯೋಗ ನಿಮ್ಮ ದಿನದ ಆರಂಭದ ಆಹಾರದಷ್ಟೇ ಮುಖ್ಯವಾಗಿರಲಿ.

-ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.